https://koodanda.blogspot.com

ಸೋಮವಾರ, ನವೆಂಬರ್ 30, 2015

Why Kaveri Dry Now ......... ಬತ್ತುತ್ತಿದೆ ಕಾವೇರಿ ಒಡಲು

ಬತ್ತುತ್ತಿದೆ ಕಾವೇರಿ ಒಡಲು

ವಿವೇಚನಾಶೂನ್ಯ ತಮಿಳುನಾಡು -ಕನರ್ಾಟಕ ! 


ಕಾವೇರಿ ನದಿ ಕೇವಲ ಕನರ್ಾಟಕದ ಜೀವನದಿ ಮಾತ್ರವಲ್ಲ ಅದು ತಮಿಳುನಾಡಿಗೂ ಜೀವನದಿ. ಈ ಕಾರಣದಿಂದಾಗಿ ಕಾವೇರಿಯ ನೀರು ನಮಗೆ ಹೆಚ್ಚು ಬೇಕು ನಮಗೆ ಹೆಚ್ಚು ಬೇಕು ಎಂಬುದಾಗಿ ಎರಡೂ ರಾಜ್ಯಗಳು ವರ್ಷಗಳಿಂದ ಜಗಳಕ್ಕಿಳಿದಿವೆ. ಕೊಡಗಿನ ತಲಕಾವೇರಿಯಲ್ಲಿ ಜನಿಸಿ ಮೈದುಂಬಿಕೊಂಡು ಹರಿಯುವ ಕಾವೇರಿ; ಕನರ್ಾಟಕ, ತಮಿಳುನಾಡು, ಕೇರಳದ ಒಂದಷ್ಟು ಭಾಗ ಮತ್ತು ಪುದುಚೇರಿ ಜನರ ಬಾಯಾರಿಕೆ ತಣಿಸುವುದಲ್ಲದೆ ಅವರ ಕೃಷಿ ಕೈಗಾರಿಕೆಗಳ ನೀರಿನ ಅಗತ್ಯವನ್ನು ಪೂರೈಸಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾವೇರಿ ನದಿ ಪೂರ್ಣತುಂಬಿಕೊಳ್ಳದೆ ಸೊರಗುತ್ತಿದೆ ಈ ಕಾರಣದಿಂದ  ಇತ್ತೀಚಿಗೆ ಪ್ರಮುಖ ಜಲಾಶಯಗಳಾದ ಕೃಷ್ಣರಾಜ ಸಾಗರ, ಹಾರಂಗಿ, ಕಬಿನಿ, ಹೇಮಾವತಿಗಳು ಪೂರ್ಣವಾಗಿ ತುಂಬಿಕೊಳ್ಳುತ್ತಿಲ್ಲ.

