ಕಾವೇರಿ ಚಂಗ್ರಾಂದಿ
ಕೊಡಗಿನವರ ಕುಲದೇವಿ ಶ್ರೀಕಾವೇರಿ ಮಾತೆಯ ದೊಡ್ಡ ಹಾಗು ಪವಿತ್ರ ಹಬ್ಬವೇ ಕಾವೇರಿ ತುಲಾಸಂಕ್ರಮಣ. ಕೊಡವ ಭಾಷೆಯಲ್ಲಿ ಈ ಹಬ್ಬವನ್ನು ಕಾವೇರಿ ಚಂಗ್ರಾಂದಿ ಎಂತಲೂ ಕರೆಯುತಾರೆ. ಈ ಹಬ್ಬವು ಅಕ್ಟೋಬರ್ ತಿಂಗಳ ಮಧ್ಯಭಾಗದ ತುಲಾ(ಮಾಸ)ಸಂಕ್ರಮಣದಂದು ನಡೆಯುತ್ತದೆ. ಸೂರ್ಯನು ತುಲಾರಾಶಿಗೆ ಸೇರುವ ಸಮಯ ಕೊಡಗಿನ ಕುಲದೇವಿ ಕಾವೇರಿಯು ತನ್ನ ಉಗಮ ಸ್ಥಾನದ ತಲಕಾವೇರಿಯ ಕುಂಡಿಕೆಯಿಂದ ತೀಥೋಧ್ಭವವಾಗಿ ಬರುವಳು.
ಸೂರ್ಯನು ಕನ್ಯಾರಾಶಿಯಿಂದ ತುಲಾರಾಶಿಗೆ ಪ್ರವೇಶ ಮಾಡುವ ಪುಣ್ಯ ಸಮಯವಾಗಿರುವ ತುಲಾ ಸಂಕ್ರಮಣದಂದು ಸ್ವರ್ಗಸ್ಥರಾದ ಹಿರಿಯರಿಗೆ ಮೋಕ್ಷ ಸಿಗಲಿ ಎಂದು ಹಾರೈಸುವರು. ಅಂದು ಅವರ ಬಂಧುಗಳು ತಮ್ಮ ಹಿರಿಯರ ಆತ್ಮಗಳಿಗೆ ಸದ್ಗತಿ ಕೋರಿ ದೇವರಲ್ಲಿ ಪ್ರಾಥರ್ಿಸುತ್ತಾರೆ. ಹಿರಿಯರ ಹೆಸರಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಾರೆ. ಪಿಂಡಪ್ರದಾನ ಮಾಡುತ್ತಾರೆ. ಈ ದಿನದಂದು ಬದುಕಿರುವ ಹಿರಿಯರ ಆಶ್ರರ್ೀವರ್ಾದ ಪಡೆಯುವ ಮೂಲಕ ತಮ್ಮ ಜನಾಂಗ ಸಮೃದ್ದಿಯಾಗಿ ಬೆಳೆಯಳಿ ಸುಖಶಾಂತಿ ಸದಾ ಮನೆಯಲ್ಲಿ ನೆಲೆಸಿರಲಿ ಎಂದು ಆಶಿಸುತ್ತಾರೆ. ಈ ಶುಭದಿನಂದು ಆಚರಿಸಲ್ಪಡುವ ಕಾವೇರಿ ಸಂಕ್ರಾಂತಿ ಕೊಡಗಿನಲ್ಲಿ ವಿಜೃಂಭಣೆೆಯ ಹಬ್ಬ.
.ಕೊಡಗಿನ ಕಾವೇರಿ ಪುರಾಣದಲ್ಲಿನ ಕಾವೇರಿ ಮಾತೆ ಕಥೆಯನ್ನು ಸವಿವರವಾಗಿ ಕೊಡವಹಾಡಿನಲ್ಲಿ ರಚಿಸಲಾಗಿದೆ.
