https://koodanda.blogspot.com

ಬುಧವಾರ, ಡಿಸೆಂಬರ್ 2, 2015

ಕಾವೇರಿಯ ಸ್ಥಳ ಪುರಾಣ Kavery History...............

ಕಾವೇರಿಯ ಸ್ಥಳ ಪುರಾಣ



Pl watch my blogs 


Kodagu Darshini : http://koodanda.blogspot.com/
Kodagu Darshini (Kodagina Antaranga): https://koodagudarshini.blogspot.com/
Koodanda Ravi:
https://www.indiblogger.in › ...

Kaveri Dharshini : https://kaveridarashin.blogspot.com


  ಕೃತಯುಗದಲ್ಲಿ ಕಶ್ಯಪಮುನಿಗೆ ಇಬ್ಬರು ಪತ್ನಿಯರು. ದಿತಿ-ಅದಿತಿ ಎಂಬ ಹೆಸರಿನ ಇವರು ಗರ್ಭವತಿಯರಾಗಿ ದಿತಿಯು ದೇವಮಕ್ಕಳನ್ನು  ಅದಿತಿ ರಾಕ್ಷಸಮಕ್ಕಳನ್ನೂ ಹೆತ್ತರು. ಹುಟ್ಟು-ಸಾವುಗಳ ವಿಚಾರ ಇವರ ಮಧ್ಯೆ ಚಚರ್ಿತವಾಗಿ ಪರಿಹಾರ ಕಂಡುಕೊಳ್ಳುವ ಚಿಂತನೆಯಲ್ಲಿ ಇರುವಾಗ ಇದನ್ನು ಶ್ರೀಮನ್ನಾರಾಯಣ ಅರಿತು ದೇವಮಕ್ಕಳನ್ನು, ರಕ್ಕಸಮಕ್ಕಳನ್ನು  ಕರೆದು ಭೂಮಿಯಲ್ಲಿ ಎತ್ತರ ಶಿಖರವನ್ನು ಕಿತ್ತು ಏಳು ಸಮುದ್ರಗಳಾಚೆ, ಕೆಂಪು ಕಡಲಲ್ಲಿ ಮುಳುಗಿಸಿ ಕಡೆದರೆ, ಅಮೃತ ಪಡೆಯಬಹುದು. ಆ ಅಮೃತ ಕುಡಿದರೆ ಹುಟ್ಟು-ಸಾವುಗಳ ಸಮಸ್ಯೆಯಿಲ್ಲದೆ ನೆಮ್ಮದಿಯಿಂದ ಬಾಳಬಹುದು ಎಂದನು.

ಈ ವಿಚಾರವು ಸಂತಸಕ್ಕೆ ಕಾರಣವಾಗಿ ದೇವಮಕ್ಕಳು-ರಕ್ಕಸರು ಹಾಲ್ಗಡಲನ್ನು ಕಡೆದರು. ಪರಿಣಾಮ ಧನ್ವಂತರಿ ಹುಟ್ಟಿ ಕಡಲಿಂದ ಮೇಲೆದ್ದು ಚಿನ್ನದ ಕಲಶದಲ್ಲಿ ಅಮೃತವನ್ನು ತಂದಿಟ್ಟಾಗ ದೇವತೆಗಳೂ-ರಕ್ಕಸರೂ ತಮಗೆ-ತಮಗೆಂದು ಕದನಕ್ಕಿಳಿದರು. ರಕ್ಕಸರು ಗೆದ್ದರು. ಕಲಶವನ್ನು ಹೊತ್ತು ರಾಕ್ಷಸರು ಹೊರಟಾಗ ಆತಂಕಗೊಂಡ ಶ್ರೀನಾರಾಯಣ ಮೋಹಿನಿ ರೂಪ ತಳೆದು ನಿಂತನು. ಅದೇ ವೇಳೆಗೆ ಲಕ್ಷ್ಮಿದೇವಿಯೂ ಸಹ ಪಾರ್ವತಿ ದೇವಿಯ ಅವತಾರದ ಲೋಪಮುದ್ರೆಯನ್ನು ಮೋಹಿನಿ ಜೊತೆ ಕಳುಹಿಸಿದಳು.
                                          ಭಾಗಮಂಡಲದ ಭಗಂಡೇಶ್ವರ ದೇಗುಲದ ಮುಂಭಾಗ 

