https://koodanda.blogspot.com

ಬುಧವಾರ, ಡಿಸೆಂಬರ್ 2, 2015

ಕಾವೇರಿಯ ಸ್ಥಳ ಪುರಾಣ Kavery History...............

ಕಾವೇರಿಯ ಸ್ಥಳ ಪುರಾಣ



Pl watch my blogs 


Kodagu Darshini : http://koodanda.blogspot.com/
Kodagu Darshini (Kodagina Antaranga): https://koodagudarshini.blogspot.com/
Koodanda Ravi:
https://www.indiblogger.in › ...

Kaveri Dharshini : https://kaveridarashin.blogspot.com


  ಕೃತಯುಗದಲ್ಲಿ ಕಶ್ಯಪಮುನಿಗೆ ಇಬ್ಬರು ಪತ್ನಿಯರು. ದಿತಿ-ಅದಿತಿ ಎಂಬ ಹೆಸರಿನ ಇವರು ಗರ್ಭವತಿಯರಾಗಿ ದಿತಿಯು ದೇವಮಕ್ಕಳನ್ನು  ಅದಿತಿ ರಾಕ್ಷಸಮಕ್ಕಳನ್ನೂ ಹೆತ್ತರು. ಹುಟ್ಟು-ಸಾವುಗಳ ವಿಚಾರ ಇವರ ಮಧ್ಯೆ ಚಚರ್ಿತವಾಗಿ ಪರಿಹಾರ ಕಂಡುಕೊಳ್ಳುವ ಚಿಂತನೆಯಲ್ಲಿ ಇರುವಾಗ ಇದನ್ನು ಶ್ರೀಮನ್ನಾರಾಯಣ ಅರಿತು ದೇವಮಕ್ಕಳನ್ನು, ರಕ್ಕಸಮಕ್ಕಳನ್ನು  ಕರೆದು ಭೂಮಿಯಲ್ಲಿ ಎತ್ತರ ಶಿಖರವನ್ನು ಕಿತ್ತು ಏಳು ಸಮುದ್ರಗಳಾಚೆ, ಕೆಂಪು ಕಡಲಲ್ಲಿ ಮುಳುಗಿಸಿ ಕಡೆದರೆ, ಅಮೃತ ಪಡೆಯಬಹುದು. ಆ ಅಮೃತ ಕುಡಿದರೆ ಹುಟ್ಟು-ಸಾವುಗಳ ಸಮಸ್ಯೆಯಿಲ್ಲದೆ ನೆಮ್ಮದಿಯಿಂದ ಬಾಳಬಹುದು ಎಂದನು.

ಈ ವಿಚಾರವು ಸಂತಸಕ್ಕೆ ಕಾರಣವಾಗಿ ದೇವಮಕ್ಕಳು-ರಕ್ಕಸರು ಹಾಲ್ಗಡಲನ್ನು ಕಡೆದರು. ಪರಿಣಾಮ ಧನ್ವಂತರಿ ಹುಟ್ಟಿ ಕಡಲಿಂದ ಮೇಲೆದ್ದು ಚಿನ್ನದ ಕಲಶದಲ್ಲಿ ಅಮೃತವನ್ನು ತಂದಿಟ್ಟಾಗ ದೇವತೆಗಳೂ-ರಕ್ಕಸರೂ ತಮಗೆ-ತಮಗೆಂದು ಕದನಕ್ಕಿಳಿದರು. ರಕ್ಕಸರು ಗೆದ್ದರು. ಕಲಶವನ್ನು ಹೊತ್ತು ರಾಕ್ಷಸರು ಹೊರಟಾಗ ಆತಂಕಗೊಂಡ ಶ್ರೀನಾರಾಯಣ ಮೋಹಿನಿ ರೂಪ ತಳೆದು ನಿಂತನು. ಅದೇ ವೇಳೆಗೆ ಲಕ್ಷ್ಮಿದೇವಿಯೂ ಸಹ ಪಾರ್ವತಿ ದೇವಿಯ ಅವತಾರದ ಲೋಪಮುದ್ರೆಯನ್ನು ಮೋಹಿನಿ ಜೊತೆ ಕಳುಹಿಸಿದಳು.
                                          ಭಾಗಮಂಡಲದ ಭಗಂಡೇಶ್ವರ ದೇಗುಲದ ಮುಂಭಾಗ 

ಚೇರಂಗಾಲದ ಕನ್ನಿಕುಂಡ

ಈ ಇಬ್ಬರು ಸುಂದರಿಯರನ್ನು ಕಂಡ ರಕ್ಕಸರು ತಮಗೆ ತಮಗೆಂದು ಅವರಿಗೆ ಬೆನ್ನುಬಿದ್ದು ಅಮೃತವನ್ನು ಮೋಹಿನಿಗಿತ್ತರು. ಮೋಹಿನಿ ರೂಪದಲ್ಲಿದ್ದ ಶ್ರೀಮನ್ನಾರಾಯಣ ಅಮೃತವನ್ನು ದೇವತೆಗಳಿಗೆ ಬಡಿಯಹತ್ತಿದ. ಇದರ ಒಳಸುಳಿವನ್ನು ಅರಿತ ರಕ್ಷಸನೊಬ್ಬ ದೇವತೆಗಳ ಸಾಲಿನಲ್ಲಿ ಬಂದು ಕುಳಿತು ಅಮೃತವನ್ನು ಪಡೆದು ಸೇವಿಸುತ್ತಿದ್ದಂತೆ ನಭೋಮಂಡಲದಿಂದ ಚಂದ್ರನ ಮೂಲಕ ಈ ವಿಚಾರ ಆಕಾಶವಾಣಿಯಾಗುತ್ತದೆ. ವಿಚಾರ ತಿಳಿಯುತ್ತಿದ್ದಂತೆ ಶ್ರೀಮನ್ನಾರಾಯಣ ತನ್ನ ಚಕ್ರಾಯುಧದಿಂದ ಇನ್ನೇನು  ಅಮೃತ ಪಡೆದು ತನ್ನ ಬಾಯಿಗೆ ಇರಿಸಿಕೊಂಡಿದ್ದ ರಕ್ಕಸನ ಕೊರಳು ಕತ್ತರಿಸುತ್ತಾನೆ. ರಕ್ಕಸ ಮಕ್ಕಳು ದೇವಮಕ್ಕಳನ್ನು ಬೆನ್ನತ್ತಲಾರಂಭಿಸಿದಾಗ ಮೋಹಿನಿಯಾದಿಯಾಗಿ ದೇವಮಕ್ಕಳು ಅಂತಧರ್ಾನರಾಗುತ್ತಾರೆ. ಲೋಪಮುದ್ರೆ ಅಲ್ಲೇ ಉಳಿದು ಬಿಡುತ್ತಾಳೆ. ಅವಳನ್ನು ಬ್ರಹ್ಮದೇವ ತನ್ನ ಮಾನಸ ಪುತ್ರಿಯಾಗಿ ಸ್ವೀಕರಿಸುತ್ತಾನೆ.

ಮುಂದೆ ಕಾವೇರನೆಂಬ ಬ್ರಾಹ್ಮಣನು ಬ್ರಹ್ಮಗಿರಿಯಲ್ಲಿ ವಾಸವಾಗಿದ್ದು ತನಗೆ ಸಂತಾನದ ಕುರಿತು ಬ್ರಹ್ಮದೇವನಲ್ಲಿ ಉಗ್ರ ತಪಸ್ಸನ್ನು ಮಾಡುತ್ತಾನೆ. ಈ ಬ್ರಾಹ್ಮಣನ ತಪಕ್ಕೆ ಒಲಿದ ಬ್ರಹ್ಮದೇವನು ಪ್ರತ್ಯಕ್ಷನಾಗಿ 'ನೀನು ಪೂರ್ವಕಾಲದಲ್ಲಿ ಸಂತಾನ ಪ್ರಾಪ್ತಿಗೆ ಬೇಕಾದ ರೀತಿಯ ಧರ್ಮವನ್ನು ಮಾಡಿಲ್ಲ. ಆದರೂ, ನಿನ್ನ ತಪಸ್ಸಿಗೆ ಮೆಚ್ಚಿ ನನ್ನ ಮಾನಸ ಪುತ್ರಿಯಾದ  ಲೋಪಮುದ್ರೆಯನ್ನು ನೀಡುತ್ತೇನೆ' ಎಂದು ಹೇಳಿದ. ಅದರ ಅನುಸಾರ ಈಗಿನ ಚೇರಂಗಾಲದ ಕನ್ನಿಕುಂಡ ಎಂಬ ಸ್ಥಳದಲ್ಲಿ ಕಾವೇರ ಲೋಪಮುದ್ರೆಯನ್ನು ತನ್ನ ಮಗಳಾಗಿ  ಸ್ವೀಕರಿಸಿದ.
                                                         ಭಾಗಮಂಡಲದಲ್ಲಿ ಕಾವೇರಿ ಸಂಗಮದ  ಒಂದು ನೋಟ


ಹೀಗೆ ದಿವ್ಯಾಂಶಳಾದ ಲೋಪಮುದ್ರೆಯ ಸೌಂದರ್ಯ ಯೋಗ್ಯತೆಗಳನ್ನು ಗ್ರಹಿಸಿದ ಕಾವೇರ ಸಕಲ ರೀತಿ ಸಂತುಷ್ಟನಾಗಿದ್ದ .ಈ ಹಂತದಲ್ಲಿ ಲೋಪಮುದ್ರಾದೇವಿಯು 'ತಂದೆಯೇ ನಾನು ಲೋಕಕಲ್ಯಾಣಕ್ಕಾಗಿ ನದಿರೂಪವಾಗಿ ಸಾಧನೆಗೈದು ಹರಿದು ಸಮುದ್ರವನ್ನು ಸೇರುತ್ತೇನೆ. ಜನರು ನನ್ನನ್ನು ಬ್ರಹ್ಮಪುತ್ರಿ ಎಂದೂ, ಮಾಯೆ ಎಂದೂ, ನಿಮ್ಮ ಪುತ್ರಿ ಕಾವೇರಿ ಎಂದು ಕರೆಯುವರು.  ಅಂತೆಯೇ,  ಜನರ ಪಾಪಗಳನ್ನು ನಾಶಮಾಡುವವಳಾಗಿ ಲೋಕ ಪ್ರಸಿದ್ಧಿಯಾಗುತ್ತೇನೆ' ಎಂದಳು.

ನಂತರ ಕವೇರ ಮುನಿಯು ತನ್ನ ಮಾನಸಪುತ್ರಿ ಲೋಪಮುದ್ರೆ ಅನುಗ್ರಹಕ್ಕೆ ಪಾತ್ರನಾಗಿ ದೇಹತ್ಯಾಗ ಮಾಡಿ ತನ್ನ ಪತ್ನಿ ಸಹಿತ ಬ್ರಹ್ಮಲೋಕ ಸೇರಿದ. ಮುಂದೆ ಈ ದೇವಕುವರಿ ಲೋಪಮುದ್ರೆ ಲೋಕಕಲ್ಯಾಣ ಸಾಧಿಸಲು ಶಿವನನ್ನು ಕುರಿತು ಕಠೋರ ತಪಸ್ಸನ್ನಾಚರಿಸಿ, ಬ್ರಹ್ಮಷರ್ಿಗಳೊಂದಿಗೆ ಬ್ರಹ್ಮಗಿರಿಯಲ್ಲಿ ನೆಲೆಸಿದಳು. ದಿವ್ಯಕಾಂತಿ ತಪದ ತೇಜಸ್ಸಿನಿಂದ ಲೋಪಮುದ್ರೆ ಕಾವೇರಿ ಬ್ರಹ್ಮಗಿರಿಯಲ್ಲಿರುವಾಗ ಋಷಿವರ್ಯರಾದ ಅಗಸ್ತ್ಯಮುನಿಗಳು ಉತ್ತರ ಭಾರತದಿಂದ ದಕ್ಷಿಣದ ಬ್ರಹ್ಮಗಿರಿಗೆ ಬಂದರು.

ನನ್ನನ್ನು ಕ್ಷಣವೂ ಬಿಟ್ಟಿರಬಾರದು.

ಬ್ರಹ್ಮಋಷಿಗಳ ತಪೋಭೂಮಿಯಾದ ಬ್ರಹ್ಮಗಿರಿಯಲ್ಲಿ ವಸಿಷ್ಠಾಧಿ ಮಹಷರ್ಿಗಳ ಭೇಟಿ ಮಾಡಿದ ಅಗಸ್ತ್ಯರು-ಋಷ್ಯಾಶ್ರಮದ ಮೂಲ ಶಕ್ತಿಯೇ ಎಂಬಂತಿದ್ದ ಈ ಲೋಪಮುದ್ರಾ-ಕಾವೇರಿಯನ್ನು ಕಂಡು ಹಷರ್ಿತರಾದರು. ತ್ರಿಕಾಲ ಜ್ಞಾನಿಗಳಾದ ಅಗಸ್ತ್ಯರು ಕಾವೇರಿಯ ಜನ್ಮದ ಮೂಲ ಉದ್ದೇಶವರಿತು ವಿವಾಹವಾಗಲು ಬಯಸಿದರು. ಮಹಷರ್ಿಗಳ ಬಯಕೆಗೆ ಕಾವೇರಿದೇವಿ ಒಪ್ಪಿ 'ನನ್ನನ್ನು ಕ್ಷಣವೂ ಬಿಟ್ಟಿರಬಾರದು. ಯಾವ ಕಾಲಕ್ಕೂ ಉಪೇಕ್ಷಿಸಿ ಹೊರಟು ಹೋಗಬಾರದೆಂದು, ಹೋದರೆ ತಾನು ನದಿಯಾಗಿ ನಮುದ್ರ ಸೇರುತ್ತೇನೆ' ಎಂದು ಹೇಳಿದಳು. ಈ ನಿಬಂದನೆಗೆ ಅಗಸ್ತ್ಯರು ಸಮ್ಮತಿಸಿದರು. ಅದರಂತೆ, ಋಷ್ಯಾಶ್ರಮದ ಪವಿತ್ರ ಸಾನಿಧ್ಯದಲ್ಲಿ ದೇವ ದೇವತೆಗಳ ಸಮ್ಮುಖದಲ್ಲಿ ಶ್ರೀ ಅಗಸ್ತ್ಯ-ಕಾವೇರಿಯರ ಮದುವೆ ವೇದೋಕ್ತ ರೀತಿ ನೇರವೇರಿತು.

ನಂತರ ಕೆಲ ಸಮಯ ನೂತನ ದಂಪತಿಗಳು ಗೃಹಸ್ಥಾಶ್ರಮ ಜೀವನ ಸಾಗಿಸಿದರು. ಹೀಗಿರುವಾಗ ಒಂದು ದಿನ ಬ್ರಾಹ್ಮೀಮುಹೋರ್ತದಲ್ಲಿ ಮಹಷರ್ಿ ಅಗಸ್ತ್ಯರು ಬ್ರಹ್ಮಗಿರಿಯ ಉತ್ತರ ತಪ್ಪಲಿನ ಕನ್ನಿಕೆ ನದಿಯ ತೀರಕ್ಕೆ ಸ್ನಾನಕೆಂದು ಹೋದರು. ಅಲ್ಲಿಗೆ ಹೋಗುವ ಮುನ್ನ ತಮ್ಮ ಪವಿತ್ರವಾದ ಕಮಂಡಲದಲ್ಲಿ ಕಾವೇರಿಯನ್ನು ಆವಾಹನೆ ಮಾಡಿ, ತಮ್ಮ ಶಿಷ್ಯರಿಗೆಲ್ಲಾ 'ಜಾಗ್ರತೆಯಾಗಿ ನೋಡಿಕೊಳ್ಳಿ' ಎಂದು ಹೇಳಿ ತೆರಳಿದರು.
ಭಾಗಮಂಡಲದಲ್ಲಿ ಕಾವೇರಿ ಸಂಗಮ


ಕಾವೇರಿ ಗುಪ್ತಗಾಮಿನಿಯಾಗಿ
ಲೋಕಪಾವನೆಯಾಗಿ ನದಿಯಾಗಿ ಇಳೆಯಲ್ಲಿ ಪ್ರವಹಿಸಬೇಕಾದ ಮಹಾತಾಯಿ ಕಾವೇರಿ, ಇದೇ ಸಂದರ್ಭ ನಿರೀಕ್ಷಿಸುತ್ತಿದ್ದಳೇನೋ ಎಂಬಂತೆ ತನ್ನ ನಿಬಂಧನೆಯನ್ನು ಅಗಸ್ತ್ಯರು ಉಲ್ಲಂಘಿಸಿದರೆಂದು ಕಮಂಡಲುವಿನಿಂದ ಹೊರಬಂದಳು. ಪಕ್ಕದ ಬ್ರಹ್ಮಕುಂಡಿಕೆಯನ್ನು ಸೇರಿ ಅಲ್ಲಿಂದ ಜಲರೂಪಿಣಿಯಾಗಿ ನದಿಯಾಗಿ ಹರಿಯ ತೊಡಗಿದಳು. ಇದನ್ನು ನೋಡಿದ ಅಗಸ್ತ್ಯರ ಶಿಷ್ಯ ಗುರುವಿನ ಆಜ್ಞೆಯ ಉಲ್ಲಂಘನೆಯಾಗುತ್ತದೆ ಎಂದು ಮನಗಂಡು ಕೂಡಲೇ ಕಾವೇರಿ ಮುಂದೆ ಹರಿಯದಂತೆ ಅವಳ ಸುತ್ತಲು ತನ್ನ ಮಂತ್ರ ಶಕ್ತಿಯಿಂದ ತಡೆ ಕಟ್ಟಿದ. ಈ ತಡೆಯಿಂದ ತಪ್ಪಿಸಿಕೊಳ್ಳಲು ಕಾವೇರಿ ಗುಪ್ತಗಾಮಿನಿಯಾಗಿ ಹರಿದು ಅಲ್ಲಿಂದ ತಪ್ಪಿಸಿಕೊಂಡು ಸ್ವಲ್ಪ ದೂರದ ನಂತರ ಗೋಚರಿಸಿದಳು.
 ನಾಗತೀರ್ಥ ಎಂಬ ಹೆಸರು?
ಈ ವಿಚಾರವನ್ನು ಅರಿತ ಅಗಸ್ತ್ಯ ಋಷಿ ಕಾವೇರಿಯನ್ನು ತಡೆಯುವ ಸಲುವಾಗಿ ದೊಡ್ಡ ಮೀನಿನ ರೂಪದಲ್ಲಿ ಕಾವೇರಿಗೆ ಇಳಿದು ಆಕೆಯನ್ನು ನುಂಗಿಬಿಡುತ್ತಾನೆ. ಆಗ ಮೀನಿನ ಬಾಯಿಯಿಂದ ಪ್ರವೇಶಿಸಿದ ಕಾವೇರಿ ಗುಹ್ಯಭಾಗದಿಂದ ಹೊರಹರಿಯುತ್ತಾಳೆ. ನದಿಯಾಗಿ ಹರಿಯುವುದು ಬೇಡ ಶರೀರಧಾರಿಯಾಗಿ ನನ್ನೊಂದಿಗೆ ಪತ್ನಿಯಾಗಿ ಬಾಳು ಎಂದು ಪರಿಪರಿಯಾಗಿ ಕೇಳಿಕೊಂಡರೂ ಲೆಕ್ಕಿಸದೆ  ಕಾವೇರಿಯು, ಲೋಕ ಕಲ್ಯಾಣದ ಉದ್ದೇಶದಿಂದ ನಾನು ನದಿರೂಪ ತಳೆದು ಹೋಗುತ್ತಿರುವುದಾಗಿ ಸ್ಪಷ್ಟವಾಗಿ ಹೇಳುತ್ತಾಳೆ. ಅಗಸ್ತ್ಯರು ಶಿಷ್ಯರನ್ನೊಳಗೊಂಡು ಕಾವೇರಿಯನ್ನು ಹಿಂಬಾಲಿಸುತ್ತಾರೆ. ಕಾವೇರಿಯು ನದಿಯಾಗಿ ಕೆಲಮೈಲುಗಳಷ್ಟು ದೂರ ಹರಿಯುತ್ತಿದ್ದಂತೆ ಅಗಸ್ತ್ಯರ ಬೆಂಬಲಕ್ಕೆ ಬಂದ  ನಾಗಲೋಕದವರು ಕಾವೇರಿಯ ಹಾದಿಗೆ ಅಡ್ಡಬಂದು ಕಾವೇರಿಯನ್ನು ಸ್ತುತಿಸಿ, ನದಿಯಾಗಿ ಹರಿಯದೆ ಹಾಗೆ ಉಳಿಯಲು ಹೇಳುತ್ತಾರೆ. ಅವರನ್ನು ಸಮಾಧಾನಿಸಿದ ಕಾವೇರಿ ಮುಂದೆ ಭಾಗಮಂಡಲ ಕ್ಷೇತ್ರದಲ್ಲಿ ಕನ್ನಿಕೆ ಮತ್ತು ಸುಜ್ಯೋತಿ ನದಿಗಳ ಜೊತೆ ಸೇರಿ ಮುಂದೆ ಹರಿಯುತ್ತಾಳೆ. ಹೀಗೆ ನಾಗಲೋಕದವರು ತಡೆದ ಸ್ಥಳಕ್ಕೆ ನಾಗತೀರ್ಥ ಎಂಬ ಹೆಸರು ಬಂತು.
 ಅಗಸ್ತ್ಯ ಶಾಪ