ಸೊರಗುತಿರುವ ಕಾವೇರಿ 

ಕಾವೇರಿ ತನ್ನ ನದಿಮೂಲ ಕೊಡಗಿನಲ್ಲಿಯೇ ಸೊರಗಲಾರಂಭಿಸಿದೆ. ಕೊಡಗಿನ ವನಸಿರಿ ಸೇರಿದಂತೆ ಕಾವೇರಿ ಸಾಗುವ ಹಾದಿಯುದ್ದಕ್ಕೂ ಇರುವ ಕಾಡುಗಳ ರಕ್ಷಣೆಮಾಡಬೇಕಾಗಿದೆ. ನದಿ ಕಲುಷಿತಗೊಳ್ಳದಂತೆ ಸಮರ್ಪಕವಾದ ವೈಜ್ಞಾನಿಕ ಯೋಜನೆಗಳನ್ನು ಹಾಕಿಕೊಳ್ಳಬೇಕಾಗಿದೆ. ಇದ್ಯಾವುದರ ಗೋಜಿಗೂ ತಲೆಕೆಡಿಸಿಕೊಳ್ಳದ ಕನರ್ಾಟಕ ತಮಿಳುನಾಡುಗಳು ಬಡಿದಾಡಿಕೊಳ್ಳುತ್ತಿವೆ. ಗಂಡ ಹೆಂಡಿರ ಜಗಳದ ನಡುವೆ ಕೂಸು ಕಾವೇರಿ ಬಡವಾಗಿದ್ದಾಳೆ ಅವಳನ್ನು ಕೇಳುವವರೇ ಇಲ್ಲವಾಗಿದೆ.
ಕಾಡುಗಳ ನಾಶ, ಪ್ರಕೃತಿ ಕಾಳಜಿ ಇಲ್ಲದ ಅಭಿವೃದ್ದಿ, ಯಾಂತ್ರೀಕರಣ, ಮಿತಿಮೀರಿ ಬೆಳೆದಿರುವ ಜನಸಂಖ್ಯೆ, ದಿನದಿಂದ ದಿನಕ್ಕೆ ನೀರಿನ ಅಭಾವವನ್ನು ಸೃಷ್ಟಿಸುತ್ತಿದೆ. ಈ ಕಾರಣದಿಂದ ನೀರಿಗಾಗಿ ಎಲ್ಲರೂ ಜಗಳ ಮಾಡುವವರೇ. ಮೂರನೇ ಜಾಗತಿಕ ಯುದ್ದ ನಡೆದರೆ ಅದು ನೀರಿಗಾಗಿಯೇ ನಡೆಯುತ್ತದೆ ಎಂದಿರುವುದು ತಮಿಳುನಾಡು ಕನರ್ಾಟಕ ಪಾಲಿಗಂತು ಸತ್ಯವಾಗಿದೆ. ಕಾವೇರಿ ನದಿನೀರಿಗಾಗಿ ಎರಡೂ ರಾಜ್ಯಗಳು ಬಂದ್ ಆಚರಿಸಿವೆ, ಬಡಿದಾಡಿಕೊಂಡಿವೆ ;ಹೆಣ ಉರುಳಿಸಿವೆ.
ಕನರ್ಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಕಾವೇರಿ ವಿವಾದ ಇಂದು ನಿನ್ನೆಯದಲ್ಲ. ಅದು ಭಾರತದಲ್ಲಿ ಬ್ರಿಟಿಷ್ ಆಡಳಿತೆ ಇದ್ದಾಗಲೇ ಆರಂಭಗೊಂಡಿತ್ತು.
ಎರಡೂ ಪ್ರಾಂತ್ಯಗಳೊಳಗೆ ಭಿನ್ನಾಭಿಪ್ರಾಯ
