https://koodanda.blogspot.com

ಸೋಮವಾರ, ನವೆಂಬರ್ 30, 2015

ಕಾವೇರಿ ಸಾಗುವ ಹಾದಿ..

ನದಿ ಮೂಲ ಸ್ತೀ ಮೂಲ ಋಷಿಮೂಲ ಕೇಳಬಾರದೆಂಬುದು ವೇದವಾಕ್ಯ. ತಲಕಾವೇರಿಯ ತೀರ್ಥಕುಂಡದಲ್ಲಿ ಹುಟ್ಟಿ ಅನೇಕ ಪುಣ್ಯ ಕ್ಷೇತ್ರಗಳು, ಸುಂದರ ಗಿರಿಶಿಖರ ದಟ್ಟಡವಿಗಳ ನಡುವೆ ಸಾಗುವ ಕಾವೇರಿ ಹರಿಯುತ್ತಾ ಹರಿಯುತ್ತಾ ಹಿರಿದಾಗುತ್ತಾ ಅಗಲಗೊಳ್ಳುತ್ತಾಳೆ. ಸಣ್ಣ ದೊಡ್ಡ ಉಪನದಿಗಳನ್ನು ತನ್ನೊಡನೆ ಸೇರಿಸಿಕೊಂಡು  ಹರಿಯುತ್ತಾ ನೀರಿನ ಸಮುದ್ರವಾಗಿ ಮಾಪರ್ಾಡಾಗುತ್ತಾಳೆ.

 ಭಾಗಮಂಡಲದಿಂದ ಕಾವೇರಿ ಪಶ್ವಿಮಾಭಿಮುಖವಾಗಿ ಅರಬ್ಬೀ ಸಮುದ್ರಕ್ಕೆ ಹರಿದಿದ್ದಲ್ಲಿ ಆಕೆ  ಸುಮಾರು 100-120 ಕಿಲೋಮೀಟರ್  ಸಾಗುವುದರೊಳಗೇ ತನ್ನ ಯಾನ ಮುಗಿಸುತ್ತಿದ್ದಳು. ಆದರೆ, ಕಾವೇರಿ ಪೂವರ್ಾಭಿಮುಖವಾಗಿ ಸುಮಾರು 81,655 ಚದರ ಕಿಲೋಮೀಟರ್  ಹರಿದು ಕನರ್ಾಟಕ ಮತು ತಮಿಳುನಾಡಿಗೆ ಜೀವನದಿಯಾಗಿ ಪ್ರಖ್ಯಾತಿಗೊಂಡಿದ್ದಾಳೆ.  ತಲಕಾವೇರಿಯಿಂದ ಕನರ್ಾಟಕದ ಮೂಲಕ ತಮಿಳುನಾಡಿಗೆ  ಹರಿದು ಕೇರಳವನ್ನು ಸಂಧಿಸಿ ಪುದುಚೇರಿಗೆ ಭೇಟಿ ನೀಡಿ ಬಂಗಾಳ ಸಮುದ್ರ ಸೇರುವ ನದಿ ಕಾವೇರಿ, ಸಾಗುವ ಹಾದಿ ಇದು.