.ಕೊಡಗಿನ ಜನರು ಕಾವೇರಿಮಾತೆಯನ್ನು ನಂಬುತ್ತಾ ಬರುತಿದ್ದು, ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ವರ್ಷದಲ್ಲಿ ಹಲವು ಬಾರಿ ವಿಶೇಷ ಪೂಜಾದಿ ಉತ್ಸವಗಳನ್ನು ನಡೆಸಿಕೊಂಡು ಬರಲಾಗುತ್ತದೆ. ಪ್ರತೀ ವರ್ಷದ ಅಕ್ಟೋಬರ್ ತಿಂಗಳ ತುಲಾ(ಸಂಕ್ರಮಣ)ಮಾಸದಲ್ಲಿ ಕಾವೇರಿ ಜಾತ್ರೆಯು ನಡೆಯಲಿದೆ. ಜ್ಯೋತಿಷ್ಯಶಾಸ್ತ್ರದ ರೀತಿ ನಿಶ್ಚಿತವಾದ ತುಲಾ ಮೂಹೂರ್ತದಲ್ಲಿ ಕುಂಡಿಕೆಯಿಂದ ತೀಥೋದ್ಬವವಾಗುತ್ತದೆ. ಮೂಹರ್ೂತ ಸಮಯವು ಸಮೀಪಿಸಿದಂತೆ ಅರ್ಚಕರು ಶ್ರೀಕಾವೇರಿ ಕುಂಡಿಕೆಯಲ್ಲಿ ಶ್ರೀಕಾವೇರಿ ದೇವಿಯನ್ನು ಮಂತ್ರೋಕ್ತವಾಗಿ ವಿಧಿಪೂರ್ವಕವಾಗಿ ಕ್ರಪಾ ಆಶ್ರೀವರ್ಾದವನ್ನು ಕೋರುತ್ತಾರೆ. ಆ ಹೊತ್ತಿಗೆ ಪವಿತ್ರಜಲವು ಕುಂಡಿಕೆಯಲ್ಲಿ ಗುಳ್ಳೆಯ ರೀತಿ ಮೇಲುಕ್ಕಿ ಬರುತ್ತದೆ. ಅಷ್ಟರಲ್ಲಿ ಅರ್ಚಕರು ಜಲರೂಪಿಣಿ ಕಾವೇರಿಗೆ ಆರತಿಯನ್ನು ಬೆಳಗಿ, ಪುಣ್ಯತೀರ್ಥವನ್ನು ಕುಂಡಿಕೆಯಿಂದ ತೆಗೆದು ನೆರೆದ ಭಕ್ತಸಮೂಹದ ಮೇಲೆ ಎರಚುತ್ತಾರೆ.ಕುಂಡಿಕೆಯಿಂದ ಅದೆಷ್ಟೋ ತೀರ್ಥ ತೆಗೆದರೂ ಪವಿತ್ರ ಕುಂಡಿಕೆಯಲ್ಲಿ ತೀರ್ಥ ಕಡಿಮೆಯಾಗುವುದೇ ಇಲ್ಲ. ತೀಥರ್ೋದ್ಬವ ಹಾಗೂ ತೀರ್ಥ ಅಕ್ಷಯ ತಲಕಾವೇರಿಯಲ್ಲಿ ಪ್ರತಿವರ್ಷ ಕಂಡುಬರುವ ದೈವಿಕ ಪವಾಡವೆಂದು ಹೇಳಬಹುದು
.
ಕಾವೇರಿ ಜಾತ್ರೆಯಲ್ಲಿ ಸಾವಿರಗಟ್ಟಲೆ ಕೊಡವರ ಕುಲದೇವರೆಂದು ನಂಬಿರುವ ಹೆಚ್ಚಿನ ಕೊಡವರು, ಕೊಡಗಿನ ಹಾಗು ಹೊರಜಿಲ್ಲೆಗಳ ಭಕ್ತಸಮೂಹ ಸೇರಿ ಕಾವೇರಿ ತೀರ್ಥಸ್ಥಾನ, ಪೂಜಾಸೇವೆಗಳನೆಲ್ಲ ಪೂರೈಸಿ ತೀರ್ಥವನ್ನು ಹೊತ್ತು ಮನೆಗಳಿಗೆ ತರುತಾರೆ. ಪುರಾಣಗಳಲ್ಲಿ ಹೇಳಿರುವಂತೆ ಯಾರು ಕಾವೇರಿಯ ಪರಮ ಪವಿತ್ರವಾದ ತೀರ್ಥದಲ್ಲಿ ಸ್ನಾನ ಮಾಡುವರೋ ಅವರ ಜನ್ಮಾಂತರ ಪಾಪಗಳೆಲ್ಲ ಪರಿಹಾರವಾಗುವುದು.ಸೂರ್ಯನು ತುಲಾರಾಶಿಯ ಪ್ರವೇಶಿಸುವ ತೀಥೋದ್ಭವದ ಸಮಯದಲ್ಲಿ ತೀರ್ಥಸ್ನಾನ ಮಾಡುವುದರಿಂದ ಆಶ್ವಮೇಧಯಾಗದ ಫಲವು ಹಾಗೂ ಕಾವೇರಿ ಜಲದಲ್ಲಿ ತಿಂಗಳು ಎಡೆಬಿಡದೆ ಸ್ನಾನ ಮಾಡುವುದರಿಂದ ಮಂಗಳಕರ ದಿವ್ಯಗತಿಹೊಂದುವರೆಂಬ ನಂಬಿಕೆ ಇದೆ. ತಲಕಾವೇರಿಗೆ ಹೋಗಲು ಸಾಧ್ಯವಾಗದವರು ಹರಿಶ್ಚಂದ್ರ(ಪಾಲೂರು), ಬಲಮುರಿ ಹಾಗೂ ಗುಯ್ಯ ಮೊದಲಾದ ಸ್ಥಳಗಳಿಗೆ ಹೋಗಿ ಕಾವೇರಿಯಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸುವರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