1870ರ ಸುಮಾರಿಗೆ. ಬ್ರಿಟಿಷ್ ಆಡಳಿತದಲ್ಲಿನ ಮೈಸೂರು ಮತ್ತು ಮದ್ರಾಸ್ ಪ್ರಾಂತ್ಯಗಳಲ್ಲಿ ನೀರಿನ ಅಭಾವ ಕಾಣಿಸಿಕೊಂಡಾಗ ಅಂದಿನ ಮೈಸೂರು ಆಡಳಿತ ಕಾವೇರಿಗೆ ಸಂಬಂಧಿಸಿದ ನೀರಾವರಿ ಯೋಜನೆಗಳನ್ನು ವಿಸ್ತರಿಸುವುದಕ್ಕೆ ಮುಂದಾದಾಗ ಮದ್ರಾಸ್ ಪ್ರಾಂತ್ಯದ ಆಡಳಿತ ಅದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಈ ವಾದ ವಿವಾದಗಳು ತಾರಕಕ್ಕೇರಿ 1892 ರಲ್ಲಿ ಬ್ರಿಟಿಷ್ ಆಡಳಿತದ ನೇತೃತ್ವದಲ್ಲಿ ಮದ್ರಾಸ್ ಮತ್ತು ಮೈಸೂರು ಎರಡೂ ಪ್ರಾಂತ್ಯಗಳ ಆಡಳಿತೆಗಳ ನಡುವೆ ಕಾವೇರಿ ನದಿ ನೀರನ್ನು ಬಳಸುವ ನಿಟ್ಟಿನಲ್ಲಿ  ಕೆಲವೊಂದು ರೂಪುರೇಷೆಗಳನ್ನು ಸಿದ್ದಪಡಿಸಿ ಒಪ್ಪಂದ ಏರ್ಪಟ್ಟಿತ್ತು.
ಈ ನಡುವೆ 1910ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಮಿಜರ್ಾ ಇಸ್ಮಾಯಿಲ್ ಶ್ರೇಷ್ಠ ತಂತ್ರಜ್ಞ ವಿಶ್ವೇಶ್ವರಯ್ಯನವರ ಮಾರ್ಗದರ್ಶನದಲ್ಲಿ ಕನ್ನಂಬಾಡಿ ಅಣೆಕಟ್ಟು (ಕೆಆರ್ಎಸ್) ಕಟ್ಟುವ ವಿಚಾರ ಮಾಡಿದಾಗ. ಈ ಯೋಜನೆಯಲ್ಲಿ ಒಟ್ಟು  41.5 ಟಿಎಂಸಿ ನೀರನ್ನು ಸಂಗ್ರಹಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಮೊದಲ ಹಂತದ ಕಾಮಗಾರಿಯಲ್ಲಿ 11 ಟಿಎಂಸಿ ನೀರು ಸಂಗ್ರಹಿಸುವ ನಿಟ್ಟಿನಲ್ಲಿ ಕಾಮಗಾರಿ ನಡೆಯಿತು. ಎರಡನೇ ಹಂತದಲ್ಲಿ ಈ ಯೋಜನೆಯನ್ನು ಪೂತರ್ಿಗೊಳಿಸುವ  ಕಾಮಗಾರಿಗೆ ಮೈಸೂರು ಕಾರ್ಯಪ್ರವೃತ್ತವಾದಾಗ ಈ ವಿಚಾರಕ್ಕೆ ಮದ್ರಾಸ್ನಿಂದ ವಿರೋಧ ವ್ಯಕ್ತವಾಗಿತ್ತು. ಮಾತ್ರವಲ್ಲ ಮೆಟ್ಟೂರುನಲ್ಲಿ 11  ಟಿಎಂಸಿ ನೀರು ಸಂಗ್ರಹಿಸುವ ಅಣೆಕಟ್ಟೊಂದನ್ನು ತಾವೂ ಕಟ್ಟಿಕೊಳ್ಳುತ್ತೇವೆ ಎಂದು ಮದ್ರಾಸ್ ಆಡಳಿತ ಹೇಳಿತು. ಈ ವಿಚಾರಗಳು ಎರಡೂ ಪ್ರಾಂತ್ಯಗಳೊಳಗೆ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು.