ಪಶ್ಚಿಮ ಘಟ್ಟಗಳ ನಡುವೆ  ಬಳಕುತ್ತ ಸಾಗಿದ ಕಾವೇರಿತಾಯಿಯ ಪ್ರಯಾಣವನ್ನು ವಲಯಗಳ ರೂಪದಲ್ಲಿ ನೋಡಬಹುದು.
ಮೊದಲನೆ ವಲಯ: ಕುಶಾಲನಗರದಿಂದ ಕೃಷ್ಣರಾಜಸಾಗರದವರೆಗೆ (ಹೇಮಾವತಿ, ಲಕ್ಷಣ ತೀರ್ಥ, ಕಾವೇರಿಯ ಸಂಗಮ)
ಎರಡನೆ ವಲಯ: ಕೃಷ್ಣರಾಜಸಾಗರದ ತಿರುಮಕೂಡಲು  (ಕಬಿನಿ, ಕಾವೇರಿಯ ಸಂಗಮ)
ಮೂರನೆ ವಲಯ: ಮೇಕೆದಾಟುವರೆಗೆ  (ಅಕರ್ಾವತಿ, ಶಿಂಷಾ, ಕಾವೇರಿಯ ಸಂಗಮ)
ನಾಲ್ಕನೇ ವಲಯ: ಮೇಕೆದಾಟುವಿನಿಂದ ಮೆಟ್ಟೂರು
ಐದನೇ ವಲಯ: ಮೆಟ್ಟೂರಿನಿಂದ ಕರೂರು (ಭವಾನಿ, ನೋಯಲ್ ಮತ್ತು ಅಮರಾವತಿ, ಕಾವೇರಿ ಸಂಗಮ)
ಆರನೇ ವಲಯ: ಕರೂರಿನಿಂದ ಶ್ರೀರಂಗಂವರೆಗೆ
ಏಳನೇ ವಲಯ: ಶ್ರೀರಂಗಂನಿಂದ ಬಂಗಾಳಕೊಲ್ಲಿವರೆಗೆ.
  ತಲಕಾವೇರಿಯು  ಸಮುದ್ರ ಮಟ್ಟದಿಂದ ಸುಮಾರು 1973 ಅಡಿಗಳಷ್ಟು ಎತ್ತರಕ್ಕಿದೆ. ಪಶ್ಚಿಮ ಘಟ್ಟಗಳ ನಡುವೆ ನಿಂತರೆ ದೂರದ ಬೆಟ್ಟಗಳನ್ನು ಮೋಡಗಳು ಆವರಿಸಿರುವ ರಮ್ಯವಾದ ದೃಶ್ಯ ಕಾಣಿಸುತ್ತದೆ.
  ಕಾವೇರಿಯ ಉಪನದಿಯಾದ ಲಕ್ಷಣ ತೀರ್ಥ ನಾಹರಹೊಳೆಯ ಕಾಡಿನಲ್ಲಿ ಹುಟ್ಟಿ ಹುಣಸೂರಿನ ಮೂಲಕ ಕೃಷ್ಣರಾಜಸಾಗರದತ್ತ ಹರಿದು ಬಂದು ಹಾಸನ, ಕೊಡಗು, ಮೈಸೂರಿನ ಕೃಷಿ ಜೀವನದೊಂದಿಗೆ ಕಾವೇರಿಯ ನಂಟು ಬೆಳೆಸಿಕೊಂಡಿದ್ದಾಳೆ.
  ಕೃಷ್ಣರಾಜಸಾಗರದಿಂದ ಹರಿಯುವ 'ಕಾವೇರಿ' ರಂಗನತಿಟ್ಟು ಅರಣ್ಯಧಾಮದಲ್ಲಿ ಅದೆಷ್ಟೋ ದೇಶದಿಂದ ವಲಸೆ ಬರುವ ಹಕ್ಕಿಗಳಿಗೆ ಆಶ್ರಯ ಕೊಟ್ಟಿದ್ದಾಳೆ. ಶ್ರೀರಂಗಪಟ್ಟಣದ ಮೂಲಕ ಸೋಮನಾಥಪುರ ತಲುಪುವ ಕಾವೇರಿ ನಮಗೆ ಚೆನ್ನಕೇಶವ ದೇವಳದಲ್ಲಿ ಹೊಯ್ಸಳರ ಶಿಲ್ಪ ವೈಭವವನ್ನ ತೋರಿಸಿ ಮುಂದೆ ಸಾಗುತ್ತಾಳೆ. ತಲಕಾಡು ದಾಟಿ ತಿರುಮಕೊಡಲುವಿನಲ್ಲಿ ಕಾವೇರಿ ಕಬಿನಿ ನದಿಯೊಡನೆ ಸಂಗಮವಾಗುತ್ತದೆ. ಆದರೆ ಇಲ್ಲಿಯವರೆಗೂ ಕಾವೇರಿ ಬೃಹತ್ ನಗರಗಳ ಸಂಪರ್ಕವನ್ನು ಮಾಡಿಲ್ಲ.