ಚೇರಂಗಾಲದ ಕನ್ನಿಕುಂಡ

ಈ ಇಬ್ಬರು ಸುಂದರಿಯರನ್ನು ಕಂಡ ರಕ್ಕಸರು ತಮಗೆ ತಮಗೆಂದು ಅವರಿಗೆ ಬೆನ್ನುಬಿದ್ದು ಅಮೃತವನ್ನು ಮೋಹಿನಿಗಿತ್ತರು. ಮೋಹಿನಿ ರೂಪದಲ್ಲಿದ್ದ ಶ್ರೀಮನ್ನಾರಾಯಣ ಅಮೃತವನ್ನು ದೇವತೆಗಳಿಗೆ ಬಡಿಯಹತ್ತಿದ. ಇದರ ಒಳಸುಳಿವನ್ನು ಅರಿತ ರಕ್ಷಸನೊಬ್ಬ ದೇವತೆಗಳ ಸಾಲಿನಲ್ಲಿ ಬಂದು ಕುಳಿತು ಅಮೃತವನ್ನು ಪಡೆದು ಸೇವಿಸುತ್ತಿದ್ದಂತೆ ನಭೋಮಂಡಲದಿಂದ ಚಂದ್ರನ ಮೂಲಕ ಈ ವಿಚಾರ ಆಕಾಶವಾಣಿಯಾಗುತ್ತದೆ. ವಿಚಾರ ತಿಳಿಯುತ್ತಿದ್ದಂತೆ ಶ್ರೀಮನ್ನಾರಾಯಣ ತನ್ನ ಚಕ್ರಾಯುಧದಿಂದ ಇನ್ನೇನು  ಅಮೃತ ಪಡೆದು ತನ್ನ ಬಾಯಿಗೆ ಇರಿಸಿಕೊಂಡಿದ್ದ ರಕ್ಕಸನ ಕೊರಳು ಕತ್ತರಿಸುತ್ತಾನೆ. ರಕ್ಕಸ ಮಕ್ಕಳು ದೇವಮಕ್ಕಳನ್ನು ಬೆನ್ನತ್ತಲಾರಂಭಿಸಿದಾಗ ಮೋಹಿನಿಯಾದಿಯಾಗಿ ದೇವಮಕ್ಕಳು ಅಂತಧರ್ಾನರಾಗುತ್ತಾರೆ. ಲೋಪಮುದ್ರೆ ಅಲ್ಲೇ ಉಳಿದು ಬಿಡುತ್ತಾಳೆ. ಅವಳನ್ನು ಬ್ರಹ್ಮದೇವ ತನ್ನ ಮಾನಸ ಪುತ್ರಿಯಾಗಿ ಸ್ವೀಕರಿಸುತ್ತಾನೆ.

ಮುಂದೆ ಕಾವೇರನೆಂಬ ಬ್ರಾಹ್ಮಣನು ಬ್ರಹ್ಮಗಿರಿಯಲ್ಲಿ ವಾಸವಾಗಿದ್ದು ತನಗೆ ಸಂತಾನದ ಕುರಿತು ಬ್ರಹ್ಮದೇವನಲ್ಲಿ ಉಗ್ರ ತಪಸ್ಸನ್ನು ಮಾಡುತ್ತಾನೆ. ಈ ಬ್ರಾಹ್ಮಣನ ತಪಕ್ಕೆ ಒಲಿದ ಬ್ರಹ್ಮದೇವನು ಪ್ರತ್ಯಕ್ಷನಾಗಿ 'ನೀನು ಪೂರ್ವಕಾಲದಲ್ಲಿ ಸಂತಾನ ಪ್ರಾಪ್ತಿಗೆ ಬೇಕಾದ ರೀತಿಯ ಧರ್ಮವನ್ನು ಮಾಡಿಲ್ಲ. ಆದರೂ, ನಿನ್ನ ತಪಸ್ಸಿಗೆ ಮೆಚ್ಚಿ ನನ್ನ ಮಾನಸ ಪುತ್ರಿಯಾದ  ಲೋಪಮುದ್ರೆಯನ್ನು ನೀಡುತ್ತೇನೆ' ಎಂದು ಹೇಳಿದ. ಅದರ ಅನುಸಾರ ಈಗಿನ ಚೇರಂಗಾಲದ ಕನ್ನಿಕುಂಡ ಎಂಬ ಸ್ಥಳದಲ್ಲಿ ಕಾವೇರ ಲೋಪಮುದ್ರೆಯನ್ನು ತನ್ನ ಮಗಳಾಗಿ  ಸ್ವೀಕರಿಸಿದ.
                                                         ಭಾಗಮಂಡಲದಲ್ಲಿ ಕಾವೇರಿ ಸಂಗಮದ  ಒಂದು ನೋಟ


ಹೀಗೆ ದಿವ್ಯಾಂಶಳಾದ ಲೋಪಮುದ್ರೆಯ ಸೌಂದರ್ಯ ಯೋಗ್ಯತೆಗಳನ್ನು ಗ್ರಹಿಸಿದ ಕಾವೇರ ಸಕಲ ರೀತಿ ಸಂತುಷ್ಟನಾಗಿದ್ದ .ಈ ಹಂತದಲ್ಲಿ ಲೋಪಮುದ್ರಾದೇವಿಯು 'ತಂದೆಯೇ ನಾನು ಲೋಕಕಲ್ಯಾಣಕ್ಕಾಗಿ ನದಿರೂಪವಾಗಿ ಸಾಧನೆಗೈದು ಹರಿದು ಸಮುದ್ರವನ್ನು ಸೇರುತ್ತೇನೆ. ಜನರು ನನ್ನನ್ನು ಬ್ರಹ್ಮಪುತ್ರಿ ಎಂದೂ, ಮಾಯೆ ಎಂದೂ, ನಿಮ್ಮ ಪುತ್ರಿ ಕಾವೇರಿ ಎಂದು ಕರೆಯುವರು.  ಅಂತೆಯೇ,  ಜನರ ಪಾಪಗಳನ್ನು ನಾಶಮಾಡುವವಳಾಗಿ ಲೋಕ ಪ್ರಸಿದ್ಧಿಯಾಗುತ್ತೇನೆ' ಎಂದಳು.