ಕನರ್ಾಟಕವನ್ನು ಮರೆತು ಹೇಳಿಕೆಗಳು
1947ರಲ್ಲಿ ಭಾರತ ಸ್ವಾತಂತ್ರ್ಯಗೊಂಡ ನಂತರ ಉದಯವಾದ ಭಾಷಾವಾರು ರಾಜ್ಯಗಳ ಸಂದರ್ಭದಲ್ಲಿ ಕಾವೇರಿನದಿ ನೀರು ಮದ್ರಾಸ್ ಪ್ರಾಂತ್ಯ ತಮಿಳುನಾಡು, ಕೇರಳ, ಮತ್ತು ಪುದುಚೇರಿ  ರಾಜ್ಯಗಳ ನಡುವೆ ಹಂಚಿ ಹೋಯಿತು. ಈ ಕಾರಣದಿಂದ ಕಾವೇರಿ ನದಿ ನೀರಿಗಾಗಿ ನಾಲ್ಕು ರಾಜ್ಯಗಳ ಜನ ಕಿತ್ತಾಡುವಂತಾಯಿತು. ಕಾವೇರಿ ನದಿ ನೀರು ತಮಿಳುನಾಡು ಮತ್ತು ಕನರ್ಾಟಕವನ್ನು ಬದ್ದ ಶತ್ರುಗಳನ್ನಾಗಿ ಮಾಡಿತು. ಇದು ಎಷ್ಟರಮಟ್ಟಿಗೆ ಎಂದರೆ ಮೂಲತ: ಕನ್ನಡ ನೆಲದಿಂದ ಹೋದ ಜಯಲಲಿತಾ, ರಜನೀಕಾಂತ್ನಂತಹ ಚಿತ್ರರಂಗದ ಮೇರುನಟರು ಪೂರ್ಣವಾಗಿ ಕನರ್ಾಟಕವನ್ನು ಮರೆತು ಹೇಳಿಕೆಗಳನ್ನು ನೀಡಲು ಆರಂಭಿಸಿದರು. ಇದು ಕನರ್ಾಟಕದವರನ್ನೂ ಕೆರಳಿಸಿತು. ನಮ್ಮ ಮೂಲಕ ಹರಿಯುವ ನೀರನ್ನು ನಾವು ಬೇಕಾದಷ್ಟು ಬಳಸಿಕೊಳ್ಳುತ್ತೇವೆ. ಕೇಳಲು ನೀವು ಯಾರು ಎನ್ನುವ ಧೋರಣೆಯನ್ನು ಕನರ್ಾಟಕವೂ ಬೆಳೆಸಿತು. ಕಾವೇರಿ ನದಿ ನೀರನ್ನು ಬಳಸುವ ವಿಚಾರದಲ್ಲಿ ಕನರ್ಾಟಕ ತಮಿಳುನಾಡು ಸೇರಿದಂತೆ ಎರಡೂ ರಾಜ್ಯಗಳು ಅನೇಕ ವೇಳೆ ಬಂದ್ ಆಚರಿಸಿದವು. ಈ ಬಂದ್ಗಳ ಸಂದರ್ಭದಲ್ಲಿ ಕನರ್ಾಟಕ ತಮಿಳುನಾಡಿನ ಬಸ್ಸು ವಾಹನಗಳ ಗಾಜುಗಳು ಪುಡಿಯಾದವು ಕೆಲವೊಂದು ವಾಹನಗಳು ಬೆಂಕಿಗೆ ಆಹುತಿಯಾದವು. ಜನಸಾಮಾನ್ಯರು ಕಲ್ಲಿನೇಟು ತಿಂದರು, ಗಾಯಗೊಂಡರು. ಜೀವಹಾನಿಕೂಡ ಸಂಭವಿಸಿತು. ಈ ಎರಡೂ ರಾಜ್ಯಗಳಲ್ಲಿನೆಲೆಸಿದ್ದ ಜನಸಾಮಾನ್ಯರು ತಾವು ಭಾರತದಲ್ಲಿ ಇದ್ದೇವೋ ಅಥವಾ ಬೇರೆ ಯಾವುದಾದರೂ ವಿರೋಧಿ ದೇಶದಲ್ಲಿದ್ದೇವೆಯೋ ಎನ್ನುವಂತೆ ಭಯದಿಂದ ಕಂಪಿಸಿದ್ದರು. ಆದರೆ ಜನರಾಗಲಿ ಸಕರ್ಾರವಾಗಲಿ ಕಾವೇರಿನದಿಯ ಹರಿವನ್ನು ಹೆಚ್ಚಿಸುವ ಕಾವೇರಿ ನೀರು ದುರ್ಬಳಕೆಯಾಗದಂತೆ ತಡೆಯುವ ಯಾವ ಚಿಂತನೆಯನ್ನೂ ಮಾಡಲಿಲ್ಲ.
ಕನರ್ಾಟಕ ಸಕರ್ಾರಕ್ಕೆ ಚಾಟಿ
1990ರಲ್ಲಿ ಸುಪ್ರೀಂ ಕೋಟರ್್ ನಿದರ್ೇಶನದಂತೆ ವಿ.ಪಿ. ಸಿಂಗ್ ಸಕರ್ಾರ ಕಾವೇರಿ ನದಿ ನೀರನ್ನು ವೈಜ್ಞಾನಿಕವಾಗಿ ವಿವೇಚನಾಯುತವಾಗಿ ಹಂಚಿಕೆ ಮಾಡುವಂತೆ ನ್ಯಾಯಾಧೀಕರಣವೊಂದನ್ನು ರಚಿಸುವಂತೆ ಅಂದು ಆಡಳಿತದಲ್ಲಿದ್ದ ವಿ.ಪಿ.