ಮುಂದೆ ಕೆಲವು ಮೈಲುಗಳು ಸಾಗಿ ಬಲಮುರಿ ತಲುಪಿದಾಗ ಅಲ್ಲಿ ಕೊಡಗನ್ನು ಆಳುತ್ತಿದ್ದ ಚಂದ್ರವರ್ಮ ರಾಜ ತಮ್ಮ ಪರಿವಾರವರು ಮತ್ತು ಕಾವೇರಿಯ ಬಗ್ಗೆ ಭಕ್ತಿ ಹೊಂದಿದ್ದವರು ಎದುರುಗೊಂಡರು. ಅಲ್ಲೂ ಹಿಂಬಾಲಿಸಿ ಬಂದ ಅಗಸ್ತ್ಯರು ಮತ್ತವರ ವೃಂದದವರು ಅಂದಿನ ಕೊಡವ ಜನಾಂಗದ ಪ್ರಮುಖರು ಸೇರಿ ಅಗಸ್ತ್ಯ ಮತ್ತು ಕಾವೇರಿ ನಡುವಿನ ವಿವಾದವನ್ನು ಪರಿಹರಿಸಲು ಪ್ರಯತ್ನಿಸುತ್ತಾರೆ. ಈ ವಿಶೇಷವನ್ನು ನೋಡಲು ಶಿವ, ವಿಷು,್ಣ ಗಣಪತಿ, ಸುಬ್ರಹ್ಮಣ್ಯ ಸಮೇತ ಬಂದು ನೆರೆಯುತ್ತಾರೆ. ಒಂದರೆ ಘಳಿಗೆಯೂ ಬಿಟ್ಟಿರಲಾರೆ ಎಂದು ಮಾತುಕೊಟ್ಟಿದ್ದ ಮುನಿ  ಮಾತು ತಪ್ಪಿದ್ದರಿಂದ ಕಾವೇರಿ ಮಾಡಿದ್ದು ಸರಿ ಎಂದು ನ್ಯಾಯನಿರ್ಣಯ ಮಾಡಿದ ಕೊಡವರ ಮೇಲೆ ಕೋಪಗೊಂಡ ಅಗಸ್ತ್ಯರು ನಿಮ್ಮ ನಡುವೆ ಒಗ್ಗಟ್ಟು ಮುರಿದುಹೋಗಲಿ ಎಂದು ಶಾಪವಿತ್ತರು. ಈ ಶಾಪ ವಿಮೋಚನೆಗಾಗಿ ಕೊಡವರು ವರ್ಷಗಳ ಹಿಂದೆ ಭಾಗಮಂಡಲದಲ್ಲಿ ಶಾಂತಿ ಹೋಮವನ್ನೂ  ನಡೆಸಿರುವುದು ಕಾವೇರಿ ಪುರಾಣದ ಬಗ್ಗೆ ಕೊಡವರು ಇಟ್ಟಿರುವ ನಂಬಿಕೆಗೆ ಸಾಕ್ಷ್ಷಿಯಾಗಿದೆ.

ಸದಾ ಸುಖಿಗಳಾಗಿರಿ.
ಕಾವೇರಿ ಅಗಸ್ತ್ಯರ ನಡುವಿನ ವಿವಾದದ ನ್ಯಾಯತೀಮರ್ಾನ ಸಂದರ್ಭದಲ್ಲಿ ಅಗಸ್ತ್ಯರ ಪರವಹಿಸಿದ ಹೆಚ್ಚಿನ ಸಂಖ್ಯೆಯಲ್ಲಿದ್ದ ಅಮ್ಮ ಕೊಡವರಿಗೆ ನೂರು ಇರುವ  ನಿಮ್ಮ ಸಂತತಿ ಒಂದಕ್ಕಿಳಿಯಲಿ  ಎಂದೂ, ಒಂದಿರುವ   ಕೊಡವರು ನೂರು ಆಗಲಿ ಎಂದು ವರನೀಡುತ್ತಾಳೆ. `ಕಾವೇರಿಯ ಹರಿಯುವಿಕೆಯ ರಭಸಕ್ಕೆ ನೆರೆದಿದ್ದ ಸ್ತ್ರೀಯರ ಸೀರೆ ನೆರಿಗೆಯು ಹಿಂಬದಿಗೆ ಸರಿದು ಹೋಯಿತು. ಆಗ ಅಲ್ಲಿ ಸೇರಿದ್ದ ತನ್ನ ಪತಿ ಅಗಸ್ತ್ಯರೂ ಸೇರಿದಂತೆ ಎಲ್ಲರನ್ನು ಉದ್ದೇಶಿಸಿ ಕಾವೇರಿಮಾತೆ ಹೀಗೆ ಹೇಳಿದಳು. ತಾನು ಲೋಕೋದ್ಧಾರಕ್ಕೆ ನದಿಯಾಗಿ ಹೋಗುತ್ತಿದ್ದೇನೆ. ದ್ವಿರೂಪ ತಾಳಿ ಒಂದು ರೂಪದಲ್ಲಿ ಲೋಪಮುದ್ರೆಯಾಗಿ ತನ್ನ ಪತಿ ಅಗಸ್ತ್ಯರೊಂದಿಗೆ ಉಳಿದು, ಇನ್ನೊಂದು ರೂಪ ಕಾವೇರಿ ನದಿಯಾಗಿ ಲೋಕೋಪಕಾರವನ್ನು ಮಾಡುತ್ತಾ ನಮುದ್ರವನ್ನು ಸೇರುವೆ. ಸತ್ಯ-ಧರ್ಮ, ಪ್ರೇಮ, ಭಕ್ತಿ, ಶ್ರದ್ಧೆಗಳಿಂದ ಸದಾ ಸುಖಿಗಳಾಗಿರಿ. ಈ ದಿನ ಇಲ್ಲಿ ಹಿಂದೆ ಸರಿದು ಹೋದ ಸೀರೆ ನೆರಿಗೆಗಳು ನಾನು ನದಿ ರೂಪ ತಳೆದು ಹರಿದುದರ ನೆನಪಿಗೆ ಮುಂದೆಯು ಹೀಗೆ ನಿತ್ಯಾಚರಣೆಯಲ್ಲಿ ನೆರಿಗೆ ಕ್ರಮವಾಗಿ ಅನುಸರಿಸಿ ಎಂದು ಕೊಡವ ಮಹಿಳೆಯರಿಗೆ ಹರಸಿದಳು.
ವರ್ಷಕ್ಕೊಮ್ಮೆ ಸೂರ್ಯ ತುಲಾರಾಶಿಗೆ ಪ್ರವೇಶಿಸುವ ತುಲಾಸಂಕ್ರಮಣ ಪುಣ್ಯಕಾಲದಲ್ಲಿ ಗಂಗಾದಿ ಸಮಸ್ತ ಪುಣ್ಯ ತೀರ್ಥಗಳಿಂದ ನಾನು ಚಲಿಸುವವಳಾಗುತ್ತೇನೆ. ನಾನು ಜನ್ಮವೆತ್ತ ದಿನದಂದು ಬಂದು ನನ್ನಲ್ಲಿ ತೀರ್ಥಸ್ನಾನ ಮಾಡುವವರು ತಮ್ಮ ಸಕಲ ಪಾಪದೋಷಗಳಿಂದ ಮುಕ್ತರಾಗುವರು ಎಂದು ಅಭಯ ನೀಡಿ ಅಲ್ಲಿದ್ದವರನ್ನು ಹರಸಿ ನದಿರೂಪದಲ್ಲಿ ಮುಂದೆ ಹರಿಯುತ್ತಾಳೆ.  ಪತಿ ಅಗಸ್ತ್ಯರು ಸಹ ಸತಿ ಕಾವೇರಿಯನ್ನು ಹರಸಿ ಅವಳ ಮೂಲಕ ಲೋಕ ಕಲ್ಯಾಣ ಉಂಟಾಗಲಿ ಎಂದರು.

ಕಾವೇರಿಯು ಬಲಮುರಿಯಿಂದ ಹೊರಟು ಗುಹ್ಯ, ಕುಶಾಲನಗರ, ರಾಮಸ್ವಾಮಿ ಕಣಿವೆ, ಶಿರಂಗಾಲ, ರಾಮನಾಥಪುರ, ಚುಂಚನಕಟ್ಟೆ, ಕನ್ನಂಬಾಡಿ ಪ್ರದೇಶಗಳನ್ನು ಹಾದು ಪಶ್ಚಿಮವಾಹಿನಿಯಾಗಿ ಶ್ರೀರಂಗಪಟ್ಟಣ ಹತ್ತಿರ ಹರಿದು, ಪುನಃ ಪೂವರ್ಾಭಿಮುಖವಾಗಿ ಸಾಗಿ ಶ್ರೀರಂಗಪಟ್ಟಣವನ್ನು ಸೇರಿದಳು. ಮುಂದೆ ತಿರುಮಕೂಡಲು, ತಲಕಾಡು, ಮೆಟ್ಟೂರು, ಶ್ರೀರಂಗಂ, ತಿರುಚ್ಚಿ, ಕುಂಭಕೋಣಂ ಇತ್ಯಾದಿ ಊರುಗಳನ್ನು ದಾಟಿ ಪಂಪುಹಾರ್ನಲ್ಲಿ ಬಂಗಾಳ ಕೊಲ್ಲಿಯನ್ನು ಸೇರುತ್ತಾಳೆ.

ಕೊಡಗಿನಲ್ಲಿ ಕಾವೇರಿಯೊಂದಿಗೆ ಅಂತರ್ಗತವಾಗುವ ಉಪ ನದಿಗಳಾದ ಕನ್ನಿಕೆ ಮತ್ತು ಸ್ಮಜ್ಯೋತಿ ಪ್ರಮುಖವಾದವು. ಈ ನದಿಗಳಿಗೆ ತಮ್ಮದೇ ಆದ ಪೌರಣಿಕತೆ ಇದೆ. ಸುಜ್ಯೋತಿಯು ಕನ್ನಿಕೆಯಂತೆ ಕಾವೇರಿಯನ್ನು ನದಿ ರೂಪಳಾಗಿ ಹರಿದು ಸೇರಿ ಸಂಗಮಗೊಳ್ಳುತ್ತಾಳೆ.  ಗಂಗಾ, ಯಮುನಾ ಹಾಗೂ ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಸರಸ್ವತಿ ನದಿ ಹೇಗೆ ಅಜ್ಞಾತವಾಗಿ ಸೇರುವುದೋ(ಸಂಗಮ) ಹಾಗೆಯೇ ಕನ್ನಿಕಾ-ಕಾವೇರಿ ನದಿಗಳ ಜೊತೆ ಸುಜ್ಯೋತಿಯ ಸಂಗಮವಾಗಿರುತ್ತದೆ.

ಕನ್ನಿಕೆಯು ಪೌರಣಿಕವಾಗಿ ಇಂದ್ರ ಪರಿಚಾರಿಕೆಯಾದ ಯಕ್ಷಶ್ರೀ. ಸುಯಜ್ಞನೆಂಬ ಬ್ರಾಹ್ಮಣ ಶ್ರೀನಾರಾಯಣನನ್ನು ಕುರಿತು ತಪಸ್ಸು ಮಾಡಿದ. ಭಕ್ತನ ತಪಕ್ಕೆ ಒಲಿದ ಭಗವಂತ ಶ್ರೀಯಜ್ಞನಿಗೆ ತನ್ನಂಶದಿಂದ ಉತ್ಪನ್ನಳಾದ ಕನ್ನಿಕೆ ಸ್ಮಜ್ಯೋತಿ ಎಂಬುವವಳನ್ನು ಕೊಟ್ಟು ಬ್ರಹ್ಮಗಿರಿಯ ಬಳಿ ಗಜರಾಜಗಿರಿಗೆ ತೆರಳಿ ಪುತ್ರಿಯೊಡನೆ ಇರು ಎಂದು ಹೇಳಿ ಅದೃಶ್ಯನಾದ. ಸುಯಜ್ಞನು ಕುವರಿ ಸ್ಮಜ್ಯೋತಿ ಜೊತೆ ಗಜರಾಜಗಿರಿಗೆ ಬಂದ ಅಲ್ಲಿ ಶುಭಕಾರಿಣಿ ಯಕ್ಷೀಣಿಯಾದ ಕನ್ನಿಕೆ ಜೊತೆ ಪುತ್ರಿ ಸ್ಮಜ್ಯೋತಿಯನ್ನು ಕೂಡಿ ಶುದ್ಧ ಚಾರಿತ್ರ್ಯವಂತನಾಗಿ, ತಪೋನಿಷ್ಠನಾಗಿದ್ದನು. ಕೆಲ ಕಾಲದ ನಂತರ ಮಹಾವಿಷ್ಣುವಿನ ದರ್ಶನ ಲಾಭ ಪಡೆದು ವೈಕುಂಠಕ್ಕೆ ತೆರಳಿದ. ತಂದೆಯ ನಿರ್ಗಮನದ ನಂತರ ಪುತ್ರಿ ಸ್ಮಜ್ಯೋತಿ ಭಗವಂತನ ದರ್ಶನಕ್ಕೆ ವಿಶೇಷ ತಪ ಮಾಡುತ್ತಾಳೆ.

ದೇವಲೋಕದ ಒಡೆಯ ದೇವೆಂದ್ರನು ಅಲ್ಲಿಗೆ ಬಂದ ಸುಜ್ಯೋತಿಯನ್ನು ಮದುವೆಯಾಗ ಬಯಸಿದ ಅವನು ಸ್ಮಜ್ಯೋತಿಯನ್ನು ಕುರಿತು ಸಾವಿರ ವರ್ಷಗಳ ನಂತರ ನದಿಯಾಗಿ ಹೋಗು ಅಲ್ಲಿಯವರೆಗೆ ನನ್ನೊಂದಿಗೆ ಪತ್ನಿಯಾಗಿ ಬಾಳು ಎಂದು ಹೇಳಿದನು. ಇಂದ್ರನ ಬಯಕೆಯಿಂದ  ಬೇಸರಗೊಂಡ ಸುಜ್ಯೋತಿ ಕನ್ನಿಕೆಯೊಂದಿಗೆ ಮಾತನಾಡಿ, ಆಕೆಯನ್ನು ಒಪ್ಪಿಸಿ ಅವಳೊಂದಿಗೆ ಸೇರಿ ನದಿ ರೂಪ ತಳೆದು ಹರಿಯ ಹೊರಟಳು. ತನ್ನ ಮಾತನ್ನು ಲೆಕ್ಕಿಸದೆ ನದಿಯಾಗಿ ಹೊರಟ ಸ್ಮಜ್ಯೋತಿಯನ್ನು ಕಂಡು ಇಂದ್ರ 'ಜಲಶೂನ್ಯಳಾಗು' ಎಂದು ಶಾಪಕೊಟ್ಟ. ಸುಜ್ಯೋತಿ ಇಂದ್ರನಲ್ಲಿ ಮರುಸಮಾಧಾನದ ವರಬೇಡಲು ಇಂದ್ರನು ಪರಮಪಾವನೆಯಾದ ಕಾವೇರಿ ನದಿಯ ಪವಿತ್ರ ಸ್ಪರ್ಶದಿಂದ 'ಜಲಪೂರ್ಣಳಾ'ಗೆಂದು ಮರುವರವಿತ್ತನು. ಅದರಂತೆ, ಸುಜ್ಯೋತಿ  ಕನ್ನಿಕೆ ಕಾವೇರಿ ಸಂಗಮದ ಪವಿತ್ರ ಮೂಹೂರ್ತವನ್ನು ನಿರೀಕ್ಷಿಸುತ್ತಿದ್ದಳು. ಕಾವೇರಿ-ಕನ್ನಿಕೆಯರ ಸಂಗಮವಾಗಿ, ಸುಜ್ಯೋತಿಯು ಸೇರಿ ಜಲಪೂಣರ್ೇಯಾಗಿ ಪವಿತ್ರ ನದಿಯಾಗಿ ರೂಪಾಂತರ ಹೊಂದಿದಳು.