ನಂತರ ಕವೇರ ಮುನಿಯು ತನ್ನ ಮಾನಸಪುತ್ರಿ ಲೋಪಮುದ್ರೆ ಅನುಗ್ರಹಕ್ಕೆ ಪಾತ್ರನಾಗಿ ದೇಹತ್ಯಾಗ ಮಾಡಿ ತನ್ನ ಪತ್ನಿ ಸಹಿತ ಬ್ರಹ್ಮಲೋಕ ಸೇರಿದ. ಮುಂದೆ ಈ ದೇವಕುವರಿ ಲೋಪಮುದ್ರೆ ಲೋಕಕಲ್ಯಾಣ ಸಾಧಿಸಲು ಶಿವನನ್ನು ಕುರಿತು ಕಠೋರ ತಪಸ್ಸನ್ನಾಚರಿಸಿ, ಬ್ರಹ್ಮಷರ್ಿಗಳೊಂದಿಗೆ ಬ್ರಹ್ಮಗಿರಿಯಲ್ಲಿ ನೆಲೆಸಿದಳು. ದಿವ್ಯಕಾಂತಿ ತಪದ ತೇಜಸ್ಸಿನಿಂದ ಲೋಪಮುದ್ರೆ ಕಾವೇರಿ ಬ್ರಹ್ಮಗಿರಿಯಲ್ಲಿರುವಾಗ ಋಷಿವರ್ಯರಾದ ಅಗಸ್ತ್ಯಮುನಿಗಳು ಉತ್ತರ ಭಾರತದಿಂದ ದಕ್ಷಿಣದ ಬ್ರಹ್ಮಗಿರಿಗೆ ಬಂದರು.

ನನ್ನನ್ನು ಕ್ಷಣವೂ ಬಿಟ್ಟಿರಬಾರದು.

ಬ್ರಹ್ಮಋಷಿಗಳ ತಪೋಭೂಮಿಯಾದ ಬ್ರಹ್ಮಗಿರಿಯಲ್ಲಿ ವಸಿಷ್ಠಾಧಿ ಮಹಷರ್ಿಗಳ ಭೇಟಿ ಮಾಡಿದ ಅಗಸ್ತ್ಯರು-ಋಷ್ಯಾಶ್ರಮದ ಮೂಲ ಶಕ್ತಿಯೇ ಎಂಬಂತಿದ್ದ ಈ ಲೋಪಮುದ್ರಾ-ಕಾವೇರಿಯನ್ನು ಕಂಡು ಹಷರ್ಿತರಾದರು. ತ್ರಿಕಾಲ ಜ್ಞಾನಿಗಳಾದ ಅಗಸ್ತ್ಯರು ಕಾವೇರಿಯ ಜನ್ಮದ ಮೂಲ ಉದ್ದೇಶವರಿತು ವಿವಾಹವಾಗಲು ಬಯಸಿದರು. ಮಹಷರ್ಿಗಳ ಬಯಕೆಗೆ ಕಾವೇರಿದೇವಿ ಒಪ್ಪಿ 'ನನ್ನನ್ನು ಕ್ಷಣವೂ ಬಿಟ್ಟಿರಬಾರದು. ಯಾವ ಕಾಲಕ್ಕೂ ಉಪೇಕ್ಷಿಸಿ ಹೊರಟು ಹೋಗಬಾರದೆಂದು, ಹೋದರೆ ತಾನು ನದಿಯಾಗಿ ನಮುದ್ರ ಸೇರುತ್ತೇನೆ' ಎಂದು ಹೇಳಿದಳು. ಈ ನಿಬಂದನೆಗೆ ಅಗಸ್ತ್ಯರು ಸಮ್ಮತಿಸಿದರು. ಅದರಂತೆ, ಋಷ್ಯಾಶ್ರಮದ ಪವಿತ್ರ ಸಾನಿಧ್ಯದಲ್ಲಿ ದೇವ ದೇವತೆಗಳ ಸಮ್ಮುಖದಲ್ಲಿ ಶ್ರೀ ಅಗಸ್ತ್ಯ-ಕಾವೇರಿಯರ ಮದುವೆ ವೇದೋಕ್ತ ರೀತಿ ನೇರವೇರಿತು.

ನಂತರ ಕೆಲ ಸಮಯ ನೂತನ ದಂಪತಿಗಳು ಗೃಹಸ್ಥಾಶ್ರಮ ಜೀವನ ಸಾಗಿಸಿದರು. ಹೀಗಿರುವಾಗ ಒಂದು ದಿನ ಬ್ರಾಹ್ಮೀಮುಹೋರ್ತದಲ್ಲಿ ಮಹಷರ್ಿ ಅಗಸ್ತ್ಯರು ಬ್ರಹ್ಮಗಿರಿಯ ಉತ್ತರ ತಪ್ಪಲಿನ ಕನ್ನಿಕೆ ನದಿಯ ತೀರಕ್ಕೆ ಸ್ನಾನಕೆಂದು ಹೋದರು. ಅಲ್ಲಿಗೆ ಹೋಗುವ ಮುನ್ನ ತಮ್ಮ ಪವಿತ್ರವಾದ ಕಮಂಡಲದಲ್ಲಿ ಕಾವೇರಿಯನ್ನು ಆವಾಹನೆ ಮಾಡಿ, ತಮ್ಮ ಶಿಷ್ಯರಿಗೆಲ್ಲಾ 'ಜಾಗ್ರತೆಯಾಗಿ ನೋಡಿಕೊಳ್ಳಿ' ಎಂದು ಹೇಳಿ ತೆರಳಿದರು.
ಭಾಗಮಂಡಲದಲ್ಲಿ ಕಾವೇರಿ ಸಂಗಮ