ಸಿಂಗ್ ನೇತೃತ್ವದ ಜನತಾದಳ ಪಕ್ಷದ ಸಕರ್ಾರಕ್ಕೆ ಆದೇಶಿಸಿತು. ಇದರನ್ವಯ ಮೂರು ಮಂದಿ ನ್ಯಾಯಾಧೀಶರನ್ನೊಳಗೊಂಡ ಕಾವೇರಿ ನದಿಯ ನೀರಿನ ವಿವರ ಮತ್ತು ಹಂಚಿಕೆಯ ತೀಮರ್ಾನಕೈಗೊಳ್ಳಲು ಕಾವೇರಿ ನದಿ ನೀರು ಟ್ರಿಬ್ಯುನಲ್ ರಚನೆಗೊಂಡಿತು. ಮುಂದೆ 1998 ಕಾವೇರಿ ನದಿ ಪ್ರಾಧಿಕಾರ ರಚನೆಗೊಂಡಿತು. ಈ ಪ್ರಾಧಿಕಾರದ ಆದೇಶದನ್ವಯ 2002 ರಲ್ಲಿ ವಾಜಪೇಯಿ ಸಕರ್ಾರ ತಮಿಳುನಾಡಿಗೆ ಒಂಭತ್ತು ಸಾವಿರ ಕ್ಯೂಸೆಕ್ಸ್ ನೀರು ಬಿಡಲು  ಕನರ್ಾಟಕಕ್ಕೆ ಆದೇಶ ನೀಡಿತು. ಇದಕ್ಕೂ ಕನರ್ಾಟಕ ವಿರೋಧ ವ್ಯಕ್ತಪಡಿಸಿತು. ಈ ನಡುವೆ ಕಾವೇರಿ ನದಿ ಹಂಚಿಕೆ ಕುರಿತು ನೀರಾವರಿ ತಜ್ಞರನ್ನು ಮುಕ್ತವಾಗಿ ಚಿಂತಿಸಲು ಕೇಂದ್ರ ಸಕರ್ಾರ ಬಿಡುತ್ತಿಲ್ಲ ಎನ್ನುವ ಆಪದನೆಗಳೂ ಕೇಳಿಬಂದುವು. ತಮಿಳುನಾಡಿಗೆ ನೀರು ಬಿಡಲು 2005ರಲ್ಲಿಯೂ ಕನರ್ಾಟಕ ಸಕರ್ಾರ ವಿರೋಧ ವ್ಯಕ್ತಪಡಿಸಿತು. 2010ರಲ್ಲಿ ತಮಿಳುನಾಡಿಗೆ ನೀರು ಬಿಡಲು ನಮ್ಮಲ್ಲಿ ನೀರೇ ಇಲ್ಲ ಎಂದು ಹಠ ಹಿಡಿದು ಕುಳಿತ ಕನರ್ಾಟಕ ತಮಿಳುನಾಡಿಗೆ ಕುಡಿಯಲು ಮಾತ್ರ ನೀರು ಕೊಡುತ್ತೇವೆ ಕೃಷಿ ಮಾಡಲು ಅಲ್ಲ ಎಂದು ಹೇಳಿಯೇ ಬಿಟ್ಟಿತು. ತಮಿಳುನಾಡು ಮತ್ತು ಕೇಂದ್ರ ಸಕರ್ಾರ ಇದನ್ನು ಕಿವಿಗೆ ಹಾಕಿಕೊಳ್ಳಲು ಸಿದ್ದವಿರಲಿಲ್ಲ. ಇದೇ ಸಂದರ್ಭದಲ್ಲಿ ಪ್ರಕೃತಿಯ ಆಟ ಎಂಬಂತೆ ಕೊಡಗಿನಲ್ಲಿ ಬಿದ್ದ ಭಾರಿ ಮಳೆ ಎರಡೂ ರಾಜ್ಯಗಳ ನಡುವಿನ ವಿವಾದಕ್ಕೆ ತಾತ್ಕಾಲಿಕ ವಿರಾಮ ಹಾಕಿತು. ಮುಂದೆ 2012ರಲ್ಲಿ ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ನೀವು ಯಾವಾಗಲೂ ಮೊಂಡುವಾದ ಮಾಡುತ್ತಿದ್ದೀರಿ ಎಂದು ಸುಪ್ರೀಂ ಕೋಟರ್್ ಕನರ್ಾಟಕ ಸಕರ್ಾರಕ್ಕೆ ಚಾಟಿ  ಬೀಸಿತು. ಮಾತ್ರವಲ್ಲ 2013ರಲ್ಲಿ ನೀರು ಹಂಚಿಕೆ ವಿಚಾರವನ್ನು ವೈಜ್ಞಾನಿಕವಾಗಿ ಚಿಂತಿಸಿ ಹಂಚುವ ಕ್ರಮಕೈಗೊಳ್ಳಲು ಆದೇಶಿಸಿತು.
 ಕಾವೇರಿ   ಟ್ರಿಬ್ಯುನಲ್ 2007ರಲ್ಲಿ ಕಾವೇರಿಯಲ್ಲಿ  ಒಟ್ಟು 740 ಸಾವಿರ ಮಿಲಿಯನ್ ಕ್ಯುಬಿಕ್ (ಟಿಎಂಸಿ) ನೀರಿನ ಒಟ್ಟು ಸಂಗ್ರಹದ ಬಗ್ಗೆ ಹೇಳಿತು. ಇದರಲ್ಲಿ ಪ್ರಕೃತಿಯ ಸಮತೋಲ ಕಾಪಾಡುವಂತೆ 14 ಟಿಎಂಸಿ ನೀರನ್ನು ಸಮುದ್ರಕ್ಕೆ ಹರಿಯಲು ಬಿಡಬೇಕು. 419 ಟಿಎಂಸಿ ನೀರು ತಮಿಳುನಾಡಿಗೆ ,270 ಟಿಎಂಸಿ ನೀರು ಕನರ್ಾಟಕಕ್ಕೆ ಮತ್ತು 30 ಟಿಎಂಸಿ ನೀರು ಕೇರಳಕ್ಕೆ, 7 ಟಿಎಂಸಿ ಪುದುಚೇರಿಗೆ ಹಂಚಬೇಕು ಎಂದು ಆದೇಶಿಸಿತು.