ಭಗಂಡೇಶ್ವರ ಪುರಾಣ


ಭಾಗಮಂಡಲ ಕ್ಷೇತ್ರವೇ ಭಗಂಡಕ್ಷೇತ್ರವಾಗಿ ಪುರಾಣ ಪ್ರಸಿದ್ಧ ಸ್ಥಳವಾಗಿದೆ. ಇಲ್ಲಿ ಭಗಂಡೇಶ್ವರ, ಸುಬ್ರಮಹ್ಮಣ್ಯ ಮತ್ತು ಮಹಾವಿಷ್ಟು ದೇವರುಗಳು ಒಂದೆಡೆಯಲ್ಲಿವೆ.  ಶ್ರೀ ಮಹಾಗಣಪತಿ ಹೊರ ಅಂಗಳದಲ್ಲಿದ್ದಾನೆ.
ಭಗಂಡರೆಂಬ ಮುನಿವರ್ಯರು ಇಲ್ಲಿ ನೆಲೆಸಿ ಷಣ್ಮುಖನನ್ನು ಕುರಿತು ತಪಸ್ಸು ಮಾಡಿ,  ಅವನ ಅನುಗ್ರಹಕ್ಕೆ ಪಾತ್ರರಾಗಿದ್ದರು. ಸುಬ್ರಮಹ್ಮಣ್ಯ ಸ್ವಾಮಿಯ ದಿವ್ಯ ನೆಲೆಯಾಗಿದ್ದು ಸ್ಕಂದಕ್ಷೇತ್ರ ಎಂಬ ಪ್ರಸಿದ್ಧಿ ಪಡೆದಿದ್ದ ಇಂದಿನ ಭಾಗಮಂಡಲ ಭೂಭಾಗವನ್ನು ಭಗಂಡ ಋಷಿಗಳ ಮೇಲೆ ಸುಪ್ರೀತರಾಗಿ ಸುಬ್ರಮಹ್ಮಣ್ಯಸ್ವಾಮಿಯು ಅನುಗ್ರಹ ಪೂರ್ವಕವಾಗಿ ಅವರಿಗೆ ಕೊಡುಗೆಯಾಗಿ ಕೊಡುತ್ತಾರೆ.
ಋಷಿಗಳ ಪರಮಪಾವನವಾದ ತಪೋಭೂಮಿ ಹಾಗೂ ದೇವನೆಲೆಯಾದ ಸ್ಕಂದ ಕ್ಷೇತ್ರದಲ್ಲಿ ಸಕಲ ಜೀವನಕ್ಷೇಮಕ್ಕೆ ಶಿವಲಿಂಗವನ್ನು ಭಗಂಡ ಮಹಷರ್ಿಗಳು ಪ್ರತಿಷ್ಠಾಪಿಸುತ್ತಾರೆ. ಭಗಂಡ ಋಷಿಯು ನೆಲೆಸಿ ತಪಸ್ಸನ್ನು ಮಾಡಿ ಷಣ್ಮುಖನಿಂದ ಅನುಗ್ರಹವಾಗಿ ಪಡೆದ ಕ್ಷೇತ್ರವಾದ್ದರಿಂದ ಭಗಂಡಕ್ಷೇತ್ರವೆಂದು ಹೆಸರಾಯಿತು.
ಭಗಂಡ ಋಷಿಗಳು ಶಿವಲಿಂಗವನ್ನು ಪ್ರತಿಷ್ಠಾಪಿಸಿದ ಈ ಕ್ಷೇತ್ರದಲ್ಲಿ ಶಿವನನ್ನೇ ಪ್ರಧಾನವಾಗಿ ಪೂಜಿಸುವಂತಾಯಿತು. ಮಹಾ ತಪಸ್ವಿಗಳಾದ ಭಗಂಡ ಮಹಷರ್ಿಗಳು ತಪಸ್ಸನ್ನು ಮಾಡಿದ ಸ್ಥಳವು ಸುಬ್ರಮಹ್ಮಣ್ಯ ಸ್ವಾಮಿಯ ಸ್ವಕ್ಷೇತ್ರವಾದ ಈ ಭೂಭಾಗವು ಋಷಿಪ್ರತಿಷ್ಠೆ, ಶಿವದೇಗುಲದಿಂದ ಕೂಡಿ ಪವಿತ್ರ ಕ್ಷೇತ್ರವಾಗಿದೆ.

ಪರಮ ಪಾವನೆ ಕಾವೇರಿ ನದಿ ಭಾಗಮಂಡಲಕ್ಕೆ ಹರಿದು ಬಂದಾಗ ಕನ್ನಿಕೆ ಸುಜ್ಯೋತಿಯರು ಸೇರಿ ತ್ರಿವೇಣಿ ಸಂಗಮವಾಗಿರುವುದು ಪುಣ್ಯಕ್ಷೇತ್ರವಾಗಿದೆ. ಇಲ್ಲಿ ಮಂತ್ರಸಿದ್ಧಿ, ತಪಸ್ಸಿದ್ಧಿ, ಆಧ್ಯಾತ್ಮ ಸಾಕ್ಷಾತ್ಕಾರ-ಇವುಗಳು ಸಾಧಕನಿಗೆ ಬೇಗ ಲಭಿಸುತ್ತವೆಂದು ಸ್ಥಳ ಪುರಾಣ ತಿಳಿಸುತ್ತದೆ.


-- ಸಬಲಂ ಭೋಜಣ್ಣರೆಡ್ಡಿ,  ಬಾಚರಣಿಯಂಡ ಅಪ್ಪಣ್ಣ 
-------------

ಸೋಮವಾರ, ನವೆಂಬರ್ 30, 2015

Why Kaveri Dry Now ......... ಬತ್ತುತ್ತಿದೆ ಕಾವೇರಿ ಒಡಲು

ಬತ್ತುತ್ತಿದೆ ಕಾವೇರಿ ಒಡಲು

ವಿವೇಚನಾಶೂನ್ಯ ತಮಿಳುನಾಡು -ಕನರ್ಾಟಕ ! 


ಕಾವೇರಿ ನದಿ ಕೇವಲ ಕನರ್ಾಟಕದ ಜೀವನದಿ ಮಾತ್ರವಲ್ಲ ಅದು ತಮಿಳುನಾಡಿಗೂ ಜೀವನದಿ. ಈ ಕಾರಣದಿಂದಾಗಿ ಕಾವೇರಿಯ ನೀರು ನಮಗೆ ಹೆಚ್ಚು ಬೇಕು ನಮಗೆ ಹೆಚ್ಚು ಬೇಕು ಎಂಬುದಾಗಿ ಎರಡೂ ರಾಜ್ಯಗಳು ವರ್ಷಗಳಿಂದ ಜಗಳಕ್ಕಿಳಿದಿವೆ. ಕೊಡಗಿನ ತಲಕಾವೇರಿಯಲ್ಲಿ ಜನಿಸಿ ಮೈದುಂಬಿಕೊಂಡು ಹರಿಯುವ ಕಾವೇರಿ; ಕನರ್ಾಟಕ, ತಮಿಳುನಾಡು, ಕೇರಳದ ಒಂದಷ್ಟು ಭಾಗ ಮತ್ತು ಪುದುಚೇರಿ ಜನರ ಬಾಯಾರಿಕೆ ತಣಿಸುವುದಲ್ಲದೆ ಅವರ ಕೃಷಿ ಕೈಗಾರಿಕೆಗಳ ನೀರಿನ ಅಗತ್ಯವನ್ನು ಪೂರೈಸಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾವೇರಿ ನದಿ ಪೂರ್ಣತುಂಬಿಕೊಳ್ಳದೆ ಸೊರಗುತ್ತಿದೆ ಈ ಕಾರಣದಿಂದ  ಇತ್ತೀಚಿಗೆ ಪ್ರಮುಖ ಜಲಾಶಯಗಳಾದ ಕೃಷ್ಣರಾಜ ಸಾಗರ, ಹಾರಂಗಿ, ಕಬಿನಿ, ಹೇಮಾವತಿಗಳು ಪೂರ್ಣವಾಗಿ ತುಂಬಿಕೊಳ್ಳುತ್ತಿಲ್ಲ.

ಸೊರಗುತಿರುವ ಕಾವೇರಿ 

ಕಾವೇರಿ ತನ್ನ ನದಿಮೂಲ ಕೊಡಗಿನಲ್ಲಿಯೇ ಸೊರಗಲಾರಂಭಿಸಿದೆ. ಕೊಡಗಿನ ವನಸಿರಿ ಸೇರಿದಂತೆ ಕಾವೇರಿ ಸಾಗುವ ಹಾದಿಯುದ್ದಕ್ಕೂ ಇರುವ ಕಾಡುಗಳ ರಕ್ಷಣೆಮಾಡಬೇಕಾಗಿದೆ. ನದಿ ಕಲುಷಿತಗೊಳ್ಳದಂತೆ ಸಮರ್ಪಕವಾದ ವೈಜ್ಞಾನಿಕ ಯೋಜನೆಗಳನ್ನು ಹಾಕಿಕೊಳ್ಳಬೇಕಾಗಿದೆ. ಇದ್ಯಾವುದರ ಗೋಜಿಗೂ ತಲೆಕೆಡಿಸಿಕೊಳ್ಳದ ಕನರ್ಾಟಕ ತಮಿಳುನಾಡುಗಳು ಬಡಿದಾಡಿಕೊಳ್ಳುತ್ತಿವೆ. ಗಂಡ ಹೆಂಡಿರ ಜಗಳದ ನಡುವೆ ಕೂಸು ಕಾವೇರಿ ಬಡವಾಗಿದ್ದಾಳೆ ಅವಳನ್ನು ಕೇಳುವವರೇ ಇಲ್ಲವಾಗಿದೆ.
ಕಾಡುಗಳ ನಾಶ, ಪ್ರಕೃತಿ ಕಾಳಜಿ ಇಲ್ಲದ ಅಭಿವೃದ್ದಿ, ಯಾಂತ್ರೀಕರಣ, ಮಿತಿಮೀರಿ ಬೆಳೆದಿರುವ ಜನಸಂಖ್ಯೆ, ದಿನದಿಂದ ದಿನಕ್ಕೆ ನೀರಿನ ಅಭಾವವನ್ನು ಸೃಷ್ಟಿಸುತ್ತಿದೆ. ಈ ಕಾರಣದಿಂದ ನೀರಿಗಾಗಿ ಎಲ್ಲರೂ ಜಗಳ ಮಾಡುವವರೇ. ಮೂರನೇ ಜಾಗತಿಕ ಯುದ್ದ ನಡೆದರೆ ಅದು ನೀರಿಗಾಗಿಯೇ ನಡೆಯುತ್ತದೆ ಎಂದಿರುವುದು ತಮಿಳುನಾಡು ಕನರ್ಾಟಕ ಪಾಲಿಗಂತು ಸತ್ಯವಾಗಿದೆ. ಕಾವೇರಿ ನದಿನೀರಿಗಾಗಿ ಎರಡೂ ರಾಜ್ಯಗಳು ಬಂದ್ ಆಚರಿಸಿವೆ, ಬಡಿದಾಡಿಕೊಂಡಿವೆ ;ಹೆಣ ಉರುಳಿಸಿವೆ.
ಕನರ್ಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಕಾವೇರಿ ವಿವಾದ ಇಂದು ನಿನ್ನೆಯದಲ್ಲ. ಅದು ಭಾರತದಲ್ಲಿ ಬ್ರಿಟಿಷ್ ಆಡಳಿತೆ ಇದ್ದಾಗಲೇ ಆರಂಭಗೊಂಡಿತ್ತು.
ಎರಡೂ ಪ್ರಾಂತ್ಯಗಳೊಳಗೆ ಭಿನ್ನಾಭಿಪ್ರಾಯ
1870ರ ಸುಮಾರಿಗೆ. ಬ್ರಿಟಿಷ್ ಆಡಳಿತದಲ್ಲಿನ ಮೈಸೂರು ಮತ್ತು ಮದ್ರಾಸ್ ಪ್ರಾಂತ್ಯಗಳಲ್ಲಿ ನೀರಿನ ಅಭಾವ ಕಾಣಿಸಿಕೊಂಡಾಗ ಅಂದಿನ ಮೈಸೂರು ಆಡಳಿತ ಕಾವೇರಿಗೆ ಸಂಬಂಧಿಸಿದ ನೀರಾವರಿ ಯೋಜನೆಗಳನ್ನು ವಿಸ್ತರಿಸುವುದಕ್ಕೆ ಮುಂದಾದಾಗ ಮದ್ರಾಸ್ ಪ್ರಾಂತ್ಯದ ಆಡಳಿತ ಅದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಈ ವಾದ ವಿವಾದಗಳು ತಾರಕಕ್ಕೇರಿ 1892 ರಲ್ಲಿ ಬ್ರಿಟಿಷ್ ಆಡಳಿತದ ನೇತೃತ್ವದಲ್ಲಿ ಮದ್ರಾಸ್ ಮತ್ತು ಮೈಸೂರು ಎರಡೂ ಪ್ರಾಂತ್ಯಗಳ ಆಡಳಿತೆಗಳ ನಡುವೆ ಕಾವೇರಿ ನದಿ ನೀರನ್ನು ಬಳಸುವ ನಿಟ್ಟಿನಲ್ಲಿ  ಕೆಲವೊಂದು ರೂಪುರೇಷೆಗಳನ್ನು ಸಿದ್ದಪಡಿಸಿ ಒಪ್ಪಂದ ಏರ್ಪಟ್ಟಿತ್ತು.
ಈ ನಡುವೆ 1910ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಮಿಜರ್ಾ ಇಸ್ಮಾಯಿಲ್ ಶ್ರೇಷ್ಠ ತಂತ್ರಜ್ಞ ವಿಶ್ವೇಶ್ವರಯ್ಯನವರ ಮಾರ್ಗದರ್ಶನದಲ್ಲಿ ಕನ್ನಂಬಾಡಿ ಅಣೆಕಟ್ಟು (ಕೆಆರ್ಎಸ್) ಕಟ್ಟುವ ವಿಚಾರ ಮಾಡಿದಾಗ. ಈ ಯೋಜನೆಯಲ್ಲಿ ಒಟ್ಟು  41.5 ಟಿಎಂಸಿ ನೀರನ್ನು ಸಂಗ್ರಹಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಮೊದಲ ಹಂತದ ಕಾಮಗಾರಿಯಲ್ಲಿ 11 ಟಿಎಂಸಿ ನೀರು ಸಂಗ್ರಹಿಸುವ ನಿಟ್ಟಿನಲ್ಲಿ ಕಾಮಗಾರಿ ನಡೆಯಿತು. ಎರಡನೇ ಹಂತದಲ್ಲಿ ಈ ಯೋಜನೆಯನ್ನು ಪೂತರ್ಿಗೊಳಿಸುವ  ಕಾಮಗಾರಿಗೆ ಮೈಸೂರು ಕಾರ್ಯಪ್ರವೃತ್ತವಾದಾಗ ಈ ವಿಚಾರಕ್ಕೆ ಮದ್ರಾಸ್ನಿಂದ ವಿರೋಧ ವ್ಯಕ್ತವಾಗಿತ್ತು. ಮಾತ್ರವಲ್ಲ ಮೆಟ್ಟೂರುನಲ್ಲಿ 11  ಟಿಎಂಸಿ ನೀರು ಸಂಗ್ರಹಿಸುವ ಅಣೆಕಟ್ಟೊಂದನ್ನು ತಾವೂ ಕಟ್ಟಿಕೊಳ್ಳುತ್ತೇವೆ ಎಂದು ಮದ್ರಾಸ್ ಆಡಳಿತ ಹೇಳಿತು. ಈ ವಿಚಾರಗಳು ಎರಡೂ ಪ್ರಾಂತ್ಯಗಳೊಳಗೆ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು.