ಕಾವೇರಿ ಗುಪ್ತಗಾಮಿನಿಯಾಗಿ
ಲೋಕಪಾವನೆಯಾಗಿ ನದಿಯಾಗಿ ಇಳೆಯಲ್ಲಿ ಪ್ರವಹಿಸಬೇಕಾದ ಮಹಾತಾಯಿ ಕಾವೇರಿ, ಇದೇ ಸಂದರ್ಭ ನಿರೀಕ್ಷಿಸುತ್ತಿದ್ದಳೇನೋ ಎಂಬಂತೆ ತನ್ನ ನಿಬಂಧನೆಯನ್ನು ಅಗಸ್ತ್ಯರು ಉಲ್ಲಂಘಿಸಿದರೆಂದು ಕಮಂಡಲುವಿನಿಂದ ಹೊರಬಂದಳು. ಪಕ್ಕದ ಬ್ರಹ್ಮಕುಂಡಿಕೆಯನ್ನು ಸೇರಿ ಅಲ್ಲಿಂದ ಜಲರೂಪಿಣಿಯಾಗಿ ನದಿಯಾಗಿ ಹರಿಯ ತೊಡಗಿದಳು. ಇದನ್ನು ನೋಡಿದ ಅಗಸ್ತ್ಯರ ಶಿಷ್ಯ ಗುರುವಿನ ಆಜ್ಞೆಯ ಉಲ್ಲಂಘನೆಯಾಗುತ್ತದೆ ಎಂದು ಮನಗಂಡು ಕೂಡಲೇ ಕಾವೇರಿ ಮುಂದೆ ಹರಿಯದಂತೆ ಅವಳ ಸುತ್ತಲು ತನ್ನ ಮಂತ್ರ ಶಕ್ತಿಯಿಂದ ತಡೆ ಕಟ್ಟಿದ. ಈ ತಡೆಯಿಂದ ತಪ್ಪಿಸಿಕೊಳ್ಳಲು ಕಾವೇರಿ ಗುಪ್ತಗಾಮಿನಿಯಾಗಿ ಹರಿದು ಅಲ್ಲಿಂದ ತಪ್ಪಿಸಿಕೊಂಡು ಸ್ವಲ್ಪ ದೂರದ ನಂತರ ಗೋಚರಿಸಿದಳು.
 ನಾಗತೀರ್ಥ ಎಂಬ ಹೆಸರು?
ಈ ವಿಚಾರವನ್ನು ಅರಿತ ಅಗಸ್ತ್ಯ ಋಷಿ ಕಾವೇರಿಯನ್ನು ತಡೆಯುವ ಸಲುವಾಗಿ ದೊಡ್ಡ ಮೀನಿನ ರೂಪದಲ್ಲಿ ಕಾವೇರಿಗೆ ಇಳಿದು ಆಕೆಯನ್ನು ನುಂಗಿಬಿಡುತ್ತಾನೆ. ಆಗ ಮೀನಿನ ಬಾಯಿಯಿಂದ ಪ್ರವೇಶಿಸಿದ ಕಾವೇರಿ ಗುಹ್ಯಭಾಗದಿಂದ ಹೊರಹರಿಯುತ್ತಾಳೆ. ನದಿಯಾಗಿ ಹರಿಯುವುದು ಬೇಡ ಶರೀರಧಾರಿಯಾಗಿ ನನ್ನೊಂದಿಗೆ ಪತ್ನಿಯಾಗಿ ಬಾಳು ಎಂದು ಪರಿಪರಿಯಾಗಿ ಕೇಳಿಕೊಂಡರೂ ಲೆಕ್ಕಿಸದೆ  ಕಾವೇರಿಯು, ಲೋಕ ಕಲ್ಯಾಣದ ಉದ್ದೇಶದಿಂದ ನಾನು ನದಿರೂಪ ತಳೆದು ಹೋಗುತ್ತಿರುವುದಾಗಿ ಸ್ಪಷ್ಟವಾಗಿ ಹೇಳುತ್ತಾಳೆ. ಅಗಸ್ತ್ಯರು ಶಿಷ್ಯರನ್ನೊಳಗೊಂಡು ಕಾವೇರಿಯನ್ನು ಹಿಂಬಾಲಿಸುತ್ತಾರೆ. ಕಾವೇರಿಯು ನದಿಯಾಗಿ ಕೆಲಮೈಲುಗಳಷ್ಟು ದೂರ ಹರಿಯುತ್ತಿದ್ದಂತೆ ಅಗಸ್ತ್ಯರ ಬೆಂಬಲಕ್ಕೆ ಬಂದ  ನಾಗಲೋಕದವರು ಕಾವೇರಿಯ ಹಾದಿಗೆ ಅಡ್ಡಬಂದು ಕಾವೇರಿಯನ್ನು ಸ್ತುತಿಸಿ, ನದಿಯಾಗಿ ಹರಿಯದೆ ಹಾಗೆ ಉಳಿಯಲು ಹೇಳುತ್ತಾರೆ. ಅವರನ್ನು ಸಮಾಧಾನಿಸಿದ ಕಾವೇರಿ ಮುಂದೆ ಭಾಗಮಂಡಲ ಕ್ಷೇತ್ರದಲ್ಲಿ ಕನ್ನಿಕೆ ಮತ್ತು ಸುಜ್ಯೋತಿ ನದಿಗಳ ಜೊತೆ ಸೇರಿ ಮುಂದೆ ಹರಿಯುತ್ತಾಳೆ. ಹೀಗೆ ನಾಗಲೋಕದವರು ತಡೆದ ಸ್ಥಳಕ್ಕೆ ನಾಗತೀರ್ಥ ಎಂಬ ಹೆಸರು ಬಂತು.
 ಅಗಸ್ತ್ಯ ಶಾಪ