ನಿತ್ಯ ಒಂಭತ್ತು ಸಾವಿರ ಕ್ಯೂಸೆಕ್ಸ್ ನೀರು
2012ರಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸುಪ್ರೀಂಕೋಟರ್್ ಮೆಟ್ಟಿಲು ಹತ್ತಿದಾಗ ಕೋಟರ್್ ನಿದರ್ೇಶನದನ್ವಯ ಅಂದಿನ ಪ್ರಧಾನಿ ಮನ್ಮೋಹನ್ ಸಿಂಗ್ ಸಕರ್ಾರ ತಮಿಳುನಾಡಿಗೆ ನಿತ್ಯ ಒಂಭತ್ತು ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಆದೇಶನೀಡಿತು. ಇದರಿಂದ ರಾಜ್ಯದ ಮಂಡ್ಯ, ಮೈಸೂರು ಮತ್ತು ಬೆಂಗಳೂರು ಅಸಹನೆಯಿಂದ ಉರಿಯಿತು.

ಫೆಬ್ರವರಿ 5 2007ರಲ್ಲಿ ಕಾವೇರಿ ನ್ಯಾಯಮಂಡಳಿ ತನ್ನ ತೀಪರ್ಿನಲ್ಲಿ ತಮಿಳುನಾಡಿಗೆ 419ಟಿಎಂಸಿ, ಕನರ್ಾಟಕಕ್ಕೆ270ಟಿಎಂಸಿ ನೀರು ಎಂದು ವಿಧಿಸಿತಲ್ಲದೆ ಕೇರಳ ರಾಜ್ಯಕ್ಕೆ 30 ಟಿಎಂಸಿ ಪಾಂಡಿಚೇರಿಗೆ 7 ಟಿಎಂಸಿ ನೀರು ಎಂದು ವಿಧಿಸಲಾಗಿತ್ತು.