ಕನರ್ಾಟಕವನ್ನು ಮರೆತು ಹೇಳಿಕೆಗಳು
1947ರಲ್ಲಿ ಭಾರತ ಸ್ವಾತಂತ್ರ್ಯಗೊಂಡ ನಂತರ ಉದಯವಾದ ಭಾಷಾವಾರು ರಾಜ್ಯಗಳ ಸಂದರ್ಭದಲ್ಲಿ ಕಾವೇರಿನದಿ ನೀರು ಮದ್ರಾಸ್ ಪ್ರಾಂತ್ಯ ತಮಿಳುನಾಡು, ಕೇರಳ, ಮತ್ತು ಪುದುಚೇರಿ  ರಾಜ್ಯಗಳ ನಡುವೆ ಹಂಚಿ ಹೋಯಿತು. ಈ ಕಾರಣದಿಂದ ಕಾವೇರಿ ನದಿ ನೀರಿಗಾಗಿ ನಾಲ್ಕು ರಾಜ್ಯಗಳ ಜನ ಕಿತ್ತಾಡುವಂತಾಯಿತು. ಕಾವೇರಿ ನದಿ ನೀರು ತಮಿಳುನಾಡು ಮತ್ತು ಕನರ್ಾಟಕವನ್ನು ಬದ್ದ ಶತ್ರುಗಳನ್ನಾಗಿ ಮಾಡಿತು. ಇದು ಎಷ್ಟರಮಟ್ಟಿಗೆ ಎಂದರೆ ಮೂಲತ: ಕನ್ನಡ ನೆಲದಿಂದ ಹೋದ ಜಯಲಲಿತಾ, ರಜನೀಕಾಂತ್ನಂತಹ ಚಿತ್ರರಂಗದ ಮೇರುನಟರು ಪೂರ್ಣವಾಗಿ ಕನರ್ಾಟಕವನ್ನು ಮರೆತು ಹೇಳಿಕೆಗಳನ್ನು ನೀಡಲು ಆರಂಭಿಸಿದರು. ಇದು ಕನರ್ಾಟಕದವರನ್ನೂ ಕೆರಳಿಸಿತು. ನಮ್ಮ ಮೂಲಕ ಹರಿಯುವ ನೀರನ್ನು ನಾವು ಬೇಕಾದಷ್ಟು ಬಳಸಿಕೊಳ್ಳುತ್ತೇವೆ. ಕೇಳಲು ನೀವು ಯಾರು ಎನ್ನುವ ಧೋರಣೆಯನ್ನು ಕನರ್ಾಟಕವೂ ಬೆಳೆಸಿತು. ಕಾವೇರಿ ನದಿ ನೀರನ್ನು ಬಳಸುವ ವಿಚಾರದಲ್ಲಿ ಕನರ್ಾಟಕ ತಮಿಳುನಾಡು ಸೇರಿದಂತೆ ಎರಡೂ ರಾಜ್ಯಗಳು ಅನೇಕ ವೇಳೆ ಬಂದ್ ಆಚರಿಸಿದವು. ಈ ಬಂದ್ಗಳ ಸಂದರ್ಭದಲ್ಲಿ ಕನರ್ಾಟಕ ತಮಿಳುನಾಡಿನ ಬಸ್ಸು ವಾಹನಗಳ ಗಾಜುಗಳು ಪುಡಿಯಾದವು ಕೆಲವೊಂದು ವಾಹನಗಳು ಬೆಂಕಿಗೆ ಆಹುತಿಯಾದವು. ಜನಸಾಮಾನ್ಯರು ಕಲ್ಲಿನೇಟು ತಿಂದರು, ಗಾಯಗೊಂಡರು. ಜೀವಹಾನಿಕೂಡ ಸಂಭವಿಸಿತು. ಈ ಎರಡೂ ರಾಜ್ಯಗಳಲ್ಲಿನೆಲೆಸಿದ್ದ ಜನಸಾಮಾನ್ಯರು ತಾವು ಭಾರತದಲ್ಲಿ ಇದ್ದೇವೋ ಅಥವಾ ಬೇರೆ ಯಾವುದಾದರೂ ವಿರೋಧಿ ದೇಶದಲ್ಲಿದ್ದೇವೆಯೋ ಎನ್ನುವಂತೆ ಭಯದಿಂದ ಕಂಪಿಸಿದ್ದರು. ಆದರೆ ಜನರಾಗಲಿ ಸಕರ್ಾರವಾಗಲಿ ಕಾವೇರಿನದಿಯ ಹರಿವನ್ನು ಹೆಚ್ಚಿಸುವ ಕಾವೇರಿ ನೀರು ದುರ್ಬಳಕೆಯಾಗದಂತೆ ತಡೆಯುವ ಯಾವ ಚಿಂತನೆಯನ್ನೂ ಮಾಡಲಿಲ್ಲ.
ಕನರ್ಾಟಕ ಸಕರ್ಾರಕ್ಕೆ ಚಾಟಿ
1990ರಲ್ಲಿ ಸುಪ್ರೀಂ ಕೋಟರ್್ ನಿದರ್ೇಶನದಂತೆ ವಿ.ಪಿ. ಸಿಂಗ್ ಸಕರ್ಾರ ಕಾವೇರಿ ನದಿ ನೀರನ್ನು ವೈಜ್ಞಾನಿಕವಾಗಿ ವಿವೇಚನಾಯುತವಾಗಿ ಹಂಚಿಕೆ ಮಾಡುವಂತೆ ನ್ಯಾಯಾಧೀಕರಣವೊಂದನ್ನು ರಚಿಸುವಂತೆ ಅಂದು ಆಡಳಿತದಲ್ಲಿದ್ದ ವಿ.ಪಿ.ಸಿಂಗ್ ನೇತೃತ್ವದ ಜನತಾದಳ ಪಕ್ಷದ ಸಕರ್ಾರಕ್ಕೆ ಆದೇಶಿಸಿತು. ಇದರನ್ವಯ ಮೂರು ಮಂದಿ ನ್ಯಾಯಾಧೀಶರನ್ನೊಳಗೊಂಡ ಕಾವೇರಿ ನದಿಯ ನೀರಿನ ವಿವರ ಮತ್ತು ಹಂಚಿಕೆಯ ತೀಮರ್ಾನಕೈಗೊಳ್ಳಲು ಕಾವೇರಿ ನದಿ ನೀರು ಟ್ರಿಬ್ಯುನಲ್ ರಚನೆಗೊಂಡಿತು. ಮುಂದೆ 1998 ಕಾವೇರಿ ನದಿ ಪ್ರಾಧಿಕಾರ ರಚನೆಗೊಂಡಿತು. ಈ ಪ್ರಾಧಿಕಾರದ ಆದೇಶದನ್ವಯ 2002 ರಲ್ಲಿ ವಾಜಪೇಯಿ ಸಕರ್ಾರ ತಮಿಳುನಾಡಿಗೆ ಒಂಭತ್ತು ಸಾವಿರ ಕ್ಯೂಸೆಕ್ಸ್ ನೀರು ಬಿಡಲು  ಕನರ್ಾಟಕಕ್ಕೆ ಆದೇಶ ನೀಡಿತು. ಇದಕ್ಕೂ ಕನರ್ಾಟಕ ವಿರೋಧ ವ್ಯಕ್ತಪಡಿಸಿತು. ಈ ನಡುವೆ ಕಾವೇರಿ ನದಿ ಹಂಚಿಕೆ ಕುರಿತು ನೀರಾವರಿ ತಜ್ಞರನ್ನು ಮುಕ್ತವಾಗಿ ಚಿಂತಿಸಲು ಕೇಂದ್ರ ಸಕರ್ಾರ ಬಿಡುತ್ತಿಲ್ಲ ಎನ್ನುವ ಆಪದನೆಗಳೂ ಕೇಳಿಬಂದುವು. ತಮಿಳುನಾಡಿಗೆ ನೀರು ಬಿಡಲು 2005ರಲ್ಲಿಯೂ ಕನರ್ಾಟಕ ಸಕರ್ಾರ ವಿರೋಧ ವ್ಯಕ್ತಪಡಿಸಿತು. 2010ರಲ್ಲಿ ತಮಿಳುನಾಡಿಗೆ ನೀರು ಬಿಡಲು ನಮ್ಮಲ್ಲಿ ನೀರೇ ಇಲ್ಲ ಎಂದು ಹಠ ಹಿಡಿದು ಕುಳಿತ ಕನರ್ಾಟಕ ತಮಿಳುನಾಡಿಗೆ ಕುಡಿಯಲು ಮಾತ್ರ ನೀರು ಕೊಡುತ್ತೇವೆ ಕೃಷಿ ಮಾಡಲು ಅಲ್ಲ ಎಂದು ಹೇಳಿಯೇ ಬಿಟ್ಟಿತು. ತಮಿಳುನಾಡು ಮತ್ತು ಕೇಂದ್ರ ಸಕರ್ಾರ ಇದನ್ನು ಕಿವಿಗೆ ಹಾಕಿಕೊಳ್ಳಲು ಸಿದ್ದವಿರಲಿಲ್ಲ. ಇದೇ ಸಂದರ್ಭದಲ್ಲಿ ಪ್ರಕೃತಿಯ ಆಟ ಎಂಬಂತೆ ಕೊಡಗಿನಲ್ಲಿ ಬಿದ್ದ ಭಾರಿ ಮಳೆ ಎರಡೂ ರಾಜ್ಯಗಳ ನಡುವಿನ ವಿವಾದಕ್ಕೆ ತಾತ್ಕಾಲಿಕ ವಿರಾಮ ಹಾಕಿತು. ಮುಂದೆ 2012ರಲ್ಲಿ ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ನೀವು ಯಾವಾಗಲೂ ಮೊಂಡುವಾದ ಮಾಡುತ್ತಿದ್ದೀರಿ ಎಂದು ಸುಪ್ರೀಂ ಕೋಟರ್್ ಕನರ್ಾಟಕ ಸಕರ್ಾರಕ್ಕೆ ಚಾಟಿ  ಬೀಸಿತು. ಮಾತ್ರವಲ್ಲ 2013ರಲ್ಲಿ ನೀರು ಹಂಚಿಕೆ ವಿಚಾರವನ್ನು ವೈಜ್ಞಾನಿಕವಾಗಿ ಚಿಂತಿಸಿ ಹಂಚುವ ಕ್ರಮಕೈಗೊಳ್ಳಲು ಆದೇಶಿಸಿತು.
 ಕಾವೇರಿ   ಟ್ರಿಬ್ಯುನಲ್ 2007ರಲ್ಲಿ ಕಾವೇರಿಯಲ್ಲಿ  ಒಟ್ಟು 740 ಸಾವಿರ ಮಿಲಿಯನ್ ಕ್ಯುಬಿಕ್ (ಟಿಎಂಸಿ) ನೀರಿನ ಒಟ್ಟು ಸಂಗ್ರಹದ ಬಗ್ಗೆ ಹೇಳಿತು. ಇದರಲ್ಲಿ ಪ್ರಕೃತಿಯ ಸಮತೋಲ ಕಾಪಾಡುವಂತೆ 14 ಟಿಎಂಸಿ ನೀರನ್ನು ಸಮುದ್ರಕ್ಕೆ ಹರಿಯಲು ಬಿಡಬೇಕು. 419 ಟಿಎಂಸಿ ನೀರು ತಮಿಳುನಾಡಿಗೆ ,270 ಟಿಎಂಸಿ ನೀರು ಕನರ್ಾಟಕಕ್ಕೆ ಮತ್ತು 30 ಟಿಎಂಸಿ ನೀರು ಕೇರಳಕ್ಕೆ, 7 ಟಿಎಂಸಿ ಪುದುಚೇರಿಗೆ ಹಂಚಬೇಕು ಎಂದು ಆದೇಶಿಸಿತು.

ನಿತ್ಯ ಒಂಭತ್ತು ಸಾವಿರ ಕ್ಯೂಸೆಕ್ಸ್ ನೀರು
2012ರಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸುಪ್ರೀಂಕೋಟರ್್ ಮೆಟ್ಟಿಲು ಹತ್ತಿದಾಗ ಕೋಟರ್್ ನಿದರ್ೇಶನದನ್ವಯ ಅಂದಿನ ಪ್ರಧಾನಿ ಮನ್ಮೋಹನ್ ಸಿಂಗ್ ಸಕರ್ಾರ ತಮಿಳುನಾಡಿಗೆ ನಿತ್ಯ ಒಂಭತ್ತು ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಆದೇಶನೀಡಿತು. ಇದರಿಂದ ರಾಜ್ಯದ ಮಂಡ್ಯ, ಮೈಸೂರು ಮತ್ತು ಬೆಂಗಳೂರು ಅಸಹನೆಯಿಂದ ಉರಿಯಿತು.

ಫೆಬ್ರವರಿ 5 2007ರಲ್ಲಿ ಕಾವೇರಿ ನ್ಯಾಯಮಂಡಳಿ ತನ್ನ ತೀಪರ್ಿನಲ್ಲಿ ತಮಿಳುನಾಡಿಗೆ 419ಟಿಎಂಸಿ, ಕನರ್ಾಟಕಕ್ಕೆ270ಟಿಎಂಸಿ ನೀರು ಎಂದು ವಿಧಿಸಿತಲ್ಲದೆ ಕೇರಳ ರಾಜ್ಯಕ್ಕೆ 30 ಟಿಎಂಸಿ ಪಾಂಡಿಚೇರಿಗೆ 7 ಟಿಎಂಸಿ ನೀರು ಎಂದು ವಿಧಿಸಲಾಗಿತ್ತು.

ಕಾವೇರಿ ತುಂಬಿ ಹರಿಯಲು ಹೀಗೆ ಮಾಡೋಣವೇ..!?  

  • ತಲಕಾವೇರಿಯಿಂದ ಬಂಗಳಕೊಲ್ಲಿ ಸೇರುವ ತನಕ ಕಾವೇರಿ ಹಾದಿ 802 ಕಿ.ಮೀ. ಈ ಹಾದಿಯುದ್ದಕ್ಕೂ ಮರಗಿಡಗಳು ಹುಲುಸಾಗಿ ಬೆಳೆಸುವತ್ತ ಗಮನಹರಿಸಬೇಕು. ಕಾಂಕ್ರೀಟ್ ರೋಡ್ಗಳು ಕಟ್ಟಡಗಳು ಕಟ್ಟೆಗಳು ಮರಗಿಡ ಬೆಳೆಯುವುದಕ್ಕೆ ಅವಕಾಶ ನೀಡುವುದಿಲ್ಲ. ಸಿಲ್ವರ್ ಓಕ್ ಮರನೆಡುವುದರ  ಬದಲಿಗೆ ವೈವಿದ್ಯಮಯ ಮರಗಿಡಗಳನ್ನು ನೆಡುವಂತಾಗಬೇಕು. ಸಿಲ್ವರ್ ಓಕ್ ಮರ ಬೆಳೆಸಿ ಮಾರುವ ವ್ಯಕ್ತಿಗೆ ಯಾವುದೇ ತಡೆಗಳಿಲ್ಲ. ಆದರೆ ಇತರ ಮರಗಿಡಗಳನ್ನು ನೆಟ್ಟು ಬೆಳೆಸಿದವನಿಗೆ ಅದನ್ನು ಕಡಿದು ಮಾರಲು ಅರಣ್ಯ ಇಲಾಖೆಯ ಕಿರಿಕಿರಿಯನ್ನು ಎದುರಿಸಬೇಕಾಗುತ್ತದೆ.  ಇದು ಸಂಪೂರ್ಣವಾಗಿ ನಿಲ್ಲಬೇಕು. ಹಾಗಾದ್ದಲ್ಲಿ ಮಾತ್ರ ಕೊಡಗಿನ ಜನತೆ ವಿವಿಧ ಮರ ಗಿಡಗಳನ್ನು ಬೆಳೆಸುವ ಆಸಕ್ತಿ ತೋರುತ್ತಾರೆ. ಅರಣ್ಯ ಇಲಾಖೆ ಕೂಡಾ ತನ್ನ ದಾಖಲೆಗಳಲ್ಲಿ ಮರಗಿಡ ನೆಟ್ಟು ಅದರ ಹಣವನ್ನು ದುರಪಯೋಗಪಡಿಸುತ್ತಿದೆ. ಅದರ ಬದಲಿಗೆ ನಿಜವಾಗಲೂ  ನದಿಗೆ ನೀರುಣಿಸುವ ಪ್ರದೇಶಗಳಲ್ಲಿ ನದಿ ಪಾತ್ರಗಳಲ್ಲಿ ನದಿಯ ಇಕ್ಕೆಲಗಳಲ್ಲಿ ಮರ ನೆಡುವ  ನಿರಂತರ ಅಭಿಯಾನವಾಗಬೇಕಿದೆ. ಅರಣ್ಯ ರಕ್ಷಣೆಗೆ ಸಕರ್ಾರದಿಂದ ಸಂಬಳ ಸವಲತ್ತುಗಳನ್ನು ಪಡೆದು ಅರಣ್ಯಯ ರಕ್ಷಣೆ ಮಾಡಲಾಗದ ಸಕರ್ಾರಿ ನೌಕರರಿಂದ ಜನಸಾಮಾನ್ಯರಿಗೆ ಮಾತ್ರವಲ್ಲ ಕಾವೇರಿಯಂತ ನದಿಗೂ ತೊಂದರೆ. ಈ ಬಗ್ಗೆ ತಮಿಳುನಾಡು ಮತ್ತು ಕನರ್ಾಟಕ ಎರಡೂ ರಾಜ್ಯಗಳವರು ಗಮನಹರಿಸಬೇಕಿದೆ.

 ಬರಹ-ಹರೀಶ್ ಆಳ್ವ  M.G




ಬತ್ತುತ್ತಿದೆ ಕಾವೇರಿ ಒಡಲು. . . ? ! Kaveri is Now Drying .............

ಬತ್ತುತ್ತಿದೆ ಕಾವೇರಿ ಒಡಲು. . . ? !

ವಿವೇಚನಾಶೂನ್ಯ ತಮಿಳುನಾಡು ಕನರ್ಾಟಕ ! 


ಕಾವೇರಿ ನದಿ ಕೇವಲ ಕನರ್ಾಟಕದ ಜೀವನದಿ ಮಾತ್ರವಲ್ಲ ಅದು ತಮಿಳುನಾಡಿಗೂ ಜೀವನದಿ. ಈ ಕಾರಣದಿಂದಾಗಿ ಕಾವೇರಿಯ ನೀರು ನಮಗೆ ಹೆಚ್ಚು ಬೇಕು ನಮಗೆ ಹೆಚ್ಚು ಬೇಕು ಎಂಬುದಾಗಿ ಎರಡೂ ರಾಜ್ಯಗಳು ವರ್ಷಗಳಿಂದ ಜಗಳಕ್ಕಿಳಿದಿವೆ. ಕೊಡಗಿನ ತಲಕಾವೇರಿಯಲ್ಲಿ ಜನಿಸಿ ಮೈದುಂಬಿಕೊಂಡು ಹರಿಯುವ ಕಾವೇರಿ; ಕನರ್ಾಟಕ, ತಮಿಳುನಾಡು, ಕೇರಳದ ಒಂದಷ್ಟು ಭಾಗ ಮತ್ತು ಪುದುಚೇರಿ ಜನರ ಬಾಯಾರಿಕೆ ತಣಿಸುವುದಲ್ಲದೆ ಅವರ ಕೃಷಿ ಕೈಗಾರಿಕೆಗಳ ನೀರಿನ ಅಗತ್ಯವನ್ನು ಪೂರೈಸಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾವೇರಿ ನದಿ ಪೂರ್ಣತುಂಬಿಕೊಳ್ಳದೆ ಸೊರಗುತ್ತಿದೆ ಈ ಕಾರಣದಿಂದ  ಇತ್ತೀಚಿಗೆ ಪ್ರಮುಖ ಜಲಾಶಯಗಳಾದ ಕೃಷ್ಣರಾಜ ಸಾಗರ, ಹಾರಂಗಿ, ಕಬಿನಿ, ಹೇಮಾವತಿಗಳು ಪೂರ್ಣವಾಗಿ ತುಂಬಿಕೊಳ್ಳುತ್ತಿಲ್ಲ.

ಸೊರಗುತಿರುವ ಕಾವೇರಿ 

ಕಾವೇರಿ ತನ್ನ ನದಿಮೂಲ ಕೊಡಗಿನಲ್ಲಿಯೇ ಸೊರಗಲಾರಂಭಿಸಿದೆ. ಕೊಡಗಿನ ವನಸಿರಿ ಸೇರಿದಂತೆ ಕಾವೇರಿ ಸಾಗುವ ಹಾದಿಯುದ್ದಕ್ಕೂ ಇರುವ ಕಾಡುಗಳ ರಕ್ಷಣೆಮಾಡಬೇಕಾಗಿದೆ. ನದಿ ಕಲುಷಿತಗೊಳ್ಳದಂತೆ ಸಮರ್ಪಕವಾದ ವೈಜ್ಞಾನಿಕ ಯೋಜನೆಗಳನ್ನು ಹಾಕಿಕೊಳ್ಳಬೇಕಾಗಿದೆ. ಇದ್ಯಾವುದರ ಗೋಜಿಗೂ ತಲೆಕೆಡಿಸಿಕೊಳ್ಳದ ಕನರ್ಾಟಕ ತಮಿಳುನಾಡುಗಳು ಬಡಿದಾಡಿಕೊಳ್ಳುತ್ತಿವೆ. ಗಂಡ ಹೆಂಡಿರ ಜಗಳದ ನಡುವೆ ಕೂಸು ಕಾವೇರಿ ಬಡವಾಗಿದ್ದಾಳೆ ಅವಳನ್ನು ಕೇಳುವವರೇ ಇಲ್ಲವಾಗಿದೆ.
ಕಾಡುಗಳ ನಾಶ, ಪ್ರಕೃತಿ ಕಾಳಜಿ ಇಲ್ಲದ ಅಭಿವೃದ್ದಿ, ಯಾಂತ್ರೀಕರಣ, ಮಿತಿಮೀರಿ ಬೆಳೆದಿರುವ ಜನಸಂಖ್ಯೆ, ದಿನದಿಂದ ದಿನಕ್ಕೆ ನೀರಿನ ಅಭಾವವನ್ನು ಸೃಷ್ಟಿಸುತ್ತಿದೆ. ಈ ಕಾರಣದಿಂದ ನೀರಿಗಾಗಿ ಎಲ್ಲರೂ ಜಗಳ ಮಾಡುವವರೇ. ಮೂರನೇ ಜಾಗತಿಕ ಯುದ್ದ ನಡೆದರೆ ಅದು ನೀರಿಗಾಗಿಯೇ ನಡೆಯುತ್ತದೆ ಎಂದಿರುವುದು ತಮಿಳುನಾಡು ಕನರ್ಾಟಕ ಪಾಲಿಗಂತು ಸತ್ಯವಾಗಿದೆ. ಕಾವೇರಿ ನದಿನೀರಿಗಾಗಿ ಎರಡೂ ರಾಜ್ಯಗಳು ಬಂದ್ ಆಚರಿಸಿವೆ, ಬಡಿದಾಡಿಕೊಂಡಿವೆ ;ಹೆಣ ಉರುಳಿಸಿವೆ.
ಕನರ್ಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಕಾವೇರಿ ವಿವಾದ ಇಂದು ನಿನ್ನೆಯದಲ್ಲ. ಅದು ಭಾರತದಲ್ಲಿ ಬ್ರಿಟಿಷ್ ಆಡಳಿತೆ ಇದ್ದಾಗಲೇ ಆರಂಭಗೊಂಡಿತ್ತು.