ಮುಂದೆ ಕೆಲವು ಮೈಲುಗಳು ಸಾಗಿ ಬಲಮುರಿ ತಲುಪಿದಾಗ ಅಲ್ಲಿ ಕೊಡಗನ್ನು ಆಳುತ್ತಿದ್ದ ಚಂದ್ರವರ್ಮ ರಾಜ ತಮ್ಮ ಪರಿವಾರವರು ಮತ್ತು ಕಾವೇರಿಯ ಬಗ್ಗೆ ಭಕ್ತಿ ಹೊಂದಿದ್ದವರು ಎದುರುಗೊಂಡರು. ಅಲ್ಲೂ ಹಿಂಬಾಲಿಸಿ ಬಂದ ಅಗಸ್ತ್ಯರು ಮತ್ತವರ ವೃಂದದವರು ಅಂದಿನ ಕೊಡವ ಜನಾಂಗದ ಪ್ರಮುಖರು ಸೇರಿ ಅಗಸ್ತ್ಯ ಮತ್ತು ಕಾವೇರಿ ನಡುವಿನ ವಿವಾದವನ್ನು ಪರಿಹರಿಸಲು ಪ್ರಯತ್ನಿಸುತ್ತಾರೆ. ಈ ವಿಶೇಷವನ್ನು ನೋಡಲು ಶಿವ, ವಿಷು,್ಣ ಗಣಪತಿ, ಸುಬ್ರಹ್ಮಣ್ಯ ಸಮೇತ ಬಂದು ನೆರೆಯುತ್ತಾರೆ. ಒಂದರೆ ಘಳಿಗೆಯೂ ಬಿಟ್ಟಿರಲಾರೆ ಎಂದು ಮಾತುಕೊಟ್ಟಿದ್ದ ಮುನಿ  ಮಾತು ತಪ್ಪಿದ್ದರಿಂದ ಕಾವೇರಿ ಮಾಡಿದ್ದು ಸರಿ ಎಂದು ನ್ಯಾಯನಿರ್ಣಯ ಮಾಡಿದ ಕೊಡವರ ಮೇಲೆ ಕೋಪಗೊಂಡ ಅಗಸ್ತ್ಯರು ನಿಮ್ಮ ನಡುವೆ ಒಗ್ಗಟ್ಟು ಮುರಿದುಹೋಗಲಿ ಎಂದು ಶಾಪವಿತ್ತರು. ಈ ಶಾಪ ವಿಮೋಚನೆಗಾಗಿ ಕೊಡವರು ವರ್ಷಗಳ ಹಿಂದೆ ಭಾಗಮಂಡಲದಲ್ಲಿ ಶಾಂತಿ ಹೋಮವನ್ನೂ  ನಡೆಸಿರುವುದು ಕಾವೇರಿ ಪುರಾಣದ ಬಗ್ಗೆ ಕೊಡವರು ಇಟ್ಟಿರುವ ನಂಬಿಕೆಗೆ ಸಾಕ್ಷ್ಷಿಯಾಗಿದೆ.

ಸದಾ ಸುಖಿಗಳಾಗಿರಿ.
ಕಾವೇರಿ ಅಗಸ್ತ್ಯರ ನಡುವಿನ ವಿವಾದದ ನ್ಯಾಯತೀಮರ್ಾನ ಸಂದರ್ಭದಲ್ಲಿ ಅಗಸ್ತ್ಯರ ಪರವಹಿಸಿದ ಹೆಚ್ಚಿನ ಸಂಖ್ಯೆಯಲ್ಲಿದ್ದ ಅಮ್ಮ ಕೊಡವರಿಗೆ ನೂರು ಇರುವ  ನಿಮ್ಮ ಸಂತತಿ ಒಂದಕ್ಕಿಳಿಯಲಿ  ಎಂದೂ, ಒಂದಿರುವ   ಕೊಡವರು ನೂರು ಆಗಲಿ ಎಂದು ವರನೀಡುತ್ತಾಳೆ. `ಕಾವೇರಿಯ ಹರಿಯುವಿಕೆಯ ರಭಸಕ್ಕೆ ನೆರೆದಿದ್ದ ಸ್ತ್ರೀಯರ ಸೀರೆ ನೆರಿಗೆಯು ಹಿಂಬದಿಗೆ ಸರಿದು ಹೋಯಿತು. ಆಗ ಅಲ್ಲಿ ಸೇರಿದ್ದ ತನ್ನ ಪತಿ ಅಗಸ್ತ್ಯರೂ ಸೇರಿದಂತೆ ಎಲ್ಲರನ್ನು ಉದ್ದೇಶಿಸಿ ಕಾವೇರಿಮಾತೆ ಹೀಗೆ ಹೇಳಿದಳು. ತಾನು ಲೋಕೋದ್ಧಾರಕ್ಕೆ ನದಿಯಾಗಿ ಹೋಗುತ್ತಿದ್ದೇನೆ. ದ್ವಿರೂಪ ತಾಳಿ ಒಂದು ರೂಪದಲ್ಲಿ ಲೋಪಮುದ್ರೆಯಾಗಿ ತನ್ನ ಪತಿ ಅಗಸ್ತ್ಯರೊಂದಿಗೆ ಉಳಿದು, ಇನ್ನೊಂದು ರೂಪ ಕಾವೇರಿ ನದಿಯಾಗಿ ಲೋಕೋಪಕಾರವನ್ನು ಮಾಡುತ್ತಾ ನಮುದ್ರವನ್ನು ಸೇರುವೆ. ಸತ್ಯ-ಧರ್ಮ, ಪ್ರೇಮ, ಭಕ್ತಿ, ಶ್ರದ್ಧೆಗಳಿಂದ ಸದಾ ಸುಖಿಗಳಾಗಿರಿ. ಈ ದಿನ ಇಲ್ಲಿ ಹಿಂದೆ ಸರಿದು ಹೋದ ಸೀರೆ ನೆರಿಗೆಗಳು ನಾನು ನದಿ ರೂಪ ತಳೆದು ಹರಿದುದರ ನೆನಪಿಗೆ ಮುಂದೆಯು ಹೀಗೆ ನಿತ್ಯಾಚರಣೆಯಲ್ಲಿ ನೆರಿಗೆ ಕ್ರಮವಾಗಿ ಅನುಸರಿಸಿ ಎಂದು ಕೊಡವ ಮಹಿಳೆಯರಿಗೆ ಹರಸಿದಳು.
ವರ್ಷಕ್ಕೊಮ್ಮೆ ಸೂರ್ಯ ತುಲಾರಾಶಿಗೆ ಪ್ರವೇಶಿಸುವ ತುಲಾಸಂಕ್ರಮಣ ಪುಣ್ಯಕಾಲದಲ್ಲಿ ಗಂಗಾದಿ ಸಮಸ್ತ ಪುಣ್ಯ ತೀರ್ಥಗಳಿಂದ ನಾನು ಚಲಿಸುವವಳಾಗುತ್ತೇನೆ. ನಾನು ಜನ್ಮವೆತ್ತ ದಿನದಂದು ಬಂದು ನನ್ನಲ್ಲಿ ತೀರ್ಥಸ್ನಾನ ಮಾಡುವವರು ತಮ್ಮ ಸಕಲ ಪಾಪದೋಷಗಳಿಂದ ಮುಕ್ತರಾಗುವರು ಎಂದು ಅಭಯ ನೀಡಿ ಅಲ್ಲಿದ್ದವರನ್ನು ಹರಸಿ ನದಿರೂಪದಲ್ಲಿ ಮುಂದೆ ಹರಿಯುತ್ತಾಳೆ.  ಪತಿ ಅಗಸ್ತ್ಯರು ಸಹ ಸತಿ ಕಾವೇರಿಯನ್ನು ಹರಸಿ ಅವಳ ಮೂಲಕ ಲೋಕ ಕಲ್ಯಾಣ ಉಂಟಾಗಲಿ ಎಂದರು.