  ಚಾಮರಾಜನಗರ ಜಿಲ್ಲೆಯಲ್ಲಿ ಸುವರ್ಣವತಿ ನದಿಯ ಜೊತೆ ಕಾವೇರಿ ಸಂಗಮಿಸುತ್ತಾಳೆ. ತಲಕಾಡಿನಿಂದ ಮಳವಳ್ಳಿ ಬಳಿಯಿರುವ ಶಿವನಸಮುದ್ರದ ಕಡೆ ಹರಿಯುವಾಗ ಕಾವೇರಿಯ ಸೊಬಗು ವರ್ಣನೆಗೆ ನಿಲುಕದ್ದು. ಶಿವನಸಮುದ್ರ ಜಲಪಾತವನ್ನು ಗಗನಚುಕ್ಕಿ ಮತ್ತು  ಭರಚುಕ್ಕಿ ಎಂದು ಪ್ರತ್ಯೇಕವಾಗಿ ಕರೆಯಲಾಗುತ್ತದೆ.
  ನಂತರ ತೊರೆಕಾಡನಹಳ್ಳಿಗೆ ಕಾವೇರಿ ಕಾಲುವೆಗಳ ಮೂಲಕ ಹರಿಯುತ್ತಾಳೆ. ತೊರೆಕಾಡನಹಳ್ಳಿಯಿಂದ ದೊಡ್ಡದೊಡ್ಡ ಗಾತ್ರದ ಪೈಪುಗಳ ಮುಖಾಂತರ ಬೆಂಗಳೂರಿಗೆ ನೀರು ಇಂದಿಗೂ ಪೂರೈಕೆಯಾಗುತ್ತಿದೆ.
  ಅಲ್ಲಿಂದ ಮೇಕೆದಾಟು ಮೂಲಕ ಕಾವೇರಿ ಹೊಗೇನಕಲ್ ಪ್ರವೇಶಿಸಿ ನಂತರ ತಮಿಳುನಾಡಿನತ್ತ ತನ್ನ ಹರಿವನ್ನು  ಮುಂದುವರಿಸುತ್ತಾಳೆ.
ತಮಿಳುನಾಡಿನಲ್ಲಿ ಕಾವೇರಿ ಹರಿವು
  ತಮಿಳುನಾಡಿನಲ್ಲಿ ಹೊಗೇನ್ಕಲ್ ಪಟ್ಟಣಕ್ಕೆ ಆಗಮಿಸಿ ಹೊಗೇನ್ಕಲ್ ಜಲಪಾತದಲ್ಲಿ ಜಲಧಾರೆಯಾಗಿ ಹರಿಯುತ್ತಾಳೆ. ಇಲ್ಲಿನ ಉಪನದಿಗಳಾದ ಪಾಲಾರ್, ಚೆನ್ನಾರ್ ಮತ್ತು ತೊಪ್ಪಾರ್ ನದಿಗಳಿಗಾಗಿ ಮೆಟ್ಟೂರು ಅಣೆಕಟ್ಟು ನಿಮರ್ಾಣ ಮಾಡಲಾಗಿದೆ. ಇದು ಕೃಷ್ಣರಾಜಸಾಗರಕ್ಕಿಂತ ಎರಡು ಪಟ್ಟು ದೊಡ್ಡದಾದ ಮೆಟ್ಟೂರು ಅಣೆಕಟ್ಟು ನಿಮರ್ಾಣವಾದದ್ದು ಬ್ರಿಟಿಷ್ ಆಡಳಿತ ಅವಧಿಯಲ್ಲಿ.
  ಮೆಟ್ಟೂರಿನಿಂದ ಕಾವೇರಿ ತನ್ನ ಹರಿವು ಮುಂದುವರಿಸಿದಾಗ ಭವಾನಿ ಪುಣ್ಯಕ್ಷೇತ್ರದಲ್ಲಿ ಕಾವೇರಿ ಮತ್ತು ಭವಾನಿ ನದಿಗಳ ಸಂಗಮವಾಗುತ್ತದೆ. ಕೇರಳದ ಸೈಲೆಂಟ್ ವ್ಯಾಲಿ ಮತ್ತು ಅಟ್ಟಪಡಿ ಗಿರಿ ಶ್ರೇಣಿಗಳ ಮಧ್ಯೆ ಹರಿಯುವ ಭವಾನಿ ನೀಲಗಿರಿಯತ್ತ ಸಾಗುತ್ತಾಳೆ. ಊಟಿ, ಕೂನೂರು ದಾಟಿಕೊಂಡು ಮೆಟ್ಟೂಪಾಳ್ಯಂ ಮೂಲಕ ಭವಾನಿಗೆ ಹರಿಯುತ್ತದೆ.
  ಕರೂರು ಮತ್ತು ಭವಾನಿಯ ಮಧ್ಯೆ ಅಮರಾವತಿ ಮತ್ತು ನೋಯಲ್ ನದಿಗಳು ಕಾವೇರಿಗೆ ಬಂದು ಸೇರುತ್ತದೆ.
ಶ್ರೀರಂಗಂನತ್ತ ಕಾವೇರಿ ಹರಿವು