ಎರಡೂ ಪ್ರಾಂತ್ಯಗಳೊಳಗೆ ಭಿನ್ನಾಭಿಪ್ರಾಯ

1870ರ ಸುಮಾರಿಗೆ. ಬ್ರಿಟಿಷ್ ಆಡಳಿತದಲ್ಲಿನ ಮೈಸೂರು ಮತ್ತು ಮದ್ರಾಸ್ ಪ್ರಾಂತ್ಯಗಳಲ್ಲಿ ನೀರಿನ ಅಭಾವ ಕಾಣಿಸಿಕೊಂಡಾಗ ಅಂದಿನ ಮೈಸೂರು ಆಡಳಿತ ಕಾವೇರಿಗೆ ಸಂಬಂಧಿಸಿದ ನೀರಾವರಿ ಯೋಜನೆಗಳನ್ನು ವಿಸ್ತರಿಸುವುದಕ್ಕೆ ಮುಂದಾದಾಗ ಮದ್ರಾಸ್ ಪ್ರಾಂತ್ಯದ ಆಡಳಿತ ಅದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಈ ವಾದ ವಿವಾದಗಳು ತಾರಕಕ್ಕೇರಿ 1892 ರಲ್ಲಿ ಬ್ರಿಟಿಷ್ ಆಡಳಿತದ ನೇತೃತ್ವದಲ್ಲಿ ಮದ್ರಾಸ್ ಮತ್ತು ಮೈಸೂರು ಎರಡೂ ಪ್ರಾಂತ್ಯಗಳ ಆಡಳಿತೆಗಳ ನಡುವೆ ಕಾವೇರಿ ನದಿ ನೀರನ್ನು ಬಳಸುವ ನಿಟ್ಟಿನಲ್ಲಿ  ಕೆಲವೊಂದು ರೂಪುರೇಷೆಗಳನ್ನು ಸಿದ್ದಪಡಿಸಿ ಒಪ್ಪಂದ ಏರ್ಪಟ್ಟಿತ್ತು.
ಈ ನಡುವೆ 1910ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಮಿಜರ್ಾ ಇಸ್ಮಾಯಿಲ್ ಶ್ರೇಷ್ಠ ತಂತ್ರಜ್ಞ ವಿಶ್ವೇಶ್ವರಯ್ಯನವರ ಮಾರ್ಗದರ್ಶನದಲ್ಲಿ ಕನ್ನಂಬಾಡಿ ಅಣೆಕಟ್ಟು (ಕೆಆರ್ಎಸ್) ಕಟ್ಟುವ ವಿಚಾರ ಮಾಡಿದಾಗ. ಈ ಯೋಜನೆಯಲ್ಲಿ ಒಟ್ಟು  41.5 ಟಿಎಂಸಿ ನೀರನ್ನು ಸಂಗ್ರಹಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಮೊದಲ ಹಂತದ ಕಾಮಗಾರಿಯಲ್ಲಿ 11 ಟಿಎಂಸಿ ನೀರು ಸಂಗ್ರಹಿಸುವ ನಿಟ್ಟಿನಲ್ಲಿ ಕಾಮಗಾರಿ ನಡೆಯಿತು. ಎರಡನೇ ಹಂತದಲ್ಲಿ ಈ ಯೋಜನೆಯನ್ನು ಪೂತರ್ಿಗೊಳಿಸುವ  ಕಾಮಗಾರಿಗೆ ಮೈಸೂರು ಕಾರ್ಯಪ್ರವೃತ್ತವಾದಾಗ ಈ ವಿಚಾರಕ್ಕೆ ಮದ್ರಾಸ್ನಿಂದ ವಿರೋಧ ವ್ಯಕ್ತವಾಗಿತ್ತು. ಮಾತ್ರವಲ್ಲ ಮೆಟ್ಟೂರುನಲ್ಲಿ 11  ಟಿಎಂಸಿ ನೀರು ಸಂಗ್ರಹಿಸುವ ಅಣೆಕಟ್ಟೊಂದನ್ನು ತಾವೂ ಕಟ್ಟಿಕೊಳ್ಳುತ್ತೇವೆ ಎಂದು ಮದ್ರಾಸ್ ಆಡಳಿತ ಹೇಳಿತು. ಈ ವಿಚಾರಗಳು ಎರಡೂ ಪ್ರಾಂತ್ಯಗಳೊಳಗೆ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು.
ಕನರ್ಾಟಕವನ್ನು ಮರೆತು ಹೇಳಿಕೆಗಳು
1947ರಲ್ಲಿ ಭಾರತ ಸ್ವಾತಂತ್ರ್ಯಗೊಂಡ ನಂತರ ಉದಯವಾದ ಭಾಷಾವಾರು ರಾಜ್ಯಗಳ ಸಂದರ್ಭದಲ್ಲಿ ಕಾವೇರಿನದಿ ನೀರು ಮದ್ರಾಸ್ ಪ್ರಾಂತ್ಯ ತಮಿಳುನಾಡು, ಕೇರಳ, ಮತ್ತು ಪುದುಚೇರಿ  ರಾಜ್ಯಗಳ ನಡುವೆ ಹಂಚಿ ಹೋಯಿತು. ಈ ಕಾರಣದಿಂದ ಕಾವೇರಿ ನದಿ ನೀರಿಗಾಗಿ ನಾಲ್ಕು ರಾಜ್ಯಗಳ ಜನ ಕಿತ್ತಾಡುವಂತಾಯಿತು. ಕಾವೇರಿ ನದಿ ನೀರು ತಮಿಳುನಾಡು ಮತ್ತು ಕನರ್ಾಟಕವನ್ನು ಬದ್ದ ಶತ್ರುಗಳನ್ನಾಗಿ ಮಾಡಿತು. ಇದು ಎಷ್ಟರಮಟ್ಟಿಗೆ ಎಂದರೆ ಮೂಲತ: ಕನ್ನಡ ನೆಲದಿಂದ ಹೋದ ಜಯಲಲಿತಾ, ರಜನೀಕಾಂತ್ನಂತಹ ಚಿತ್ರರಂಗದ ಮೇರುನಟರು ಪೂರ್ಣವಾಗಿ ಕನರ್ಾಟಕವನ್ನು ಮರೆತು ಹೇಳಿಕೆಗಳನ್ನು ನೀಡಲು ಆರಂಭಿಸಿದರು. ಇದು ಕನರ್ಾಟಕದವರನ್ನೂ ಕೆರಳಿಸಿತು. ನಮ್ಮ ಮೂಲಕ ಹರಿಯುವ ನೀರನ್ನು ನಾವು ಬೇಕಾದಷ್ಟು ಬಳಸಿಕೊಳ್ಳುತ್ತೇವೆ. ಕೇಳಲು ನೀವು ಯಾರು ಎನ್ನುವ ಧೋರಣೆಯನ್ನು ಕನರ್ಾಟಕವೂ ಬೆಳೆಸಿತು. ಕಾವೇರಿ ನದಿ ನೀರನ್ನು ಬಳಸುವ ವಿಚಾರದಲ್ಲಿ ಕನರ್ಾಟಕ ತಮಿಳುನಾಡು ಸೇರಿದಂತೆ ಎರಡೂ ರಾಜ್ಯಗಳು ಅನೇಕ ವೇಳೆ ಬಂದ್ ಆಚರಿಸಿದವು. ಈ ಬಂದ್ಗಳ ಸಂದರ್ಭದಲ್ಲಿ ಕನರ್ಾಟಕ ತಮಿಳುನಾಡಿನ ಬಸ್ಸು ವಾಹನಗಳ ಗಾಜುಗಳು ಪುಡಿಯಾದವು ಕೆಲವೊಂದು ವಾಹನಗಳು ಬೆಂಕಿಗೆ ಆಹುತಿಯಾದವು. ಜನಸಾಮಾನ್ಯರು ಕಲ್ಲಿನೇಟು ತಿಂದರು, ಗಾಯಗೊಂಡರು. ಜೀವಹಾನಿಕೂಡ ಸಂಭವಿಸಿತು. ಈ ಎರಡೂ ರಾಜ್ಯಗಳಲ್ಲಿನೆಲೆಸಿದ್ದ ಜನಸಾಮಾನ್ಯರು ತಾವು ಭಾರತದಲ್ಲಿ ಇದ್ದೇವೋ ಅಥವಾ ಬೇರೆ ಯಾವುದಾದರೂ ವಿರೋಧಿ ದೇಶದಲ್ಲಿದ್ದೇವೆಯೋ ಎನ್ನುವಂತೆ ಭಯದಿಂದ ಕಂಪಿಸಿದ್ದರು. ಆದರೆ ಜನರಾಗಲಿ ಸಕರ್ಾರವಾಗಲಿ ಕಾವೇರಿನದಿಯ ಹರಿವನ್ನು ಹೆಚ್ಚಿಸುವ ಕಾವೇರಿ ನೀರು ದುರ್ಬಳಕೆಯಾಗದಂತೆ ತಡೆಯುವ ಯಾವ ಚಿಂತನೆಯನ್ನೂ ಮಾಡಲಿಲ್ಲ.

ಕನರ್ಾಟಕ ಸಕರ್ಾರಕ್ಕೆ ಚಾಟಿ  

1990ರಲ್ಲಿ ಸುಪ್ರೀಂ ಕೋಟರ್್ ನಿದರ್ೇಶನದಂತೆ ವಿ.ಪಿ. ಸಿಂಗ್ ಸಕರ್ಾರ ಕಾವೇರಿ ನದಿ ನೀರನ್ನು ವೈಜ್ಞಾನಿಕವಾಗಿ ವಿವೇಚನಾಯುತವಾಗಿ ಹಂಚಿಕೆ ಮಾಡುವಂತೆ ನ್ಯಾಯಾಧೀಕರಣವೊಂದನ್ನು ರಚಿಸುವಂತೆ ಅಂದು ಆಡಳಿತದಲ್ಲಿದ್ದ ವಿ.ಪಿ.ಸಿಂಗ್ ನೇತೃತ್ವದ ಜನತಾದಳ ಪಕ್ಷದ ಸಕರ್ಾರಕ್ಕೆ ಆದೇಶಿಸಿತು. ಇದರನ್ವಯ ಮೂರು ಮಂದಿ ನ್ಯಾಯಾಧೀಶರನ್ನೊಳಗೊಂಡ ಕಾವೇರಿ ನದಿಯ ನೀರಿನ ವಿವರ ಮತ್ತು ಹಂಚಿಕೆಯ ತೀಮರ್ಾನಕೈಗೊಳ್ಳಲು ಕಾವೇರಿ ನದಿ ನೀರು ಟ್ರಿಬ್ಯುನಲ್ ರಚನೆಗೊಂಡಿತು. ಮುಂದೆ 1998 ಕಾವೇರಿ ನದಿ ಪ್ರಾಧಿಕಾರ ರಚನೆಗೊಂಡಿತು. ಈ ಪ್ರಾಧಿಕಾರದ ಆದೇಶದನ್ವಯ 2002 ರಲ್ಲಿ ವಾಜಪೇಯಿ ಸಕರ್ಾರ ತಮಿಳುನಾಡಿಗೆ ಒಂಭತ್ತು ಸಾವಿರ ಕ್ಯೂಸೆಕ್ಸ್ ನೀರು ಬಿಡಲು  ಕನರ್ಾಟಕಕ್ಕೆ ಆದೇಶ ನೀಡಿತು. ಇದಕ್ಕೂ ಕನರ್ಾಟಕ ವಿರೋಧ ವ್ಯಕ್ತಪಡಿಸಿತು. ಈ ನಡುವೆ ಕಾವೇರಿ ನದಿ ಹಂಚಿಕೆ ಕುರಿತು ನೀರಾವರಿ ತಜ್ಞರನ್ನು ಮುಕ್ತವಾಗಿ ಚಿಂತಿಸಲು ಕೇಂದ್ರ ಸಕರ್ಾರ ಬಿಡುತ್ತಿಲ್ಲ ಎನ್ನುವ ಆಪದನೆಗಳೂ ಕೇಳಿಬಂದುವು. ತಮಿಳುನಾಡಿಗೆ ನೀರು ಬಿಡಲು 2005ರಲ್ಲಿಯೂ ಕನರ್ಾಟಕ ಸಕರ್ಾರ ವಿರೋಧ ವ್ಯಕ್ತಪಡಿಸಿತು. 2010ರಲ್ಲಿ ತಮಿಳುನಾಡಿಗೆ ನೀರು ಬಿಡಲು ನಮ್ಮಲ್ಲಿ ನೀರೇ ಇಲ್ಲ ಎಂದು ಹಠ ಹಿಡಿದು ಕುಳಿತ ಕನರ್ಾಟಕ ತಮಿಳುನಾಡಿಗೆ ಕುಡಿಯಲು ಮಾತ್ರ ನೀರು ಕೊಡುತ್ತೇವೆ ಕೃಷಿ ಮಾಡಲು ಅಲ್ಲ ಎಂದು ಹೇಳಿಯೇ ಬಿಟ್ಟಿತು. ತಮಿಳುನಾಡು ಮತ್ತು ಕೇಂದ್ರ ಸಕರ್ಾರ ಇದನ್ನು ಕಿವಿಗೆ ಹಾಕಿಕೊಳ್ಳಲು ಸಿದ್ದವಿರಲಿಲ್ಲ. ಇದೇ ಸಂದರ್ಭದಲ್ಲಿ ಪ್ರಕೃತಿಯ ಆಟ ಎಂಬಂತೆ ಕೊಡಗಿನಲ್ಲಿ ಬಿದ್ದ ಭಾರಿ ಮಳೆ ಎರಡೂ ರಾಜ್ಯಗಳ ನಡುವಿನ ವಿವಾದಕ್ಕೆ ತಾತ್ಕಾಲಿಕ ವಿರಾಮ ಹಾಕಿತು. ಮುಂದೆ 2012ರಲ್ಲಿ ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ನೀವು ಯಾವಾಗಲೂ ಮೊಂಡುವಾದ ಮಾಡುತ್ತಿದ್ದೀರಿ ಎಂದು ಸುಪ್ರೀಂ ಕೋಟರ್್ ಕನರ್ಾಟಕ ಸಕರ್ಾರಕ್ಕೆ ಚಾಟಿ  ಬೀಸಿತು. ಮಾತ್ರವಲ್ಲ 2013ರಲ್ಲಿ ನೀರು ಹಂಚಿಕೆ ವಿಚಾರವನ್ನು ವೈಜ್ಞಾನಿಕವಾಗಿ ಚಿಂತಿಸಿ ಹಂಚುವ ಕ್ರಮಕೈಗೊಳ್ಳಲು ಆದೇಶಿಸಿತು.
 ಕಾವೇರಿ   ಟ್ರಿಬ್ಯುನಲ್ 2007ರಲ್ಲಿ ಕಾವೇರಿಯಲ್ಲಿ  ಒಟ್ಟು 740 ಸಾವಿರ ಮಿಲಿಯನ್ ಕ್ಯುಬಿಕ್ (ಟಿಎಂಸಿ) ನೀರಿನ ಒಟ್ಟು ಸಂಗ್ರಹದ ಬಗ್ಗೆ ಹೇಳಿತು. ಇದರಲ್ಲಿ ಪ್ರಕೃತಿಯ ಸಮತೋಲ ಕಾಪಾಡುವಂತೆ 14 ಟಿಎಂಸಿ ನೀರನ್ನು ಸಮುದ್ರಕ್ಕೆ ಹರಿಯಲು ಬಿಡಬೇಕು. 419 ಟಿಎಂಸಿ ನೀರು ತಮಿಳುನಾಡಿಗೆ ,270 ಟಿಎಂಸಿ ನೀರು ಕನರ್ಾಟಕಕ್ಕೆ ಮತ್ತು 30 ಟಿಎಂಸಿ ನೀರು ಕೇರಳಕ್ಕೆ, 7 ಟಿಎಂಸಿ ಪುದುಚೇರಿಗೆ ಹಂಚಬೇಕು ಎಂದು ಆದೇಶಿಸಿತು.

ನಿತ್ಯ ಒಂಭತ್ತು ಸಾವಿರ ಕ್ಯೂಸೆಕ್ಸ್ ನೀರು

2012ರಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸುಪ್ರೀಂಕೋಟರ್್ ಮೆಟ್ಟಿಲು ಹತ್ತಿದಾಗ ಕೋಟರ್್ ನಿದರ್ೇಶನದನ್ವಯ ಅಂದಿನ ಪ್ರಧಾನಿ ಮನ್ಮೋಹನ್ ಸಿಂಗ್ ಸಕರ್ಾರ ತಮಿಳುನಾಡಿಗೆ ನಿತ್ಯ ಒಂಭತ್ತು ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಆದೇಶನೀಡಿತು. ಇದರಿಂದ ರಾಜ್ಯದ ಮಂಡ್ಯ, ಮೈಸೂರು ಮತ್ತು ಬೆಂಗಳೂರು ಅಸಹನೆಯಿಂದ ಉರಿಯಿತು.

ಫೆಬ್ರವರಿ 5 2007ರಲ್ಲಿ ಕಾವೇರಿ ನ್ಯಾಯಮಂಡಳಿ ತನ್ನ ತೀಪರ್ಿನಲ್ಲಿ ತಮಿಳುನಾಡಿಗೆ 419ಟಿಎಂಸಿ, ಕನರ್ಾಟಕಕ್ಕೆ270ಟಿಎಂಸಿ ನೀರು ಎಂದು ವಿಧಿಸಿತಲ್ಲದೆ ಕೇರಳ ರಾಜ್ಯಕ್ಕೆ 30 ಟಿಎಂಸಿ ಪಾಂಡಿಚೇರಿಗೆ 7 ಟಿಎಂಸಿ ನೀರು ಎಂದು ವಿಧಿಸಲಾಗಿತ್ತು.

ಕಾವೇರಿ ತುಂಬಿ ಹರಿಯಲು ಹೀಗೆ ಮಾಡೋಣವೇ..!?  

ತಲಕಾವೇರಿಯಿಂದ ಬಂಗಳಕೊಲ್ಲಿ ಸೇರುವ ತನಕ ಕಾವೇರಿ ಹಾದಿ 802 ಕಿ.ಮೀ. ಈ ಹಾದಿಯುದ್ದಕ್ಕೂ ಮರಗಿಡಗಳು ಹುಲುಸಾಗಿ ಬೆಳೆಸುವತ್ತ ಗಮನಹರಿಸಬೇಕು. ಕಾಂಕ್ರೀಟ್ ರೋಡ್ಗಳು ಕಟ್ಟಡಗಳು ಕಟ್ಟೆಗಳು ಮರಗಿಡ ಬೆಳೆಯುವುದಕ್ಕೆ ಅವಕಾಶ ನೀಡುವುದಿಲ್ಲ. ಸಿಲ್ವರ್ ಓಕ್ ಮರನೆಡುವುದರ  ಬದಲಿಗೆ ವೈವಿದ್ಯಮಯ ಮರಗಿಡಗಳನ್ನು ನೆಡುವಂತಾಗಬೇಕು. ಸಿಲ್ವರ್ ಓಕ್ ಮರ ಬೆಳೆಸಿ ಮಾರುವ ವ್ಯಕ್ತಿಗೆ ಯಾವುದೇ ತಡೆಗಳಿಲ್ಲ. ಆದರೆ ಇತರ ಮರಗಿಡಗಳನ್ನು ನೆಟ್ಟು ಬೆಳೆಸಿದವನಿಗೆ ಅದನ್ನು ಕಡಿದು ಮಾರಲು ಅರಣ್ಯ ಇಲಾಖೆಯ ಕಿರಿಕಿರಿಯನ್ನು ಎದುರಿಸಬೇಕಾಗುತ್ತದೆ.  ಇದು ಸಂಪೂರ್ಣವಾಗಿ ನಿಲ್ಲಬೇಕು. ಹಾಗಾದ್ದಲ್ಲಿ ಮಾತ್ರ ಕೊಡಗಿನ ಜನತೆ ವಿವಿಧ ಮರ ಗಿಡಗಳನ್ನು ಬೆಳೆಸುವ ಆಸಕ್ತಿ ತೋರುತ್ತಾರೆ. ಅರಣ್ಯ ಇಲಾಖೆ ಕೂಡಾ ತನ್ನ ದಾಖಲೆಗಳಲ್ಲಿ ಮರಗಿಡ ನೆಟ್ಟು ಅದರ ಹಣವನ್ನು ದುರಪಯೋಗಪಡಿಸುತ್ತಿದೆ. ಅದರ ಬದಲಿಗೆ ನಿಜವಾಗಲೂ  ನದಿಗೆ ನೀರುಣಿಸುವ ಪ್ರದೇಶಗಳಲ್ಲಿ ನದಿ ಪಾತ್ರಗಳಲ್ಲಿ ನದಿಯ ಇಕ್ಕೆಲಗಳಲ್ಲಿ ಮರ ನೆಡುವ  ನಿರಂತರ ಅಭಿಯಾನವಾಗಬೇಕಿದೆ. ಅರಣ್ಯ ರಕ್ಷಣೆಗೆ ಸಕರ್ಾರದಿಂದ ಸಂಬಳ ಸವಲತ್ತುಗಳನ್ನು ಪಡೆದು ಅರಣ್ಯಯ ರಕ್ಷಣೆ ಮಾಡಲಾಗದ ಸಕರ್ಾರಿ ನೌಕರರಿಂದ ಜನಸಾಮಾನ್ಯರಿಗೆ ಮಾತ್ರವಲ್ಲ ಕಾವೇರಿಯಂತ ನದಿಗೂ ತೊಂದರೆ. ಈ ಬಗ್ಗೆ ತಮಿಳುನಾಡು ಮತ್ತು ಕನರ್ಾಟಕ ಎರಡೂ ರಾಜ್ಯಗಳವರು ಗಮನಹರಿಸಬೇಕಿದೆ.