ಕಾವೇರಿಯು ಬಲಮುರಿಯಿಂದ ಹೊರಟು ಗುಹ್ಯ, ಕುಶಾಲನಗರ, ರಾಮಸ್ವಾಮಿ ಕಣಿವೆ, ಶಿರಂಗಾಲ, ರಾಮನಾಥಪುರ, ಚುಂಚನಕಟ್ಟೆ, ಕನ್ನಂಬಾಡಿ ಪ್ರದೇಶಗಳನ್ನು ಹಾದು ಪಶ್ಚಿಮವಾಹಿನಿಯಾಗಿ ಶ್ರೀರಂಗಪಟ್ಟಣ ಹತ್ತಿರ ಹರಿದು, ಪುನಃ ಪೂವರ್ಾಭಿಮುಖವಾಗಿ ಸಾಗಿ ಶ್ರೀರಂಗಪಟ್ಟಣವನ್ನು ಸೇರಿದಳು. ಮುಂದೆ ತಿರುಮಕೂಡಲು, ತಲಕಾಡು, ಮೆಟ್ಟೂರು, ಶ್ರೀರಂಗಂ, ತಿರುಚ್ಚಿ, ಕುಂಭಕೋಣಂ ಇತ್ಯಾದಿ ಊರುಗಳನ್ನು ದಾಟಿ ಪಂಪುಹಾರ್ನಲ್ಲಿ ಬಂಗಾಳ ಕೊಲ್ಲಿಯನ್ನು ಸೇರುತ್ತಾಳೆ.

ಕೊಡಗಿನಲ್ಲಿ ಕಾವೇರಿಯೊಂದಿಗೆ ಅಂತರ್ಗತವಾಗುವ ಉಪ ನದಿಗಳಾದ ಕನ್ನಿಕೆ ಮತ್ತು ಸ್ಮಜ್ಯೋತಿ ಪ್ರಮುಖವಾದವು. ಈ ನದಿಗಳಿಗೆ ತಮ್ಮದೇ ಆದ ಪೌರಣಿಕತೆ ಇದೆ. ಸುಜ್ಯೋತಿಯು ಕನ್ನಿಕೆಯಂತೆ ಕಾವೇರಿಯನ್ನು ನದಿ ರೂಪಳಾಗಿ ಹರಿದು ಸೇರಿ ಸಂಗಮಗೊಳ್ಳುತ್ತಾಳೆ.  ಗಂಗಾ, ಯಮುನಾ ಹಾಗೂ ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಸರಸ್ವತಿ ನದಿ ಹೇಗೆ ಅಜ್ಞಾತವಾಗಿ ಸೇರುವುದೋ(ಸಂಗಮ) ಹಾಗೆಯೇ ಕನ್ನಿಕಾ-ಕಾವೇರಿ ನದಿಗಳ ಜೊತೆ ಸುಜ್ಯೋತಿಯ ಸಂಗಮವಾಗಿರುತ್ತದೆ.