  ಶ್ರೀವೈಷ್ಣವರ ಪಾಲಿಗೆ ಭೂವೈಕುಂಠ ಎಂದೇ ಶ್ರೀರಂಗಂ ಪ್ರಿಸಿದ್ಧ. ಇಲ್ಲಿಯ ರಂಗನನ್ನು ನೋಡಿದರೆ ಆದಿ, ಮಧ್ಯೆ ಮತ್ತು ಅಂತ್ಯ  ರಂಗನನ್ನು ನೋಡಿದಂತಾಗುತ್ತದೆ. ಇದು ಪ್ರಪಂಚದಲ್ಲಿಯೇ ದೊಡ್ಡ ಹಿಂದೂ ದೇವಲಾಯ. ಈ ದೇವಸ್ಥಾನವನ್ನು ಕಾವೇರಿ ಮತ್ತು ಕೊಲರೂನ್ ನದಿಗಳ ಮಧ್ಯೆ ಇರುವ ದ್ವೀಪದಲ್ಲಿ ದೇವಸ್ಥಾನವನ್ನು ಕಟ್ಟಲಾಗಿದೆ.
  ನಂತರ ತಿರುವಯ್ಯೂರಿನಿಂದ ತಂಜಾವೂರಿನತ್ತ ಕಾವೇರಿ ಸಾಗಿ ಬರುವಾಗ ಒಂದು ಸಾವಿರ ವರ್ಷದ ತಂಜಾವೂರು ಬೃಹಧೀಶ್ವರ ದೇವಾಲಯವು ಕಾಣಸಿಗುತ್ತದೆ. ಸುಮಾರು 256 ಅಡಿ ಎತ್ತರದ ಗೋಪುರದ ನೆರಳು ಎಲ್ಲೂ ಬೀಳದಂತೆ ನಿಮರ್ಿಸಿದ್ದು ವಿಶೇಷ.
  ತಂಜಾವೂರಿನಲ್ಲಿ ಎಲ್ಲಿ ನೋಡಿದರೂ ದೇವರುಗಳ ಗುಡಿಗಳೇ ಕಾಣಸಿಗುತ್ತದೆ. ಅಲ್ಲಿ ಆದಿಕುಂಬೇಶ್ವರ ಮತ್ತು ಶ್ರೀರಂಗಪಾಣಿ ದೇವಸ್ಥಾನಗಳು ಕಾಣಸಿಗುತ್ತವೆ.
  ಅಲ್ಲಿಂದ ಕಾವೇರಿ ಕುಂಭಕೋಣಂ ಪ್ರವೇಶಿಸಿ ಪುಹಾರ್ ಸಾಗರವನ್ನು ಸೇರುತ್ತಾಳೆ. ಪುಹಾರ್ ಎಂಬ ಸ್ಥಳವನ್ನು ಕಾವೇರಿ ಪಟ್ಟಣಂ ಎಂದು ಆಗ ಕರೆಯುತ್ತಿದ್ದರು.
  ಹೀಗೆ ಕಾವೇರಿಯು ತನ್ನ ಲೋಕಕಲ್ಯಾಣಕ್ಕಾಗಿ ಹೊರಟು ಲಕ್ಷಣ ತೀರ್ಥ, ಹೇಮಾವತಿ, ಶಿಂಷಾ ಅರ್ಕವತಿ, ಕಬಿನಿ, ಹಾರಂಗಿ,  ಭವಾನಿ, ನೋಯಲ್, ಅಮರಾವತಿ ನದಿಯು ಸೇರಿದಂತೆ ಅನೇಕ ಉಪನದಿಗಳೊಂದಿಗೆ ಸುಮಾರು 81,155 ಚದರ ಕಿಲೋಮೀಟರ್ ದೂರ ಕ್ರಮಿಸಿ ತನ್ನ ಲೋಕಕಲ್ಯಾಣ ಕಾರ್ಯ ಮುಗಿಸಿ ಅಂತಿಮವಾಗಿ ಬಂಗಾಳಕೊಲ್ಲಿ ಸೇರುತ್ತಾಳೆ.
ರಾಜ್ಯಗಳಲ್ಲಿ ಕಾವೇರಿ ಹರಿವು (ಚದರ ಕಿಲೋಮೀಟರ್ಗಳಲ್ಲಿ)

ಕನರ್ಾಟಕ-34,273 (ಚದರ ಕಿಲೋಮೀಟರ್ಗಳಲ್ಲಿ)
ತಮಿಳುನಾಡು-43,856 (ಚದರ ಕಿಲೋಮೀಟರ್ಗಳಲ್ಲಿ)
ಕೇರಳ-2,866 (ಚದರ ಕಿಲೋಮೀಟರ್ಗಳಲ್ಲಿ)
ಪುದುಚೇರಿ-160 (ಚದರ ಕಿಲೋಮೀಟರ್ಗಳಲ್ಲಿ)

ಲೇಖನ: Adarsh ಅದ್ಕಲೇಗಾರ್.

ಕಾಮೆಂಟ್‌ಗಳಿಲ್ಲ:

Pudiyodi There in Kakkabe , Kodagu.

https://kaveridarashin.blogspot.com/2015/11/blog-post_43.html