 ಬರಹ-ಹರೀಶ್ ಆಳ್ವ- 
ಕೃಪೆ :ಇಂಟರ್ನೆಟ್ 




ಕಾವೇರಿ ಚಂಗ್ರಾಂದಿ


   ಕೊಡಗಿನವರ ಕುಲದೇವಿ ಶ್ರೀಕಾವೇರಿ ಮಾತೆಯ ದೊಡ್ಡ ಹಾಗು ಪವಿತ್ರ ಹಬ್ಬವೇ ಕಾವೇರಿ ತುಲಾಸಂಕ್ರಮಣ. ಕೊಡವ ಭಾಷೆಯಲ್ಲಿ ಈ ಹಬ್ಬವನ್ನು  ಕಾವೇರಿ ಚಂಗ್ರಾಂದಿ ಎಂತಲೂ  ಕರೆಯುತಾರೆ. ಈ ಹಬ್ಬವು ಅಕ್ಟೋಬರ್ ತಿಂಗಳ ಮಧ್ಯಭಾಗದ ತುಲಾ(ಮಾಸ)ಸಂಕ್ರಮಣದಂದು ನಡೆಯುತ್ತದೆ.   ಸೂರ್ಯನು ತುಲಾರಾಶಿಗೆ ಸೇರುವ ಸಮಯ ಕೊಡಗಿನ ಕುಲದೇವಿ ಕಾವೇರಿಯು ತನ್ನ   ಉಗಮ ಸ್ಥಾನದ ತಲಕಾವೇರಿಯ ಕುಂಡಿಕೆಯಿಂದ ತೀಥೋಧ್ಭವವಾಗಿ ಬರುವಳು.
ಸೂರ್ಯನು ಕನ್ಯಾರಾಶಿಯಿಂದ ತುಲಾರಾಶಿಗೆ ಪ್ರವೇಶ ಮಾಡುವ ಪುಣ್ಯ ಸಮಯವಾಗಿರುವ ತುಲಾ ಸಂಕ್ರಮಣದಂದು ಸ್ವರ್ಗಸ್ಥರಾದ ಹಿರಿಯರಿಗೆ ಮೋಕ್ಷ ಸಿಗಲಿ ಎಂದು ಹಾರೈಸುವರು. ಅಂದು  ಅವರ ಬಂಧುಗಳು ತಮ್ಮ ಹಿರಿಯರ ಆತ್ಮಗಳಿಗೆ ಸದ್ಗತಿ ಕೋರಿ ದೇವರಲ್ಲಿ ಪ್ರಾಥರ್ಿಸುತ್ತಾರೆ. ಹಿರಿಯರ ಹೆಸರಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಾರೆ. ಪಿಂಡಪ್ರದಾನ ಮಾಡುತ್ತಾರೆ. ಈ ದಿನದಂದು  ಬದುಕಿರುವ ಹಿರಿಯರ ಆಶ್ರರ್ೀವರ್ಾದ ಪಡೆಯುವ ಮೂಲಕ ತಮ್ಮ ಜನಾಂಗ ಸಮೃದ್ದಿಯಾಗಿ ಬೆಳೆಯಳಿ ಸುಖಶಾಂತಿ ಸದಾ ಮನೆಯಲ್ಲಿ ನೆಲೆಸಿರಲಿ ಎಂದು ಆಶಿಸುತ್ತಾರೆ. ಈ ಶುಭದಿನಂದು ಆಚರಿಸಲ್ಪಡುವ ಕಾವೇರಿ ಸಂಕ್ರಾಂತಿ ಕೊಡಗಿನಲ್ಲಿ ವಿಜೃಂಭಣೆೆಯ ಹಬ್ಬ.

.ಕೊಡಗಿನ ಕಾವೇರಿ ಪುರಾಣದಲ್ಲಿನ ಕಾವೇರಿ ಮಾತೆ ಕಥೆಯನ್ನು ಸವಿವರವಾಗಿ  ಕೊಡವಹಾಡಿನಲ್ಲಿ ರಚಿಸಲಾಗಿದೆ.
      .ಕೊಡಗಿನ ಜನರು ಕಾವೇರಿಮಾತೆಯನ್ನು ನಂಬುತ್ತಾ ಬರುತಿದ್ದು,  ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ವರ್ಷದಲ್ಲಿ ಹಲವು ಬಾರಿ ವಿಶೇಷ ಪೂಜಾದಿ ಉತ್ಸವಗಳನ್ನು ನಡೆಸಿಕೊಂಡು ಬರಲಾಗುತ್ತದೆ.  ಪ್ರತೀ ವರ್ಷದ ಅಕ್ಟೋಬರ್ ತಿಂಗಳ ತುಲಾ(ಸಂಕ್ರಮಣ)ಮಾಸದಲ್ಲಿ ಕಾವೇರಿ ಜಾತ್ರೆಯು ನಡೆಯಲಿದೆ.  ಜ್ಯೋತಿಷ್ಯಶಾಸ್ತ್ರದ ರೀತಿ ನಿಶ್ಚಿತವಾದ ತುಲಾ ಮೂಹೂರ್ತದಲ್ಲಿ ಕುಂಡಿಕೆಯಿಂದ ತೀಥೋದ್ಬವವಾಗುತ್ತದೆ. ಮೂಹರ್ೂತ ಸಮಯವು ಸಮೀಪಿಸಿದಂತೆ ಅರ್ಚಕರು ಶ್ರೀಕಾವೇರಿ ಕುಂಡಿಕೆಯಲ್ಲಿ ಶ್ರೀಕಾವೇರಿ ದೇವಿಯನ್ನು ಮಂತ್ರೋಕ್ತವಾಗಿ ವಿಧಿಪೂರ್ವಕವಾಗಿ ಕ್ರಪಾ ಆಶ್ರೀವರ್ಾದವನ್ನು ಕೋರುತ್ತಾರೆ. ಆ ಹೊತ್ತಿಗೆ ಪವಿತ್ರಜಲವು ಕುಂಡಿಕೆಯಲ್ಲಿ ಗುಳ್ಳೆಯ ರೀತಿ ಮೇಲುಕ್ಕಿ ಬರುತ್ತದೆ. ಅಷ್ಟರಲ್ಲಿ ಅರ್ಚಕರು ಜಲರೂಪಿಣಿ ಕಾವೇರಿಗೆ ಆರತಿಯನ್ನು ಬೆಳಗಿ,  ಪುಣ್ಯತೀರ್ಥವನ್ನು ಕುಂಡಿಕೆಯಿಂದ ತೆಗೆದು ನೆರೆದ  ಭಕ್ತಸಮೂಹದ ಮೇಲೆ  ಎರಚುತ್ತಾರೆ.ಕುಂಡಿಕೆಯಿಂದ ಅದೆಷ್ಟೋ ತೀರ್ಥ ತೆಗೆದರೂ ಪವಿತ್ರ ಕುಂಡಿಕೆಯಲ್ಲಿ ತೀರ್ಥ ಕಡಿಮೆಯಾಗುವುದೇ ಇಲ್ಲ. ತೀಥರ್ೋದ್ಬವ ಹಾಗೂ  ತೀರ್ಥ ಅಕ್ಷಯ ತಲಕಾವೇರಿಯಲ್ಲಿ ಪ್ರತಿವರ್ಷ ಕಂಡುಬರುವ ದೈವಿಕ ಪವಾಡವೆಂದು  ಹೇಳಬಹುದು
.

ಕಾವೇರಿ ಜಾತ್ರೆಯಲ್ಲಿ ಸಾವಿರಗಟ್ಟಲೆ ಕೊಡವರ ಕುಲದೇವರೆಂದು ನಂಬಿರುವ ಹೆಚ್ಚಿನ ಕೊಡವರು, ಕೊಡಗಿನ  ಹಾಗು ಹೊರಜಿಲ್ಲೆಗಳ ಭಕ್ತಸಮೂಹ ಸೇರಿ ಕಾವೇರಿ ತೀರ್ಥಸ್ಥಾನ, ಪೂಜಾಸೇವೆಗಳನೆಲ್ಲ ಪೂರೈಸಿ ತೀರ್ಥವನ್ನು  ಹೊತ್ತು ಮನೆಗಳಿಗೆ ತರುತಾರೆ.  ಪುರಾಣಗಳಲ್ಲಿ ಹೇಳಿರುವಂತೆ ಯಾರು ಕಾವೇರಿಯ ಪರಮ ಪವಿತ್ರವಾದ ತೀರ್ಥದಲ್ಲಿ ಸ್ನಾನ ಮಾಡುವರೋ ಅವರ ಜನ್ಮಾಂತರ ಪಾಪಗಳೆಲ್ಲ ಪರಿಹಾರವಾಗುವುದು.ಸೂರ್ಯನು ತುಲಾರಾಶಿಯ ಪ್ರವೇಶಿಸುವ ತೀಥೋದ್ಭವದ ಸಮಯದಲ್ಲಿ ತೀರ್ಥಸ್ನಾನ ಮಾಡುವುದರಿಂದ ಆಶ್ವಮೇಧಯಾಗದ ಫಲವು ಹಾಗೂ ಕಾವೇರಿ ಜಲದಲ್ಲಿ  ತಿಂಗಳು ಎಡೆಬಿಡದೆ ಸ್ನಾನ  ಮಾಡುವುದರಿಂದ ಮಂಗಳಕರ ದಿವ್ಯಗತಿಹೊಂದುವರೆಂಬ ನಂಬಿಕೆ ಇದೆ. ತಲಕಾವೇರಿಗೆ ಹೋಗಲು ಸಾಧ್ಯವಾಗದವರು ಹರಿಶ್ಚಂದ್ರ(ಪಾಲೂರು), ಬಲಮುರಿ ಹಾಗೂ  ಗುಯ್ಯ ಮೊದಲಾದ ಸ್ಥಳಗಳಿಗೆ ಹೋಗಿ ಕಾವೇರಿಯಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸುವರು.                  

 ಲೇಖನ - ಪುತ್ತರಿರ  ಕರುಣ್ ಕಾಳಯ್ಯ



ಕಾವೇರಿ ಸಾಗುವ ಹಾದಿ..

ನದಿ ಮೂಲ ಸ್ತೀ ಮೂಲ ಋಷಿಮೂಲ ಕೇಳಬಾರದೆಂಬುದು ವೇದವಾಕ್ಯ. ತಲಕಾವೇರಿಯ ತೀರ್ಥಕುಂಡದಲ್ಲಿ ಹುಟ್ಟಿ ಅನೇಕ ಪುಣ್ಯ ಕ್ಷೇತ್ರಗಳು, ಸುಂದರ ಗಿರಿಶಿಖರ ದಟ್ಟಡವಿಗಳ ನಡುವೆ ಸಾಗುವ ಕಾವೇರಿ ಹರಿಯುತ್ತಾ ಹರಿಯುತ್ತಾ ಹಿರಿದಾಗುತ್ತಾ ಅಗಲಗೊಳ್ಳುತ್ತಾಳೆ. ಸಣ್ಣ ದೊಡ್ಡ ಉಪನದಿಗಳನ್ನು ತನ್ನೊಡನೆ ಸೇರಿಸಿಕೊಂಡು  ಹರಿಯುತ್ತಾ ನೀರಿನ ಸಮುದ್ರವಾಗಿ ಮಾಪರ್ಾಡಾಗುತ್ತಾಳೆ.

 ಭಾಗಮಂಡಲದಿಂದ ಕಾವೇರಿ ಪಶ್ವಿಮಾಭಿಮುಖವಾಗಿ ಅರಬ್ಬೀ ಸಮುದ್ರಕ್ಕೆ ಹರಿದಿದ್ದಲ್ಲಿ ಆಕೆ  ಸುಮಾರು 100-120 ಕಿಲೋಮೀಟರ್  ಸಾಗುವುದರೊಳಗೇ ತನ್ನ ಯಾನ ಮುಗಿಸುತ್ತಿದ್ದಳು. ಆದರೆ, ಕಾವೇರಿ ಪೂವರ್ಾಭಿಮುಖವಾಗಿ ಸುಮಾರು 81,655 ಚದರ ಕಿಲೋಮೀಟರ್  ಹರಿದು ಕನರ್ಾಟಕ ಮತು ತಮಿಳುನಾಡಿಗೆ ಜೀವನದಿಯಾಗಿ ಪ್ರಖ್ಯಾತಿಗೊಂಡಿದ್ದಾಳೆ.  ತಲಕಾವೇರಿಯಿಂದ ಕನರ್ಾಟಕದ ಮೂಲಕ ತಮಿಳುನಾಡಿಗೆ  ಹರಿದು ಕೇರಳವನ್ನು ಸಂಧಿಸಿ ಪುದುಚೇರಿಗೆ ಭೇಟಿ ನೀಡಿ ಬಂಗಾಳ ಸಮುದ್ರ ಸೇರುವ ನದಿ ಕಾವೇರಿ, ಸಾಗುವ ಹಾದಿ ಇದು.