ಕಾವೇರಿ ತುಂಬಿ ಹರಿಯಲು ಹೀಗೆ ಮಾಡೋಣವೇ..!?  

  • ತಲಕಾವೇರಿಯಿಂದ ಬಂಗಳಕೊಲ್ಲಿ ಸೇರುವ ತನಕ ಕಾವೇರಿ ಹಾದಿ 802 ಕಿ.ಮೀ. ಈ ಹಾದಿಯುದ್ದಕ್ಕೂ ಮರಗಿಡಗಳು ಹುಲುಸಾಗಿ ಬೆಳೆಸುವತ್ತ ಗಮನಹರಿಸಬೇಕು. ಕಾಂಕ್ರೀಟ್ ರೋಡ್ಗಳು ಕಟ್ಟಡಗಳು ಕಟ್ಟೆಗಳು ಮರಗಿಡ ಬೆಳೆಯುವುದಕ್ಕೆ ಅವಕಾಶ ನೀಡುವುದಿಲ್ಲ. ಸಿಲ್ವರ್ ಓಕ್ ಮರನೆಡುವುದರ  ಬದಲಿಗೆ ವೈವಿದ್ಯಮಯ ಮರಗಿಡಗಳನ್ನು ನೆಡುವಂತಾಗಬೇಕು. ಸಿಲ್ವರ್ ಓಕ್ ಮರ ಬೆಳೆಸಿ ಮಾರುವ ವ್ಯಕ್ತಿಗೆ ಯಾವುದೇ ತಡೆಗಳಿಲ್ಲ. ಆದರೆ ಇತರ ಮರಗಿಡಗಳನ್ನು ನೆಟ್ಟು ಬೆಳೆಸಿದವನಿಗೆ ಅದನ್ನು ಕಡಿದು ಮಾರಲು ಅರಣ್ಯ ಇಲಾಖೆಯ ಕಿರಿಕಿರಿಯನ್ನು ಎದುರಿಸಬೇಕಾಗುತ್ತದೆ.  ಇದು ಸಂಪೂರ್ಣವಾಗಿ ನಿಲ್ಲಬೇಕು. ಹಾಗಾದ್ದಲ್ಲಿ ಮಾತ್ರ ಕೊಡಗಿನ ಜನತೆ ವಿವಿಧ ಮರ ಗಿಡಗಳನ್ನು ಬೆಳೆಸುವ ಆಸಕ್ತಿ ತೋರುತ್ತಾರೆ. ಅರಣ್ಯ ಇಲಾಖೆ ಕೂಡಾ ತನ್ನ ದಾಖಲೆಗಳಲ್ಲಿ ಮರಗಿಡ ನೆಟ್ಟು ಅದರ ಹಣವನ್ನು ದುರಪಯೋಗಪಡಿಸುತ್ತಿದೆ. ಅದರ ಬದಲಿಗೆ ನಿಜವಾಗಲೂ  ನದಿಗೆ ನೀರುಣಿಸುವ ಪ್ರದೇಶಗಳಲ್ಲಿ ನದಿ ಪಾತ್ರಗಳಲ್ಲಿ ನದಿಯ ಇಕ್ಕೆಲಗಳಲ್ಲಿ ಮರ ನೆಡುವ  ನಿರಂತರ ಅಭಿಯಾನವಾಗಬೇಕಿದೆ. ಅರಣ್ಯ ರಕ್ಷಣೆಗೆ ಸಕರ್ಾರದಿಂದ ಸಂಬಳ ಸವಲತ್ತುಗಳನ್ನು ಪಡೆದು ಅರಣ್ಯಯ ರಕ್ಷಣೆ ಮಾಡಲಾಗದ ಸಕರ್ಾರಿ ನೌಕರರಿಂದ ಜನಸಾಮಾನ್ಯರಿಗೆ ಮಾತ್ರವಲ್ಲ ಕಾವೇರಿಯಂತ ನದಿಗೂ ತೊಂದರೆ. ಈ ಬಗ್ಗೆ ತಮಿಳುನಾಡು ಮತ್ತು ಕನರ್ಾಟಕ ಎರಡೂ ರಾಜ್ಯಗಳವರು ಗಮನಹರಿಸಬೇಕಿದೆ.

 ಬರಹ-ಹರೀಶ್ ಆಳ್ವ  M.G




ಕಾಮೆಂಟ್‌ಗಳಿಲ್ಲ:

Pudiyodi There in Kakkabe , Kodagu.

https://kaveridarashin.blogspot.com/2015/11/blog-post_43.html