ಕನ್ನಿಕೆಯು ಪೌರಣಿಕವಾಗಿ ಇಂದ್ರ ಪರಿಚಾರಿಕೆಯಾದ ಯಕ್ಷಶ್ರೀ. ಸುಯಜ್ಞನೆಂಬ ಬ್ರಾಹ್ಮಣ ಶ್ರೀನಾರಾಯಣನನ್ನು ಕುರಿತು ತಪಸ್ಸು ಮಾಡಿದ. ಭಕ್ತನ ತಪಕ್ಕೆ ಒಲಿದ ಭಗವಂತ ಶ್ರೀಯಜ್ಞನಿಗೆ ತನ್ನಂಶದಿಂದ ಉತ್ಪನ್ನಳಾದ ಕನ್ನಿಕೆ ಸ್ಮಜ್ಯೋತಿ ಎಂಬುವವಳನ್ನು ಕೊಟ್ಟು ಬ್ರಹ್ಮಗಿರಿಯ ಬಳಿ ಗಜರಾಜಗಿರಿಗೆ ತೆರಳಿ ಪುತ್ರಿಯೊಡನೆ ಇರು ಎಂದು ಹೇಳಿ ಅದೃಶ್ಯನಾದ. ಸುಯಜ್ಞನು ಕುವರಿ ಸ್ಮಜ್ಯೋತಿ ಜೊತೆ ಗಜರಾಜಗಿರಿಗೆ ಬಂದ ಅಲ್ಲಿ ಶುಭಕಾರಿಣಿ ಯಕ್ಷೀಣಿಯಾದ ಕನ್ನಿಕೆ ಜೊತೆ ಪುತ್ರಿ ಸ್ಮಜ್ಯೋತಿಯನ್ನು ಕೂಡಿ ಶುದ್ಧ ಚಾರಿತ್ರ್ಯವಂತನಾಗಿ, ತಪೋನಿಷ್ಠನಾಗಿದ್ದನು. ಕೆಲ ಕಾಲದ ನಂತರ ಮಹಾವಿಷ್ಣುವಿನ ದರ್ಶನ ಲಾಭ ಪಡೆದು ವೈಕುಂಠಕ್ಕೆ ತೆರಳಿದ. ತಂದೆಯ ನಿರ್ಗಮನದ ನಂತರ ಪುತ್ರಿ ಸ್ಮಜ್ಯೋತಿ ಭಗವಂತನ ದರ್ಶನಕ್ಕೆ ವಿಶೇಷ ತಪ ಮಾಡುತ್ತಾಳೆ.

ದೇವಲೋಕದ ಒಡೆಯ ದೇವೆಂದ್ರನು ಅಲ್ಲಿಗೆ ಬಂದ ಸುಜ್ಯೋತಿಯನ್ನು ಮದುವೆಯಾಗ ಬಯಸಿದ ಅವನು ಸ್ಮಜ್ಯೋತಿಯನ್ನು ಕುರಿತು ಸಾವಿರ ವರ್ಷಗಳ ನಂತರ ನದಿಯಾಗಿ ಹೋಗು ಅಲ್ಲಿಯವರೆಗೆ ನನ್ನೊಂದಿಗೆ ಪತ್ನಿಯಾಗಿ ಬಾಳು ಎಂದು ಹೇಳಿದನು. ಇಂದ್ರನ ಬಯಕೆಯಿಂದ  ಬೇಸರಗೊಂಡ ಸುಜ್ಯೋತಿ ಕನ್ನಿಕೆಯೊಂದಿಗೆ ಮಾತನಾಡಿ, ಆಕೆಯನ್ನು ಒಪ್ಪಿಸಿ ಅವಳೊಂದಿಗೆ ಸೇರಿ ನದಿ ರೂಪ ತಳೆದು ಹರಿಯ ಹೊರಟಳು. ತನ್ನ ಮಾತನ್ನು ಲೆಕ್ಕಿಸದೆ ನದಿಯಾಗಿ ಹೊರಟ ಸ್ಮಜ್ಯೋತಿಯನ್ನು ಕಂಡು ಇಂದ್ರ 'ಜಲಶೂನ್ಯಳಾಗು' ಎಂದು ಶಾಪಕೊಟ್ಟ. ಸುಜ್ಯೋತಿ ಇಂದ್ರನಲ್ಲಿ ಮರುಸಮಾಧಾನದ ವರಬೇಡಲು ಇಂದ್ರನು ಪರಮಪಾವನೆಯಾದ ಕಾವೇರಿ ನದಿಯ ಪವಿತ್ರ ಸ್ಪರ್ಶದಿಂದ 'ಜಲಪೂರ್ಣಳಾ'ಗೆಂದು ಮರುವರವಿತ್ತನು. ಅದರಂತೆ, ಸುಜ್ಯೋತಿ  ಕನ್ನಿಕೆ ಕಾವೇರಿ ಸಂಗಮದ ಪವಿತ್ರ ಮೂಹೂರ್ತವನ್ನು ನಿರೀಕ್ಷಿಸುತ್ತಿದ್ದಳು. ಕಾವೇರಿ-ಕನ್ನಿಕೆಯರ ಸಂಗಮವಾಗಿ, ಸುಜ್ಯೋತಿಯು ಸೇರಿ ಜಲಪೂಣರ್ೇಯಾಗಿ ಪವಿತ್ರ ನದಿಯಾಗಿ ರೂಪಾಂತರ ಹೊಂದಿದಳು.