ಪಶ್ಚಿಮ ಘಟ್ಟಗಳ ನಡುವೆ  ಬಳಕುತ್ತ ಸಾಗಿದ ಕಾವೇರಿತಾಯಿಯ ಪ್ರಯಾಣವನ್ನು ವಲಯಗಳ ರೂಪದಲ್ಲಿ ನೋಡಬಹುದು.
ಮೊದಲನೆ ವಲಯ: ಕುಶಾಲನಗರದಿಂದ ಕೃಷ್ಣರಾಜಸಾಗರದವರೆಗೆ (ಹೇಮಾವತಿ, ಲಕ್ಷಣ ತೀರ್ಥ, ಕಾವೇರಿಯ ಸಂಗಮ)
ಎರಡನೆ ವಲಯ: ಕೃಷ್ಣರಾಜಸಾಗರದ ತಿರುಮಕೂಡಲು  (ಕಬಿನಿ, ಕಾವೇರಿಯ ಸಂಗಮ)
ಮೂರನೆ ವಲಯ: ಮೇಕೆದಾಟುವರೆಗೆ  (ಅಕರ್ಾವತಿ, ಶಿಂಷಾ, ಕಾವೇರಿಯ ಸಂಗಮ)
ನಾಲ್ಕನೇ ವಲಯ: ಮೇಕೆದಾಟುವಿನಿಂದ ಮೆಟ್ಟೂರು
ಐದನೇ ವಲಯ: ಮೆಟ್ಟೂರಿನಿಂದ ಕರೂರು (ಭವಾನಿ, ನೋಯಲ್ ಮತ್ತು ಅಮರಾವತಿ, ಕಾವೇರಿ ಸಂಗಮ)
ಆರನೇ ವಲಯ: ಕರೂರಿನಿಂದ ಶ್ರೀರಂಗಂವರೆಗೆ
ಏಳನೇ ವಲಯ: ಶ್ರೀರಂಗಂನಿಂದ ಬಂಗಾಳಕೊಲ್ಲಿವರೆಗೆ.
  ತಲಕಾವೇರಿಯು  ಸಮುದ್ರ ಮಟ್ಟದಿಂದ ಸುಮಾರು 1973 ಅಡಿಗಳಷ್ಟು ಎತ್ತರಕ್ಕಿದೆ. ಪಶ್ಚಿಮ ಘಟ್ಟಗಳ ನಡುವೆ ನಿಂತರೆ ದೂರದ ಬೆಟ್ಟಗಳನ್ನು ಮೋಡಗಳು ಆವರಿಸಿರುವ ರಮ್ಯವಾದ ದೃಶ್ಯ ಕಾಣಿಸುತ್ತದೆ.
  ಕಾವೇರಿಯ ಉಪನದಿಯಾದ ಲಕ್ಷಣ ತೀರ್ಥ ನಾಹರಹೊಳೆಯ ಕಾಡಿನಲ್ಲಿ ಹುಟ್ಟಿ ಹುಣಸೂರಿನ ಮೂಲಕ ಕೃಷ್ಣರಾಜಸಾಗರದತ್ತ ಹರಿದು ಬಂದು ಹಾಸನ, ಕೊಡಗು, ಮೈಸೂರಿನ ಕೃಷಿ ಜೀವನದೊಂದಿಗೆ ಕಾವೇರಿಯ ನಂಟು ಬೆಳೆಸಿಕೊಂಡಿದ್ದಾಳೆ.
  ಕೃಷ್ಣರಾಜಸಾಗರದಿಂದ ಹರಿಯುವ 'ಕಾವೇರಿ' ರಂಗನತಿಟ್ಟು ಅರಣ್ಯಧಾಮದಲ್ಲಿ ಅದೆಷ್ಟೋ ದೇಶದಿಂದ ವಲಸೆ ಬರುವ ಹಕ್ಕಿಗಳಿಗೆ ಆಶ್ರಯ ಕೊಟ್ಟಿದ್ದಾಳೆ. ಶ್ರೀರಂಗಪಟ್ಟಣದ ಮೂಲಕ ಸೋಮನಾಥಪುರ ತಲುಪುವ ಕಾವೇರಿ ನಮಗೆ ಚೆನ್ನಕೇಶವ ದೇವಳದಲ್ಲಿ ಹೊಯ್ಸಳರ ಶಿಲ್ಪ ವೈಭವವನ್ನ ತೋರಿಸಿ ಮುಂದೆ ಸಾಗುತ್ತಾಳೆ. ತಲಕಾಡು ದಾಟಿ ತಿರುಮಕೊಡಲುವಿನಲ್ಲಿ ಕಾವೇರಿ ಕಬಿನಿ ನದಿಯೊಡನೆ ಸಂಗಮವಾಗುತ್ತದೆ. ಆದರೆ ಇಲ್ಲಿಯವರೆಗೂ ಕಾವೇರಿ ಬೃಹತ್ ನಗರಗಳ ಸಂಪರ್ಕವನ್ನು ಮಾಡಿಲ್ಲ.
  ಚಾಮರಾಜನಗರ ಜಿಲ್ಲೆಯಲ್ಲಿ ಸುವರ್ಣವತಿ ನದಿಯ ಜೊತೆ ಕಾವೇರಿ ಸಂಗಮಿಸುತ್ತಾಳೆ. ತಲಕಾಡಿನಿಂದ ಮಳವಳ್ಳಿ ಬಳಿಯಿರುವ ಶಿವನಸಮುದ್ರದ ಕಡೆ ಹರಿಯುವಾಗ ಕಾವೇರಿಯ ಸೊಬಗು ವರ್ಣನೆಗೆ ನಿಲುಕದ್ದು. ಶಿವನಸಮುದ್ರ ಜಲಪಾತವನ್ನು ಗಗನಚುಕ್ಕಿ ಮತ್ತು  ಭರಚುಕ್ಕಿ ಎಂದು ಪ್ರತ್ಯೇಕವಾಗಿ ಕರೆಯಲಾಗುತ್ತದೆ.
  ನಂತರ ತೊರೆಕಾಡನಹಳ್ಳಿಗೆ ಕಾವೇರಿ ಕಾಲುವೆಗಳ ಮೂಲಕ ಹರಿಯುತ್ತಾಳೆ. ತೊರೆಕಾಡನಹಳ್ಳಿಯಿಂದ ದೊಡ್ಡದೊಡ್ಡ ಗಾತ್ರದ ಪೈಪುಗಳ ಮುಖಾಂತರ ಬೆಂಗಳೂರಿಗೆ ನೀರು ಇಂದಿಗೂ ಪೂರೈಕೆಯಾಗುತ್ತಿದೆ.
  ಅಲ್ಲಿಂದ ಮೇಕೆದಾಟು ಮೂಲಕ ಕಾವೇರಿ ಹೊಗೇನಕಲ್ ಪ್ರವೇಶಿಸಿ ನಂತರ ತಮಿಳುನಾಡಿನತ್ತ ತನ್ನ ಹರಿವನ್ನು  ಮುಂದುವರಿಸುತ್ತಾಳೆ.
ತಮಿಳುನಾಡಿನಲ್ಲಿ ಕಾವೇರಿ ಹರಿವು
  ತಮಿಳುನಾಡಿನಲ್ಲಿ ಹೊಗೇನ್ಕಲ್ ಪಟ್ಟಣಕ್ಕೆ ಆಗಮಿಸಿ ಹೊಗೇನ್ಕಲ್ ಜಲಪಾತದಲ್ಲಿ ಜಲಧಾರೆಯಾಗಿ ಹರಿಯುತ್ತಾಳೆ. ಇಲ್ಲಿನ ಉಪನದಿಗಳಾದ ಪಾಲಾರ್, ಚೆನ್ನಾರ್ ಮತ್ತು ತೊಪ್ಪಾರ್ ನದಿಗಳಿಗಾಗಿ ಮೆಟ್ಟೂರು ಅಣೆಕಟ್ಟು ನಿಮರ್ಾಣ ಮಾಡಲಾಗಿದೆ. ಇದು ಕೃಷ್ಣರಾಜಸಾಗರಕ್ಕಿಂತ ಎರಡು ಪಟ್ಟು ದೊಡ್ಡದಾದ ಮೆಟ್ಟೂರು ಅಣೆಕಟ್ಟು ನಿಮರ್ಾಣವಾದದ್ದು ಬ್ರಿಟಿಷ್ ಆಡಳಿತ ಅವಧಿಯಲ್ಲಿ.
  ಮೆಟ್ಟೂರಿನಿಂದ ಕಾವೇರಿ ತನ್ನ ಹರಿವು ಮುಂದುವರಿಸಿದಾಗ ಭವಾನಿ ಪುಣ್ಯಕ್ಷೇತ್ರದಲ್ಲಿ ಕಾವೇರಿ ಮತ್ತು ಭವಾನಿ ನದಿಗಳ ಸಂಗಮವಾಗುತ್ತದೆ. ಕೇರಳದ ಸೈಲೆಂಟ್ ವ್ಯಾಲಿ ಮತ್ತು ಅಟ್ಟಪಡಿ ಗಿರಿ ಶ್ರೇಣಿಗಳ ಮಧ್ಯೆ ಹರಿಯುವ ಭವಾನಿ ನೀಲಗಿರಿಯತ್ತ ಸಾಗುತ್ತಾಳೆ. ಊಟಿ, ಕೂನೂರು ದಾಟಿಕೊಂಡು ಮೆಟ್ಟೂಪಾಳ್ಯಂ ಮೂಲಕ ಭವಾನಿಗೆ ಹರಿಯುತ್ತದೆ.
  ಕರೂರು ಮತ್ತು ಭವಾನಿಯ ಮಧ್ಯೆ ಅಮರಾವತಿ ಮತ್ತು ನೋಯಲ್ ನದಿಗಳು ಕಾವೇರಿಗೆ ಬಂದು ಸೇರುತ್ತದೆ.
ಶ್ರೀರಂಗಂನತ್ತ ಕಾವೇರಿ ಹರಿವು
  ಶ್ರೀವೈಷ್ಣವರ ಪಾಲಿಗೆ ಭೂವೈಕುಂಠ ಎಂದೇ ಶ್ರೀರಂಗಂ ಪ್ರಿಸಿದ್ಧ. ಇಲ್ಲಿಯ ರಂಗನನ್ನು ನೋಡಿದರೆ ಆದಿ, ಮಧ್ಯೆ ಮತ್ತು ಅಂತ್ಯ  ರಂಗನನ್ನು ನೋಡಿದಂತಾಗುತ್ತದೆ. ಇದು ಪ್ರಪಂಚದಲ್ಲಿಯೇ ದೊಡ್ಡ ಹಿಂದೂ ದೇವಲಾಯ. ಈ ದೇವಸ್ಥಾನವನ್ನು ಕಾವೇರಿ ಮತ್ತು ಕೊಲರೂನ್ ನದಿಗಳ ಮಧ್ಯೆ ಇರುವ ದ್ವೀಪದಲ್ಲಿ ದೇವಸ್ಥಾನವನ್ನು ಕಟ್ಟಲಾಗಿದೆ.
  ನಂತರ ತಿರುವಯ್ಯೂರಿನಿಂದ ತಂಜಾವೂರಿನತ್ತ ಕಾವೇರಿ ಸಾಗಿ ಬರುವಾಗ ಒಂದು ಸಾವಿರ ವರ್ಷದ ತಂಜಾವೂರು ಬೃಹಧೀಶ್ವರ ದೇವಾಲಯವು ಕಾಣಸಿಗುತ್ತದೆ. ಸುಮಾರು 256 ಅಡಿ ಎತ್ತರದ ಗೋಪುರದ ನೆರಳು ಎಲ್ಲೂ ಬೀಳದಂತೆ ನಿಮರ್ಿಸಿದ್ದು ವಿಶೇಷ.
  ತಂಜಾವೂರಿನಲ್ಲಿ ಎಲ್ಲಿ ನೋಡಿದರೂ ದೇವರುಗಳ ಗುಡಿಗಳೇ ಕಾಣಸಿಗುತ್ತದೆ. ಅಲ್ಲಿ ಆದಿಕುಂಬೇಶ್ವರ ಮತ್ತು ಶ್ರೀರಂಗಪಾಣಿ ದೇವಸ್ಥಾನಗಳು ಕಾಣಸಿಗುತ್ತವೆ.
  ಅಲ್ಲಿಂದ ಕಾವೇರಿ ಕುಂಭಕೋಣಂ ಪ್ರವೇಶಿಸಿ ಪುಹಾರ್ ಸಾಗರವನ್ನು ಸೇರುತ್ತಾಳೆ. ಪುಹಾರ್ ಎಂಬ ಸ್ಥಳವನ್ನು ಕಾವೇರಿ ಪಟ್ಟಣಂ ಎಂದು ಆಗ ಕರೆಯುತ್ತಿದ್ದರು.
  ಹೀಗೆ ಕಾವೇರಿಯು ತನ್ನ ಲೋಕಕಲ್ಯಾಣಕ್ಕಾಗಿ ಹೊರಟು ಲಕ್ಷಣ ತೀರ್ಥ, ಹೇಮಾವತಿ, ಶಿಂಷಾ ಅರ್ಕವತಿ, ಕಬಿನಿ, ಹಾರಂಗಿ,  ಭವಾನಿ, ನೋಯಲ್, ಅಮರಾವತಿ ನದಿಯು ಸೇರಿದಂತೆ ಅನೇಕ ಉಪನದಿಗಳೊಂದಿಗೆ ಸುಮಾರು 81,155 ಚದರ ಕಿಲೋಮೀಟರ್ ದೂರ ಕ್ರಮಿಸಿ ತನ್ನ ಲೋಕಕಲ್ಯಾಣ ಕಾರ್ಯ ಮುಗಿಸಿ ಅಂತಿಮವಾಗಿ ಬಂಗಾಳಕೊಲ್ಲಿ ಸೇರುತ್ತಾಳೆ.
ರಾಜ್ಯಗಳಲ್ಲಿ ಕಾವೇರಿ ಹರಿವು (ಚದರ ಕಿಲೋಮೀಟರ್ಗಳಲ್ಲಿ)

ಕನರ್ಾಟಕ-34,273 (ಚದರ ಕಿಲೋಮೀಟರ್ಗಳಲ್ಲಿ)
ತಮಿಳುನಾಡು-43,856 (ಚದರ ಕಿಲೋಮೀಟರ್ಗಳಲ್ಲಿ)
ಕೇರಳ-2,866 (ಚದರ ಕಿಲೋಮೀಟರ್ಗಳಲ್ಲಿ)
ಪುದುಚೇರಿ-160 (ಚದರ ಕಿಲೋಮೀಟರ್ಗಳಲ್ಲಿ)

ಲೇಖನ: Adarsh ಅದ್ಕಲೇಗಾರ್.

ಭಾನುವಾರ, ನವೆಂಬರ್ 29, 2015

ಕಾವೇರಿ ನದಿ ಸ್ವಚ್ಚತಾ ಆಂದೋಲನ


 ಕಾವೇರಿ ನದಿಯು ನಿರಂತರವಾಗಿ ಕಲುಷಿತವಾಗುತ್ತಿದೆ. ಇದನ್ನು ಗಂಭೀರ ಸಮಸ್ಯೆ ಎಂದು ಪರಿಗಣಿಸಿದ ಕೊಪ್ಪದ ನಿವಾಸಿ ಚಂದ್ರಮೋಹನ್ ಎಂ.ಎನ್. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಮ್ಮ ಪ್ರಯತ್ನವನ್ನು ಪ್ರಾಮಾಣಿಕವಾಗಿ ಕೈಗೊಂಡಿದ್ದಾರೆ. ಈ ಕುರಿತಾದ ಕಿರು ಮಾಹಿತಿ ಇಲ್ಲಿದೆ.

ಆಂದೋಲನದ ಉದ್ದೇಶ
ಕಾವೇರಿ ನದಿ ಕಲುಷಿತತೆಯನ್ನು ತಪ್ಪಿಸುವುದು, ನದಿಯ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವುದು, ಸಂಘಸಂಸ್ಥೆಗಳು, ಸರಕಾರ, ಸ್ಥಳೀಯ ಆಡಳಿತಗಳ ಸಹಯೋಗದೊಂದಿಗೆ ನದಿ ತಟಗಳಲ್ಲಿ  ವೈವಿಧ್ಯಮಯ ಕಾರ್ಯಕ್ರಮಗಳನ್ನು  ರೂಪಿಸುವುದು, ರಾಜ್ಯ ಸರಕಾರ, ಕೇಂದ್ರ ಸರಕಾರ ಹಾಗೂ ತಮಿಳುನಾಡು ಸರಕಾರದ ಬಳಿ ನಿಯೋಗದೊಂದಿಗೆ ತೆರಳಿ ಮೂಲ ಕಾವೇರಿ ಸೇರಿದಂತೆ ಕೊಡಗು ಜಿಲ್ಲೆಯ ನದಿ ತಟಗಳ ಸಮಸ್ಯೆಯ ಬಗ್ಗೆ ದಾಖಲೆ ಸಹಿತ ಮಾಹಿತಿ ಒದಗಿಸುವುದು.  ಜೊತೆಗೆ ಅಂದಾಜು 850 ಕಿಮೀ ಉದ್ದದ ಕಾವೇರಿ ನದಿಯ ತಟಗಳಲ್ಲಿ  ನದಿಯ ಕಲುಷಿತತೆಗೆ ಕಾರಣವಾಗಿರುವ ಕಾಖರ್ಾನೆ, ಅಕ್ರಮ ಮರಳು ದಂಧೆ, ಹೋಟೆಲ್, ರೆಸಾಟರ್್, ಹೋಂಸ್ಟೇ ಇತ್ಯಾದಿಗಳಿಂದ ತ್ಯಾಜ್ಯ ನೇರವಾಗಿ ಸೇರದಂತೆ ಸರಕಾರದ ಮೂಲಕ ಕಾಯ್ದೆ ರೂಪಿಸುವಂತೆ ಒತ್ತಾಯಿಸುವುದು. ಹಾಗೂ ಆ ಕಾಯ್ದೆಯ ಅನುಷ್ಠಾನಕ್ಕೆ ತರುವಂತೆ  ಕೇಂದ್ರ ಮತ್ತು  ನದಿ ಹರಿಯುವ ರಾಜ್ಯ ಸರಕಾರಗಳಿಗೆ ವಿಭಿನ್ನ ರೀತಿಯಲ್ಲಿ ಒತ್ತಾಯ ಹೇರುವುದು. ಕೊಡಗು ಜಿಲ್ಲೆಯ ಕೇಂದ್ರ ಸ್ಥಾನವಾದ ಮಡಿಕೇರಿ ಪಟ್ಟಣಕ್ಕೆ ಕಾವೇರಿ ಕುಡಿವ ನೀರು ಯೋಜನೆಗೆ ಸರಕಾರದ ಮೂಲಕ ಆಗ್ರಹಿಸುವುದು. ಗಂಗಾ ನದಿ ಮಾದರಿಯಂತೆ ಕಾವೇರಿ ನದಿಗೆ ಖಾಸಗಿ ಸಹಭಾಗಿತ್ವದೊಂದಿಗೆ ಹಲವು ಯೋಜನೆಗಳನ್ನು ರೂಪಿಸುವುದು.  ಕಾವೇರಿ ನದಿ ನೀರು ಬಳಕೆ ಮಾಡುವ ಬೃಹತ್ ಪಟ್ಟಣಗಳ ಜನರಿಂದ ನದಿ ಶುದ್ಧೀಕರಣ ನಿಧಿ ಸ್ಥಾಪಿಸುವುದು.  ನದಿ ತಟಗಳ ಅಭಿವೃದ್ಧಿಗೆ ಸರಕಾರದ ಮೂಲಕ ಒತ್ತಾಯಿಸುವುದು ಸೇರಿದಂತೆ ಇಂತಹ ಹಲವು ಉದ್ದೇಶಗಳನ್ನು ಹೊಂದಿದೆ.

5 ವರ್ಷಗಳಿಂದ ಕಾರ್ಯ ನಿರ್ವಹಣೆ.

ಕಾವೇರಿ ನದಿ ಜಾಗೃತಿ ತೀರ್ಥಯಾತ್ರೆಯ ಸಾಧುಸಂತರ  ಮಾರ್ಗದರ್ಶನದಂತೆ ನದಿ ಸ್ವಚ್ಚತೆ ಅಭಿಯಾನಕ್ಕೆ 2011 ರಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು. 

ಕೊಡಗು ಜಿಲ್ಲೆಯ ತಲಕಾವೇರಿಯಿಂದ ತಮಿಳುನಾಡು ಪೂಂಪ್ಹರ್ ಬಳಿ ಕಾವೇರಿ ನದಿ ಬಂಗಾಳಕೊಲ್ಲಿ ಸೇರುವತನಕ 2014ರಲ್ಲಿ ನದಿ ತಟಗಳ ಸವರ್ೆ ಕಾರ್ಯ ನಡೆದಿದೆ. ಶಾಲಾ ಮಕ್ಕಳ ಮೂಲಕ ನದಿ ಸ್ವಚ್ಚತಾ ಅಭಿಯಾನಕ್ಕೆ ಕಾರ್ಯಕ್ರಮಗಳು-ಒಟ್ಟಾರೆ ಕಾವೇರಿ ನದಿ ತಟಕ್ಕೆ ಬಾಟಲ್ ನೀರು ತಪ್ಪಿಸಿ ನದಿ ನೀರನ್ನು ನೇರವಾಗಿ ಬಳಸಲು ಅವಕಾಶವಾಗುವಂತೆ ನದಿ ತಟಗಳ ನಿಮರ್ಾಣ ಮಾಡುವುದು.



ಕಾವೇರಿ-ಕೊಡವರ ಅವಿನಾಭಾವ ಸಂಬಂಧ

  
ವೇದಕಾಲದಲ್ಲಿ ಮರುದ್ವೈದೆ ಎಂದು ಪ್ರಸಿದ್ಧಳಾಗಿದ್ದ ಕಾವೇರಿಯ ಮಧ್ಯಭಾಗವು ಶ್ರೀಮನ್ನಾರಾಯಣನ ಶಯನ ಸ್ಥಾನವಾಗಿದೆ. ಮೂಲಭಾಗ ಅಥವಾ ತಲೆಯ ಭಾಗವು ಬ್ರಹ್ಮನಿಂದ ಆಶ್ರಿತವಾಗಿದೆ. ಕಾವೇರಿ ಹರಿಯುವ ದಂಡೆಗಳು ಶಿವಲಿಂಗಗಳಿಂದ ಆವೃತವಾಗಿದೆ. ತೀರ್ಥಸ್ವರೂಪಿಣಿಯಾದ ಕಾವೇರಿಯೇ ಕೊಡವರ ಕುಲದೇವತೆ. ತಾಯಿಯ ಜಲರೂಪವನ್ನು ತೀರ್ಥರೂಪಿಣಿಯಾಗಿಯೇ ಕೊಡವರು ಇಂದಿಗೂ ಆರಾಧಿಸುತ್ತಾ ಬಂದಿರುತ್ತಾರೆ.

ಜೀವಜಲ 
ಈ ಸೃಷ್ಠಿಯಲ್ಲಿ ಈ ಭೂದೇವಿಯ ಒಡಲಿನಲ್ಲಿ ಜಲವಿಲ್ಲವೆಂದರೆ ಜೀವಿಗಳು ಉಳಿಯಲು ಸಾಧ್ಯವೇ? ಈ ಭೂಮಿಯಷ್ಟೇ ಮುಖ್ಯ ಜೀವಜಲವೆಂಬ ಜ್ಞಾನ ಕೊಡವ ಹಿರಿಯರಿಗೆ ಇದ್ದುದರಿಂದಲೇ ತೀರ್ಥರೂಪಿಣಿಯಾದ ಕಾವೇರಿಗೆ ಇಂದಿಗೂ ಕೊಡವರು ತಲೆಬಾಗುವರು. ಮುಂಜಾನೆ ಕೊಡವತಿಯರು ಎದ್ದು ಶುಚಿಭರ್ೂತರಾಗಿ "ನೆಲ್ಲಕ್ಕಿ ಬೊಳ್ಚ" (ನಡುಮನೆ ದೀಪ) ಹಚ್ಚಿ ಕೂವ(ಬಾವಿ)ಕ್ಕೆ ಹೋಗಿ ಹೊಸ ನೀರು ತರುತ್ತಾರೆ. ಮೊದಲಿಗೆ ಬಂದು ಚೆಂಬು ನೀರನ್ನು ಮನೆಯ ಸಿಂಹಾದ್ವಾರದ ಎಡಭಾಗದಲ್ಲಿ ಇಡುವರು. ಮನೆಗೆ ಬರುವ ನೆಂಟರಿಸ್ಟರು ಆ ಚೊಂಬಲ್ಲಿರುವ ನೀರನ್ನು ಕೈಯಲ್ಲಿ ಮುಟ್ಟಿಯೇ ಒಳಕ್ಕೆ ಕಾಲಿಡಬೇಕೆಂದು ಪದ್ಧತಿ ಕೊಡವರಲ್ಲಿ ಇಂದಿಗೂ ಇದೆ. ಅಂದರೆ, ಮನೆಯ ಮುಂದೆ ನಿತ್ಯವೂ ಇಟ್ಟಿರುವ ಚೆಂಬಿನ ಜಲದಲ್ಲಿ ಕಾವೇರಿ ತಾಯಿಯನ್ನು ಕಾಣುವರು ಕೊಡವರು. ಒಳಗೆ ಬರುವ ನೆಂಟರಿಸ್ಟರು ಕಾವೇರಿ ತಾಯಿಯನ್ನು ಪ್ರಾಥರ್ಿಸಿ, ಕೆಟ್ಟ ಮನಸ್ಸನ್ನು ಬಿಟ್ಟು ಒಳ್ಳೆಯ ಮನಸ್ಸಿನಿಂದ ಮನೆಯೊಳಗೆ ಕಾಲಿಡಬೇಕೆಂಬ ಆಶಯವಿದೆ. ಮನೆಗೆ ಬಂದ ನೆಂಟರಿಸ್ಟರನ್ನು ಚೆಂಬಿನಲ್ಲಿ  ನೀರು ಹಿಡಿದು "ಬಂದಿರಾ" ಎಂದು ಮನೆಯೊಡತಿ ಆಹ್ವಾನಿಸುತ್ತಾಳೆ. ಗಂಡು ತಾನು ಮದುವೆಯಾಗಲು ವಧುವನ್ನು ನೋಡಲು ಹೋದಾಗ "ಇಂದ್ ನೀರ್ ಬೆಚ್ಚೋಲೆ ಎಂದೂ ನೀರ್ ಬೆಪ್ಪೇಂಗಿ, ಬೆಚ್ಚ ನೀರೆಡ್ಪಿನೋ, ಮೇಲೆ ನೀರ್ ಕೇಪಿನೋ" ಇವತ್ತು ನೀರು ಇದ್ದಂತೆ ನನಗೆ ದಿನನಿತ್ಯವೂ ನೀನು ನೀರು ಇಡುವುದಾದರೆ ನೀನಿಟ್ಟ ನೀರನ್ನು ತೆಗೆದುಕೊಳ್ಳುತ್ತೇನೆ. ಇನ್ನೂ ಹೆಚ್ಚಿಗೆ ನೀರನ್ನು ಕೇಳುತ್ತೇನೆ ಎಂದು ವರ ಹೇಳಿದರೆ, "ಉಯಿ ಅಂದರೆ ಬೆಂದುವೇ, ಇಂದ್ ಬಂದ ನಿಂಗಳೋ, ಎಂದೂ ನಿಂಗ ಬಂದಿನೊ, ಎಂದೂ ನೀರ್ ಬೆಪ್ಪಿನೋ" ಅಯ್ಯೋ ಹಾಗಾದರೆ ಬಂಧುವೆ ಇವತ್ತು ಬಂದ ಹಾಗೆ ನಿತ್ಯವೂ ನೀವು ಬರುವುದಾದರೆ, ನಿತ್ಯವು ನಾನು ನಿಮಗೆ ನೀರಿಡುತ್ತೇನೆ ಅನ್ನುತ್ತಾಳೆ ಆಕೆ.
ಮದುವೆ ಮುಹೂರ್ತ ಕಳೆದು ಗಂಡನ ಮನೆಗೆ ಬಂದ ವಧುವನ್ನು ಮೊದಲಿಗೆ ಭೂದೇವಿಗೆ ಗೊಬ್ಬರ ಹಾಕಲು ಮುತೈದೆಯರೊಡನೆ ಕಳಿಸುತ್ತಾರೆ. ಗೊಬ್ಬರ ಹಾಕಿ ಬರುವಾಗ ಮುತೈದೆಯರೊಡಗೂಡಿ ಪವಿತ್ರವಾದ ಜಲವನ್ನು ಪೂಜಿಸಿ, ವಂದಿಸಿ, ತೀರ್ಥರೂಪಿಣಿಯಾದ ಕಾವೇರಿಯನ್ನು ತಾನು ಏರಿದ ಮನೆಗೆ ತರುವುದೇ ಮೊದಲ ಶಾಸ್ತ್ರವಾಗಿದೆ. ಇದನ್ನು "ನೀರ್ ಚಾಣ ಕಯಿಪೊ" ಎನ್ನುತ್ತಾರೆ. ಕೊಡವರ ಮದುವೆ ಮೊದಲಾದ ಸಮಾರಂಭಗಳಲ್ಲೂ ಮನೆಯೊಡತಿ ಚೆಂಬಿನಲ್ಲಿ ನೀರು ಹಿಡಿದು ಊಟಕ್ಕೆ ಏಳಿರಿ ಎಂದು ಬಂದವರನ್ನು ಸತ್ಕರಿಸುತ್ತಾಳೆ.
ಕೊಡವತಿಯರ ವಿಶಿಷ್ಟವಾದ ಸೀರೆಯಲ್ಲೂ ಇದ್ದಾಳೆ ಕಾವೇರಿ...! ಪಾರ್ವತಿ ಭಕ್ತರಾದ ಚಂದ್ರವಂಶಸ್ಥರೂ, ಸತ್ಯವಂತರೂ, ನಿಷ್ಟಾವಂತರೂ ಆದ ಕೊಡವರಿಗೆ ಕಾವೇರಿ ಮಾತೆ ಆಗಸ್ತ್ಯಋಷಿಯ ಕಮಂಡಲುವಿನಿಂದ ಹೊರಬರುವ ಏಳು ದಿನಗಳಿಗೆ ಮುಂಚಿತವಾಗಿಯೇ ಕಾವೇರಿ ತಾಯಿಯ ಸ್ವಪ್ನ ದರ್ಶನವಿತ್ತು ತುಲಾ ಸಂಕ್ರಮಣ ಕಾಲದಲ್ಲಿ ವಲಂಬುರಿ(ಇಂದಿನ ಬಲಮುರಿ) ಕೊಡವರಿಗೆ ಕಾವೇರಿಯನ್ನು ಕಾಯಲು ಹೇಳುತ್ತಾಳೆ. ಪಾರ್ವತಿ ದೇವಿಯ ಆಜ್ಞೆಯಂತೆ ಕೊಡವ-ಕೊಡವತಿಯರು, ಮಕ್ಕಳೊಂದಿಗೆ ಅತ್ಯಂತ ಕೋಲಾಹಲದಿಂದ 18 ತರಹದ ವಾದ್ಯಗೋಷ್ಠಿಯೊಂದಿಗೆ ಬಲಮುರಿಗೆ ಹೋಗಿ ಕಾಯುತ್ತಿರುವರು. ತೀರ್ಥರೂಪಿಣಿಯಾದ ಕಾವೇರಿಯ ರಭಸಕ್ಕೆ (ಕಾವೇರಿಯನ್ನು) ಕಾಯುತ್ತಿದ್ದ ಕೊಡವತಿಯರ ಸೀರೆಯ ನೆರಿಗೆಗಳು ಹಿಂದಕ್ಕೆ ತಿರುಗಿದರೂ, ಲೆಕ್ಕಿಸದೆ ಅಲ್ಲೇ ಕಾವೇರಿತಾಯಿಯ ಧ್ಯಾನದಲ್ಲಿ ಮೈಮರೆತ ಕೊಡವತಿಯರಿಗೆ ಕಾವೇರಿ ತಾಯಿಯು ಆಶರ್ೀವಾದಿಸಿ ವರ ನೀಡುತ್ತಾಳೆ. "ಇಂದು ನನ್ನ ರಭಸಕ್ಕೆ ತಿರುಗಿದ ಸೀರೆಯ ನೆರಿಗೆ ನನ್ನ ಮಕ್ಕಳೆಂಬ ಗುರುತಿಗಾಗಿ ಹಾಗೆಯೇ ಇರಲಿ. ಮುಂದೆ ಇಟ್ಟ ನೆರಿಗೆಯನ್ನು ಹಿಂದಕ್ಕೂ, ಹಿಂದೆ ಬಿಟ್ಟ ಸೆರಗನ್ನು ಮುಂದಕ್ಕೆ ಕಟ್ಟಿಕೊಳ್ಳಿ" ಎಂದು ಹೇಳಿ ತಾನೂ ಎಡದಿಂದ ಬಲಕ್ಕೆ ಬಹು ವಿಸ್ತಾರವಾಗಿ ಸುತ್ತಿಕೊಂಡು ಹೊರಟಳೆಂಬುದು ಇತಿಹಾಸದಲ್ಲಿ ದಾಖಲಿಸಲ್ಪಟ್ಟಿದೆ.  ಇದರ ಸೂಚಕವೆಂಬಂತೆ ಎಡದಿಂದ ಬಲಕ್ಕೆ ನೀರಿನ ಸುಳಿರೂಪದಲ್ಲಿ ಕಾವೇರಿಯ ತಾಯಿಯ ಪ್ರದಕ್ಷಿಣೆಯನ್ನು ಇಂದಿಗೂ ನಾವು ಬಲಮುರಿಯ ಸೇತುವೆಯ ಕೆಳಭಾಗದಲ್ಲಿ ಕಾಣಬಹುದು.
  ಕೊಡವರ ಸಾಂಪ್ರಾದಾಯಿಕ ಆಭರಣವಾದ ಕೊಕ್ಕೆತಾತಿಯಲ್ಲೂ ಇದ್ದಾಳೆ ಕೊಡವರ ಕುಲದೇವತೆಯಾದ ಕಾವೇರಿ. ವೇದಕಾಲಗಳಲ್ಲಿ ಜಲ (ನೀರನ್ನು)ಅರ್ಧಚಂದ್ರಾಕಾರದ ರೇಖಾಚಿತ್ರಗಳಲ್ಲಿ ಸೂಚಿಸುತ್ತಿದ್ದರು. ಅದುದ್ದರಿಂದಲೇ ಜಲರೂಪದ ಕಾವೇರಿಯನ್ನು ಕೊಕ್ಕೆತಾತಿಯ ರೂಪದಲ್ಲಿ ಎಲ್ಲಾ ಶುಭಾಶುಭ ಕಾರ್ಯಗಳಲ್ಲೂ ಕೊಡವ-ಕೊಡವತಿಯರು ಯಾವ ಬೇಧವಿಲ್ಲದೆ ಧರಿಸುತ್ತಾರೆ. ಕೊಡವರ ಪೀಚೆಕತ್ತಿಯಲ್ಲೂ ಸೂರ್ಯ, ಚಂದ್ರರ ಚಿತ್ರವಿರುತ್ತದೆ. ಬಹಳ ಹಿಂದೆ ಕೊಡವತಿಯರೂ ಪೀಚೆಕತ್ತಿ ಧರಿಸುತ್ತಿದ್ದರಂತೆ.  "ಕೊಡವ ಪೊಡಿಯ" ಕೊಡವತಿ ಸೀರೆ ಉಟ್ಟ ನಂತರ ಅವರ ಬಲದ ಬದಿಯಲ್ಲಿ ಪೀಚೆಕತ್ತಿ ಇಡಲು ಸ್ಥಳಾವಕಾಶ ಇದೆ. ತಮ್ಮ ಹಿರಿಯರು ಪೀಚೆಕತ್ತಿ ಧರಿಸುತ್ತಿದ್ದರೆಂಬ ಇತಿಹಾಸದ ಸೂಚಕವೆಂಬಂತೆ ಇಂದಿಗೂ ಕೊಡವತಿಯರು ಆಗಾಗ ತಮ್ಮ ಸೆರಗು ಸರಿಪಡಿಸಿಕೊಳ್ಳುವ ನೆಪದಲ್ಲಿ ಪೀಚೆಕತ್ತಿ ಇದೆಯೇ ಎಂದು ನೋಡಿಕೊಳ್ಳುವುದನ್ನು ನೀವು ಸಭೆ ಸಮಾರಂಭಗಳಲ್ಲಿ ನೋಡಿರಲೂಬಹುದು...!
  ಕೊಡವರು "ನೆಲ್ಲಕ್ಕಿ ಬೊಳಚ" (ನಡುಮನೆ ದೀಪ)ಕ್ಕೆ ಅಕ್ಷತೆ ಹಾಕಿ ಕಾವೇರಿ ಮಾತೆಯನ್ನು ಪ್ರಾಥರ್ಿಸಿಯೇ ತಮ್ಮ ಎಲ್ಲಾ ಶುಭಾಶುಭ ಕಾರ್ಯಗಳಿಗೆ ತೊಡಗುವರು.
ಹಿಂದಿನ ಕಾಲದಲ್ಲಿ ಏನಾದರೂ ತಪ್ಪು ಮಾಡಿ ಆ ಕೊಡವ ಶಿಕ್ಷೆಗೆ ಒಳಗಾಗಿದ್ದರೆ, ಶಿಕ್ಷೆ ಮುಗಿದ ಮೇಲೆ ಅವನು ಕಾವೇರಿಗೆ ಹೋಗಿ ಪುಣ್ಯಸ್ನಾನ ಮಾಡಿ ಬರಬೇಕಿತ್ತು. ಕಾವೇರಿ ಸ್ನಾನ ಮಾಡಿ ಮೇಲೆ ಶಿಕ್ಷೆಗೊಳಗಾದವನನ್ನು ಎಲ್ಲರೂ ಎಂದಿನಂತೆ ಸ್ವೀಕರಿಸುತ್ತಿದ್ದರು.  ಹೀಗೆ ತಪ್ಪು ಮಾಡಿದವರನ್ನು ಇಂತಿಷ್ಟು ದಿನ "ಪರಂಬಡಿ ಬೆಪ್ಪ" (ಊರಿನಿಂದ ಪ್ರತ್ಯೇಕವಾಗಿರಿಸುವ) ಪದ್ಧತಿ ಇತ್ತು.
 ಕುಟುಂಬದ ಹಿರಿಯರು ಕೊನೆ ಉಸಿರೆಳೆಯುವ ಸಂದರ್ಭದಲ್ಲಿ ಕಾವೇರಿ ತೀರ್ಥವನ್ನು ಚಿನ್ನದ ಚಿಕ್ಕ ತುಣುಕಿನೊಂದಿಗೆ ಬಾಯಿಗೆ ಹಾಕುವುದು ಕೊಡವರ ಪದ್ಧತಿಯಾಗಿದೆ. ಜೊತೆಗೆ ತೆಂಗಿನಕಾಯಿ ಒಡೆದು ಆ ನೀರನ್ನು ಬಾಯಿಗೆ ಹಾಕುತ್ತಾರೆ.
ಹೆಣ್ಣು ಮಕ್ಕಳು ಬಾಣಂತನ ಮುಗಿಸಿ ತವರು ಮನೆಯಿಂದ ತನ್ನ ಗಂಡನ ಮನೆಗೆ ಹೋಗುವಾಗ ಜಲರೂಪಿಣಿಯಾದ ಕಾವೇರಿಯನ್ನು ತನ್ನ ತವರು ಮನೆಯ ಕೊವ(ಬಾವಿ)ದಲ್ಲಿ ಪ್ರಾಥರ್ಿಸಿ, ಆರಾಧಿಸಿ ತೀರ್ಥರೂಪಿಣಿಯಾದ ಕಾವೇರಿಯನ್ನು ಮನೆಗೆ ತಲೆಯಲ್ಲಿ ಹೊತ್ತು ತಂದ ನಂತರವೇ ಬಾಣಂತಿಯು ತನ್ನ ಮಗುವಿನೊಡನೆ ಗಂಡನ ಮನೆಗೆ ತೆರಳುವುದು ವಾಡಿಕೆ.
  ಸಹ್ಯಾದ್ರಿಯಲ್ಲಿ ಉದಿಸಿ ವೇದ ಕಾಲದಲ್ಲಿ ಮರುದ್ವೈದೆ ಎಂದು ಪ್ರತೀತವಾದ ಕಾವೇರಿ ತಾಯಿಯ ಅನೇಕ ಶ್ಲೋಕಗಳಲ್ಲಿ  ಉಕ್ತವಾಗಿದ್ದಾಳೆ. ಕಾವೇರಿ ಮಹಿಮೆಯು ವಾಲ್ಮೀಕಿ ರಾಮಾಯಣದಲ್ಲೂ, ವ್ಯಾಸಭಾರತದಲ್ಲೂ ಉಕ್ತವಾಗಿದೆ. ಕಾವೇರಿಯು ಗಂಗೆಗಿಂತ ಹಿರಿಯಳು! ಹಿಮಾಲಯ ಅರಬ್ಬೀ ಸಮುದ್ರಗಳಿಲ್ಲದ ಕಾಲದಲ್ಲೇ ಕಾವೇರಿಯು ಇದ್ದಳು. ಕಾವೇರಿಯು ಆಫ್ರಿಕಾದ ಮಡಗಾಸ್ಕರ್ತನಕ ಹರಿಯುತ್ತಿದ್ದಳು ಎಂಬ ಇತಿಹಾಸದ ಸೂಚಕವೇ ನಮ್ಮ ಕುಂದತ್ ಬೊಟ್ಟ್ ಹಬ್ಬ. ಆಫ್ರಿಕಾದಲ್ಲಿ ಇಂದಿಗೂ ಮಹಾಜಂಘಾ ಎಂಬ ನೆಲೆ-ಕೊಡಗಿನ ಮಹಾಂತೋಡ್ನ ಹೆಸರು. ಮಾನವ ವಿಕಾಸವು ಆಫ್ರಿಕಾದಲ್ಲಿ ಮಾತ್ರವಲ್ಲ ಏಷ್ಯಾ ಖಂಡದಲ್ಲೂ ಮಾನವ ವಿಕಾಸವಾಗಿದೆ ಎಂದು ಲಂಡನ್, ಸ್ವೀಡನ್ನ ಕೆಲವು ವಿಶ್ವವಿದ್ಯಾನಿಲಯಗಳು ಅಭಿಪ್ರಾಯ ಪಟ್ಟಿದೆ. ಅಂದರೆ ಸ್ಕಂದಪುರಾಣದಲ್ಲಿ ಉಲ್ಲೇಖವಾಗಿರುವಂತೆ ಕೊಡವರು ಕಾವೇರಿ ಹುಟ್ಟುವ ಮೊದಲೇ ಕೊಡಗಿನಲ್ಲಿದ್ದರೆಂಬುದು. ಬರೀ ಪುರಾಣದ ಕಟ್ಟು ಕಥೆಯಲ್ಲ. ಅದು ಇತಿಹಾಸವೆಂಬುದು ನಾವಿಲ್ಲಿ ತಿಳಿಯಬಹುದು.
  ಕೊಡವರು ತಮ್ಮ ಕುಲದೇವಿಯಾದ ಕಾವೇರಿಯಮ್ಮೆಯನ್ನು ಭಕ್ತಿಯಿಂದ ನೆನೆಸಿಕೊಂಡು ಅವಳನ್ನು ನಂಬಿ ಬದುಕಿದರೆ ಒಳಿತಾಗುವುದೆಂಬ ವರವೂ ಕೊಡವರಿಗಿದೆ ಎಂಬ ಪ್ರತೀತಿ ಇದೆ. ಹೀಗೆ ಕೊಡವರ ಕುಲದೇವತೆಯಾದ ಕಾವೇರಿಯ ಅವಿನಾಭಾವ ಸಂಬಂಧವನ್ನು ತೆರೆದಷ್ಟು ಬಿಚ್ಚಿಕೊಳ್ಳುತ್ತದೆ. ಆ ಪವಿತ್ರವಾದ ಸಂಬಂಧವನ್ನು ಬರೆದು ವಣರ್ಿಸಿ ಮುಗಿಸಲು ಸಾಧ್ಯವೇ?
  ಚಂದ್ರಾರ್ಕರಿರುವ ತನಕ ಈ ಭೂಮಿಯಲ್ಲಿ ಕಾವೇರಿಯು ಸ್ಥಿರವಾಗಿರಲಿ... ಆಕೆಗೆ ಜಯವಾಗಲಿ...  ಆಕೆಯ ನಾಮ ಸ್ಮರಣೆಯು ಎಲ್ಲರ ನಾಲಿಗೆಯಿಂದ ಮೊಳಗಲಿ ಎನ್ನುತ್ತಾ....
ಲೇಖನ: ಕರೋಟಿರ ಶಶಿ ಸುಬ್ರಮಣಿ
------------------

Pudiyodi There in Kakkabe , Kodagu.

https://kaveridarashin.blogspot.com/2015/11/blog-post_43.html