ಭಗಂಡೇಶ್ವರ ಪುರಾಣ


ಭಾಗಮಂಡಲ ಕ್ಷೇತ್ರವೇ ಭಗಂಡಕ್ಷೇತ್ರವಾಗಿ ಪುರಾಣ ಪ್ರಸಿದ್ಧ ಸ್ಥಳವಾಗಿದೆ. ಇಲ್ಲಿ ಭಗಂಡೇಶ್ವರ, ಸುಬ್ರಮಹ್ಮಣ್ಯ ಮತ್ತು ಮಹಾವಿಷ್ಟು ದೇವರುಗಳು ಒಂದೆಡೆಯಲ್ಲಿವೆ.  ಶ್ರೀ ಮಹಾಗಣಪತಿ ಹೊರ ಅಂಗಳದಲ್ಲಿದ್ದಾನೆ.
ಭಗಂಡರೆಂಬ ಮುನಿವರ್ಯರು ಇಲ್ಲಿ ನೆಲೆಸಿ ಷಣ್ಮುಖನನ್ನು ಕುರಿತು ತಪಸ್ಸು ಮಾಡಿ,  ಅವನ ಅನುಗ್ರಹಕ್ಕೆ ಪಾತ್ರರಾಗಿದ್ದರು. ಸುಬ್ರಮಹ್ಮಣ್ಯ ಸ್ವಾಮಿಯ ದಿವ್ಯ ನೆಲೆಯಾಗಿದ್ದು ಸ್ಕಂದಕ್ಷೇತ್ರ ಎಂಬ ಪ್ರಸಿದ್ಧಿ ಪಡೆದಿದ್ದ ಇಂದಿನ ಭಾಗಮಂಡಲ ಭೂಭಾಗವನ್ನು ಭಗಂಡ ಋಷಿಗಳ ಮೇಲೆ ಸುಪ್ರೀತರಾಗಿ ಸುಬ್ರಮಹ್ಮಣ್ಯಸ್ವಾಮಿಯು ಅನುಗ್ರಹ ಪೂರ್ವಕವಾಗಿ ಅವರಿಗೆ ಕೊಡುಗೆಯಾಗಿ ಕೊಡುತ್ತಾರೆ.
ಋಷಿಗಳ ಪರಮಪಾವನವಾದ ತಪೋಭೂಮಿ ಹಾಗೂ ದೇವನೆಲೆಯಾದ ಸ್ಕಂದ ಕ್ಷೇತ್ರದಲ್ಲಿ ಸಕಲ ಜೀವನಕ್ಷೇಮಕ್ಕೆ ಶಿವಲಿಂಗವನ್ನು ಭಗಂಡ ಮಹಷರ್ಿಗಳು ಪ್ರತಿಷ್ಠಾಪಿಸುತ್ತಾರೆ. ಭಗಂಡ ಋಷಿಯು ನೆಲೆಸಿ ತಪಸ್ಸನ್ನು ಮಾಡಿ ಷಣ್ಮುಖನಿಂದ ಅನುಗ್ರಹವಾಗಿ ಪಡೆದ ಕ್ಷೇತ್ರವಾದ್ದರಿಂದ ಭಗಂಡಕ್ಷೇತ್ರವೆಂದು ಹೆಸರಾಯಿತು.
ಭಗಂಡ ಋಷಿಗಳು ಶಿವಲಿಂಗವನ್ನು ಪ್ರತಿಷ್ಠಾಪಿಸಿದ ಈ ಕ್ಷೇತ್ರದಲ್ಲಿ ಶಿವನನ್ನೇ ಪ್ರಧಾನವಾಗಿ ಪೂಜಿಸುವಂತಾಯಿತು. ಮಹಾ ತಪಸ್ವಿಗಳಾದ ಭಗಂಡ ಮಹಷರ್ಿಗಳು ತಪಸ್ಸನ್ನು ಮಾಡಿದ ಸ್ಥಳವು ಸುಬ್ರಮಹ್ಮಣ್ಯ ಸ್ವಾಮಿಯ ಸ್ವಕ್ಷೇತ್ರವಾದ ಈ ಭೂಭಾಗವು ಋಷಿಪ್ರತಿಷ್ಠೆ, ಶಿವದೇಗುಲದಿಂದ ಕೂಡಿ ಪವಿತ್ರ ಕ್ಷೇತ್ರವಾಗಿದೆ.

ಪರಮ ಪಾವನೆ ಕಾವೇರಿ ನದಿ ಭಾಗಮಂಡಲಕ್ಕೆ ಹರಿದು ಬಂದಾಗ ಕನ್ನಿಕೆ ಸುಜ್ಯೋತಿಯರು ಸೇರಿ ತ್ರಿವೇಣಿ ಸಂಗಮವಾಗಿರುವುದು ಪುಣ್ಯಕ್ಷೇತ್ರವಾಗಿದೆ. ಇಲ್ಲಿ ಮಂತ್ರಸಿದ್ಧಿ, ತಪಸ್ಸಿದ್ಧಿ, ಆಧ್ಯಾತ್ಮ ಸಾಕ್ಷಾತ್ಕಾರ-ಇವುಗಳು ಸಾಧಕನಿಗೆ ಬೇಗ ಲಭಿಸುತ್ತವೆಂದು ಸ್ಥಳ ಪುರಾಣ ತಿಳಿಸುತ್ತದೆ.


-- ಸಬಲಂ ಭೋಜಣ್ಣರೆಡ್ಡಿ,  ಬಾಚರಣಿಯಂಡ ಅಪ್ಪಣ್ಣ 
-------------

Pudiyodi There in Kakkabe , Kodagu.

https://kaveridarashin.blogspot.com/2015/11/blog-post_43.html